(ಡ್ರೆಸ್ ಕೋಡ್ ಎಂದರೆ ದೇವಸ್ಥಾನವನ್ನು ಪ್ರವೇಶಿಸುವಾಗ ಧರಿಸಬೇಕಾದ ಬಟ್ಟೆಗೆ ಸಂಬಂಧಿಸಿದ ನಿಯಮ)
ಪುರಿ (ಒಡಿಶಾ) – ಇಲ್ಲಿನ ಪ್ರಸಿದ್ಧ ಜಗನ್ನಾಥ ದೇವಸ್ಥಾನದಲ್ಲಿ ಜನವರಿ 1, 2024 ರಿಂದ ಡ್ರೆಸ್ ಕೋಡ್ ಅನ್ನು ಜಾರಿಗೊಳಿಸಲಾಗುವುದು. ಡ್ರೆಸ್ ಕೋಡ್ ಜಾರಿಯಾದ ನಂತರ ಜನರು ಹಾಫ್ ಪ್ಯಾಂಟ್, ಹರಿದ ಜೀನ್ಸ (ರಿಪ್ಡ್ ಜೀನ್ಸ್), ಸ್ಕರ್ಟ್, ಸ್ಲೀವ್ ಲೆಸ್ ಬಟ್ಟೆ ಧರಿಸಿ ಜಗನ್ನಾಥ ದೇವಸ್ಥಾನವನ್ನು ಪ್ರವೇಶಿಸುವಂತಿಲ್ಲ. ದೇವಸ್ಥಾನದ ನಿಯಮಗಳ ಉಪಸಮಿತಿಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ; ಆದರೆ ದೇವಸ್ಥಾನದಲ್ಲಿ ಯಾವ ಬಟ್ಟೆ ಧರಿಸಲು ಅವಕಾಶ ನೀಡಬೇಕು ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ.
ಜಗನ್ನಾಥ ದೇವಸ್ಥಾನದ ಆಡಳಿತ ಮುಖ್ಯಸ್ಥ ರಂಜನ್ ಕುಮಾರ್ ದಾಸ್ ಇವರು ಮಾತನಾಡಿ, ಕೆಲವರು ಹಾಫ್ ಪ್ಯಾಂಟ್ ಮತ್ತು ತೋಳಿಲ್ಲದ ಉಡುಗೆ(ಸ್ಲೀವ್‌ಲೆಸ್ ಉಡುಗೆಯಲ್ಲಿ) ಸಮುದ್ರ ದಡ ಅಥವಾ ಉದ್ಯಾನವನಗಳಿಗೆ ವಾಕಿಂಗ್‌ಗೆ ಬಂದವರಂತೆ ಬರುತ್ತಾರೆ. ದೇವಸ್ಥಾನದಲ್ಲಿ ದೇವರಿದ್ದಾನೆ. ಇದು ಮನರಂಜನೆಯ ಸ್ಥಳವಲ್ಲ. ಇದರಿಂದ ಇತರ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ. ದೇವಸ್ಥಾನದ ಗೌರವ, ಪಾವಿತ್ರ್ಯತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆದ್ದರಿಂದ, ಜನವರಿ 1, 2024 ರಿಂದ ಡ್ರೆಸ್ ಕೋಡ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ. ದೇವಸ್ಥಾನದ ಸಿಂಹದ್ವಾರ (ಮುಖ್ಯ ದ್ವಾರ)ದಲ್ಲಿ ನಿಂತಿರುವ ಭದ್ರತಾ ಸಿಬ್ಬಂದಿ ಮತ್ತು ದೇವಸ್ಥಾನದ ಸೇವಕರು ಈ ಬಗ್ಗೆ ಗಮನಹರಿಸುತ್ತಾರೆ ಎಂದು ಹೇಳಿದರು.
ಸಂಪಾದಕೀಯ ನಿಲುವುದೇಶದ ಪ್ರತಿಯೊಂದು ದೇವಸ್ಥಾನಗಳಲ್ಲಿ ಈ ರೀತಿಯ ಬದಲಾವಣೆಗಳು ಈಗ ಆಗಬೇಕಾಗಿದೆ. ಹಿಂದೂ ರಾಷ್ಟ್ರ ಸ್ಥಾಪನೆಯಾದ ಬಳಿಕ ದೇಶದ ಎಲ್ಲಾ ದೇವಸ್ಥಾನಗಳ ಪಾವಿತ್ರ್ಯತೆಯನ್ನು ಕಾಪಾಡಲು ಆಧ್ಯಾತ್ಮಿಕ ಮಟ್ಟದಲ್ಲಿ ನಿಯಮಗಳನ್ನು ಜಾರಿಗೊಳಿಸಲಾಗುವುದು ! |