ಹಮಾಸ್ ಸೈನ್ಯ ಮುಖ್ಯಸ್ಥನ ತಂದೆ ಮತ್ತು ಸಹೋದರ ಇಸ್ರೇಲ್ ದಾಳಿಯಲ್ಲಿ ಹತ !

ಗಾಝಾ ಪಟ್ಟಿ (ಪ್ಯಾಲೆಸ್ಟೈನ್) – ಇಸ್ರೆಲ್ ನ ಸೈನ್ಯವು ಅಕ್ಟೋಬರ್ ೧೧ ರಂದು ಗಾಝಾ ಪಟ್ಟಿಯಲ್ಲಿನ ಅಲ್ ಫುರಕಾನ್ ಪ್ರದೇಶದಲ್ಲಿ ದಾಳಿ ಮಾಡುತ್ತಾ ಹಮಾಸದ ಸೈನ್ಯ ಪ್ರಮುಖ ಮಹಮ್ಮದ್ ದೀಫನ ತಂದೆಯ ಮನೆಯನ್ನು ಗುರಿ ಮಾಡಿದರು. ಈ ದಾಳಿಯಲ್ಲಿ ದಿಫನ ತಂದೆ, ಸಹೋದರ ಮತ್ತು ಮಕ್ಕಳ ಸಹಿತ ಕುಟುಂಬದಲ್ಲಿನ ಇತರ ಸದಸ್ಯರು ಕೂಡ ಹತರಾದರು, ಎಂದು ಇಸ್ರೆಲ್ ಸೈನ್ಯವು ಮಾಹಿತಿ ನೀಡಿದೆ.

ಮಹಮ್ಮದ್ ದಿಫ ಇವನು ಅಂಗವಿಕಲನಾಗಿದ್ದು ೨೦೦೨ ರಿಂದ ಹಮಾಸ್ ಸೈನ್ಯದ ಮುಖ್ಯಸ್ಥನಾಗಿದ್ದಾನೆ ಹಾಗೂ ಇಸ್ರೆಲ್ ನ ‘ಮೋಸ್ಟ್ ವಾಂಟೆಡ್’ ಭಯೋತ್ಪಾದಕನಾಗಿದ್ದಾನೆ. ಇಸ್ರೆಲ್ ನ ಗೂಢಚಾರ ಸಂಘಟನೆ ‘ಮೋಸಾದ’ದಿಂದ ಅವನಿಗೆ ಇಲ್ಲಿಯವರೆಗೆ ಅನೇಕ ಬಾರಿ ಕೊಲ್ಲುವ ಪ್ರಯತ್ನ ಮಾಡಿದೆ ಆದರೆ ಅವರಿಗೆ ಯಶಸ್ಸು ದೊರೆತಿಲ್ಲ.