ಆರ್ಥಿಕ ದುರ್ಬಳಕೆ ಮಾಡಿದ್ದರಿಂದ ಕ್ರಮ
ನವ ದೆಹಲಿ – ಮೊಬೈಲ ತಯಾರಿಸುವ ಚೀನಿ ಕಂಪನಿ `ವಿವೊ’ ದ ವ್ಯವಸ್ಥಾಪಕ ನಿರ್ದೇಶಕರಾದ ಹರಿಓಮ್ ರಾಯ್ ಸಹಿತ 4 ಜನರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಬಂಧಿತರಲ್ಲಿ ಒಬ್ಬ ಚೀನಿ ನಾಗರಿಕ ಮತ್ತು ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಸೇರಿದ್ದಾರೆ. ಭಾರತದಲ್ಲಿ ತೆರಿಗೆ ಪಾವತಿಸುವುದನ್ನು ತಪ್ಪಿಸಲು ‘ವಿವೋ’ ನಿಂದ 62 ಸಾವಿರದ 476 ಕೋಟಿ ರೂಪಾಯಿಗಳನ್ನು ಚೀನಾಕ್ಕೆ ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ಇಡಿ ಹೇಳಿದೆ.
2018 ಮತ್ತು 2021 ರ ನಡುವೆ, ಭಾರತವನ್ನು ತೊರೆದು ತಮ್ಮ ದೇಶಕ್ಕೆ ಹಿಂದಿರುಗಿದ 3 ಚೀನೀ ಪ್ರಜೆಗಳು ಮತ್ತು ಚೀನಾದಲ್ಲಿಯೇ ವಾಸಿಸುವ ಒಬ್ಬರು ಭಾರತದಲ್ಲಿ 23 ವಿಭಿನ್ನ ಸಂಸ್ಥೆಗಳನ್ನು ಸ್ಥಾಪಿಸಿದರು. ಈ ಸಂಸ್ಥೆಗಳು ‘ವಿವೋ’ ಖಾತೆಗೆ ಭಾರಿ ಮೊತ್ತವನ್ನು ನೀಡಿತ್ತು. ತದ ನಂತರ, ಮಾರಾಟದಿಂದ ಬಂದ 1 ಲಕ್ಷದ 25 ಸಾವಿರದ 185 ಕೋಟಿ ರೂಪಾಯಿಗಳಲ್ಲಿ 62 ಸಾವಿರದ 476 ಕೋಟಿ ರೂಪಾಯಿಗಳನ್ನು ಮುಖ್ಯವಾಗಿ ಚೀನಾಕ್ಕೆ ಹಸ್ತಾಂತರಿಸಲಾಯಿತು. ಕಂಪನಿಗೆ ಭಾರಿ ನಷ್ಟವಾಗಿದೆ ಎಂದು ತೋರಿಸಿ ತೆರಿಗೆಯಿಂದ ಸವಲತ್ತು ಪಡೆಯಲು ಈ ಎಲ್ಲ ಕೃತ್ಯಗಳನ್ನು ಮಾಡಲಾಗಿದೆಯೆಂದು ಇಡಿ ಸ್ಪಷ್ಟ ಪಡಿಸಿದೆ.
ಸಂಪಾದಕೀಯ ನಿಲುವುಮೋಸಗಾರ ಚೀನಿ ಕಂಪನಿಗಳನ್ನು ಭಾರತದಲ್ಲಿ ನಿಷೇಧಿಸಿ, ಅವರ ಎಲ್ಲಾ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕಬೇಕು ! |