ದೇಶಹಿತಕ್ಕೆ ಪ್ರಾಧಾನ್ಯತೆಯನ್ನು ನೀಡುವ ಪ್ರಯಾಗರಾಜ (ಉತ್ತರಪ್ರದೇಶ) ಉಚ್ಚ ನ್ಯಾಯಾಲಯದ ತೀರ್ಪು !

೧. ದೇಶದ ವಿರುದ್ಧ ಯುದ್ಧ ಸಾರಿದ ಪ್ರಕರಣದಲ್ಲಿ ಮತಾಂಧ ಆರೋಪಿಯ ಬಂಧನ

‘ಪ್ರಯಾಗರಾಜ ಉಚ್ಚ ನ್ಯಾಯಾಲಯವು ಮತಾಂಧ ಇನಾಮುಲ ಹಕ್‌ ಊರ್ಫ್ ಇನಾಮೂಲ ಇಮ್ತಿಯಾಜನಿಗೆ ಜಾಮೀನು ನಿರಾಕರಿಸಿತು. ೧೪.೩.೨೦೨೨ ರಂದು ಪೊಲೀಸರು ಅವನನ್ನು ಪೊಲೀಸ್‌ ಕಸ್ಟಡಿಯಲ್ಲಿ ತೆಗೆದುಕೊಂಡು ಅವನ ವಿರುದ್ಧ ಕ್ರಿಮಿನಲ್‌ ಖಟ್ಲೆ ದಾಖಲಿಸಿದರು. ಅವನ ವಿರುದ್ಧ ‘ಭಾರತ ಸರಕಾರದ ವಿರುದ್ಧ ಯುದ್ಧ ಸಾರುವುದು, ಜಾತಿ-ಧರ್ಮಗಳ ಆಧಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಭಂಗವಾಗುವಂತಹ ಅಪಪ್ರಚಾರಗಳನ್ನು ಮಾಡುವುದು, ಎರಡು ಧರ್ಮಗಳ ನಡುವೆ ದ್ವೇಷವನ್ನು ಮೂಡಿಸುವುದು’, ಇಂತಹ ಆರೋಪ ಗಳನ್ನು ಮಾಡಲಾಯಿತು. ಅವನು ‘ವಾಟ್ಸ್ಪ್’ ಗ್ರೂಪ್‌ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಇಂತಹ ಕುಕೃತ್ಯಗಳನ್ನು ಮಾಡುತ್ತಿದ್ದನು. ಅವನು ಎರಡು ಪ್ರಕಾರದ ‘ವಾಟ್ಸ್ಪ್’ ಗ್ರೂಪ್‌ಗಳ ‘ಎಡ್ಮಿನ್’ (ಪ್ರಮುಖ) ಆಗಿದ್ದಾನೆ. ಒಂದು ಗುಂಪಿನಲ್ಲಿ ೧೮೧ ಸದಸ್ಯರಿದ್ದಾರೆ. ಅದರಲ್ಲಿ ಕೇವಲ ೫ ಜನ ಭಾರತೀಯರಿದ್ದು ಉಳಿದವರು ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಮಲೇಷ್ಯಾ ದೇಶಗಳ ಜನರಿದ್ದಾರೆ. ಅವನ ಇನ್ನೊಂದು ‘ವಾಟ್ಸ್ಪ್’ ಗ್ರೂಪ್‌ ಕೂಡ ಜಿಹಾದಿ ಕೃತ್ಯಗಳನ್ನು ಮಾಡುವುದಾಗಿದೆ. ಈ ‘ವಾಟ್ಸ್ಪ್’ ಗ್ರೂಪ್‌ನಿಂದ ಅವನು ಜಿಹಾದಿಗಳನ್ನು ಹುಟ್ಟು ಹಾಕುವ ವಿಷಯದಲ್ಲಿ ಲೇಖನಗಳನ್ನು ಕಳುಹಿಸುತ್ತಿದ್ದನು. ಅವನು ಶಸ್ತ್ರಾಸ್ತ್ರಗಳನ್ನು ಪಡೆಯುವುದು ಮತ್ತು ಅವುಗಳನ್ನು ವಿತರಿಸುವುದು ಇದನ್ನೂ ಮಾಡುತ್ತಿದ್ದನು. ಬಂಧಿಸಿದಾಗ ಅವನು ‘ನನಗೆ ಜಿಹಾದಿ ಆಗಲಿಕ್ಕಿದೆ’, ಎಂದು ಹೇಳಿದ್ದನು.

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೨. ಆರೋಪಿಯಿಂದ ಜಾಮೀನಿಗಾಗಿ ನ್ಯಾಯಾಲಯದಲ್ಲಿ ಅರ್ಜಿ

ಮತಾಂಧನು ತನ್ನ ಜಾಮೀನಿಗಾಗಿ ಪ್ರಯಾಗರಾಜ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದನು. ಅದರಲ್ಲಿ ಅವನು, ‘ನಾನು ಕಳೆದ ಒಂದುವರೆ ವರ್ಷದಿಂದ ಸೆರೆಮನೆಯಲ್ಲಿದ್ದೇನೆ. ನನ್ನ ವಿರುದ್ಧ ಹೇರಿದ ಭಾರತೀಯ ದಂಡ ಸಂಹಿತೆ ಕಾನೂನುಗಳ ಪರಿಚ್ಛೇದಗಳ ಪ್ರಕಾರ ನನಗೆ ಹೆಚ್ಚೆಂದರೆ ೫ ವರ್ಷ ಸೆರೆಮನೆಯ ಶಿಕ್ಷೆ ಆಗುತ್ತದೆ. ಆದ್ದರಿಂದ ನನಗೆ ಜಾಮೀನು ಸಿಗಬೇಕು. ಈ ಅರ್ಜಿಯನ್ನು ಕೇಂದ್ರ ಸರಕಾರ ಮತ್ತು ತನಿಖಾ ದಳದ ವತಿಯಿಂದ ವಿರೋಧಿಸಲಾಯಿತು. ಅವರ ಅಭಿಪ್ರಾಯಕ್ಕನುಸಾರ ಆರೋಪಿ ೨ ‘ವಾಟ್ಸ್ ಆಪ್’ ಗ್ರೂಪ್‌ಗಳ ‘ಎಡ್ಮಿನ್’ ಆಗಿದ್ದಾನೆ. ಅವುಗಳ ಮೂಲಕ ಅವನು ಕೇವಲ ಜಿಹಾದಿ ವಿಷಯದ ವಿಚಾರಗಳನ್ನು ಪ್ರಚಾರ ಮಾಡುತ್ತಾನೆ. ಈ ಗುಂಪುಗಳ ಸದಸ್ಯರು ಮುಸಲ್ಮಾನ ರಾಷ್ಟ್ರಗಳಲ್ಲಿನ ಹಾಗೂ ಭಾರತವಿರೋಧಿ ವಿಚಾರಶೈಲಿಯವರಾಗಿದ್ದಾರೆ. ಇವನ ವಿರುದ್ಧ ಹೇರಿದ ಪರಿಚ್ಛೇದಗಳಿಂದ ಅವನಿಗೆ ೧೦ ವರ್ಷ ಅಥವಾ ಜೀವಾವಧಿ ಸೆರೆಮನೆವಾಸದ ಶಿಕ್ಷೆ ಆಗಬಹುದು. ಆದ್ದರಿಂದ ಅವನಿಗೆ ವ್ಯಕ್ತಿಸ್ವಾತಂತ್ರ್ಯದ ಹೆಸರಿನಲ್ಲಿ ಜಾಮೀನು ನೀಡಬಾರದು.

೩. ಪ್ರಯಾಗರಾಜ ಉಚ್ಚ ನ್ಯಾಯಾಲಯದಿಂದ ಜಾಮೀನು ನಿರಾಕರಣೆ

ಎರಡೂ ಬದಿಯ ಯುಕ್ತಿವಾದಗಳ ವಿಚಾರ ಮಾಡಿ ಉಚ್ಚ ನ್ಯಾಯಾಲಯ ಆರೋಪಿಯ ಜಾಮೀನನ್ನು ತಳ್ಳಿಹಾಕಿತು. ಇಲ್ಲಿ ತೀರ್ಪು ನೀಡುವಾಗ ನ್ಯಾಯಾಲಯ ‘ದೇಶದ ವಿರುದ್ಧ ಒಳಸಂಚು ರೂಪಿಸುವುದು, ದೇಶದ ಸಾರ್ವಭೌಮತ್ವಕ್ಕೆ ಸವಾಲೊಡ್ಡುವುದು, ದೇಶದ ವಿರುದ್ಧ ಯುದ್ಧ ಸಾರುವುದು, ಮುಂತಾದ ಗಂಭೀರ ಆರೋಪವಿರುವ ವ್ಯಕ್ತಿಗೆ ಜಾಮೀನು ನೀಡುವುದು ಸರಿಯಲ್ಲ’, ಎಂದು ಹೇಳುತ್ತಾ ಆರೋಪಿಯ ಜಾಮೀನನ್ನು ತಳ್ಳಿಹಾಕಿತು.

‘ನ್ಯಾಯಾಲಯ ಗಂಭೀರ ಪ್ರಕರಣಗಳಲ್ಲಿ ನಿರ್ಣಯ ನೀಡುವಾಗ ಅನಾವಶ್ಯಕ ವ್ಯಕ್ತಿಸ್ವಾತಂತ್ರ್ಯ, ಆರೋಪಿಯ ತಥಾಕಥಿತ ಮೂಲಭೂತ ಅಧಿಕಾರದಂತಹ ದೊಡ್ಡ ದೊಡ್ಡ ಶಬ್ದಗಳನ್ನು ಉಪಯೋಗಿಸದೆ ಆರೋಪಿಯ ವಿರುದ್ಧದ ಅಪರಾಧ ಮತ್ತು ಅವನ ವಿಚಾರಶೈಲಿಯ ವಿಚಾರ ಮಾಡುವುದು ಆವಶ್ಯಕವಾಗಿದೆ. ಆದ್ದರಿಂದ ತನಿಖಾ ದಳದವರು ಇಂತಹ ಆರೋಪಿಯ ವಿರುದ್ಧದ ಎಲ್ಲ ಸಾಕ್ಷಿಗಳನ್ನು ನ್ಯಾಯಾಲಯದ ಮುಂದಿಟ್ಟು ಅವನಿಗೆ ಶೀಘ್ರಗತಿಯಲ್ಲಿ ಕಠೋರ ಶಿಕ್ಷೆ ನೀಡಲು ಪ್ರಯತ್ನಿಸಬೇಕು, ಎಂಬುದು ರಾಷ್ಟ್ರಪ್ರೇಮಿಗಳ ಬೇಡಿಕೆಯಾಗಿದೆ.’

– ಪೂ. ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೨೬.೮.೨೦೨೩)

ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ-ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ, ಉದಾ. ಅಸುರರು, ರಾಕ್ಷಸರು, ಪಿಶಾಚಿ, ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.