ಅಮೆರಿಕಾ, ಬ್ರಿಟನ್, ಜರ್ಮನಿ ಮತ್ತು ಇತರ ದೇಶಗಳಲ್ಲಿನ ಮುಸಲ್ಮಾನರಿಂದ ಹಮಾಸ್ ಮಾಡಿದ ಆಕ್ರಮಣಕ್ಕೆ ಬೀದಿಗಿಳಿದು ಬೆಂಬಲ

ಲಂಡನ್ (ಬ್ರಿಟನ್) – ಹಮಾಸ್ ಇಸ್ರೇಲ್ ಮೇಲೆ ಮಾಡಿದ ದಾಳಿಯನ್ನು ಪಾಶ್ಚಾತ್ಯ ದೇಶ ವಿರೋಧ ಮಾಡುತ್ತಿರುವಾಗ ಇಸ್ಲಾಮಿಕ್ ದೇಶಗಳು ಬೆಂಬಲಿಸುತ್ತಿದೆ. ಈ ಹಿನ್ನಲೆಯಲ್ಲಿ ಜಗತ್ತಿನ ಕೆಲವು ಭಾಗಗಳಲ್ಲಿ ಮುಸಲ್ಮಾನರಿಂದ ಹಮಾಸ್ ದಾಳಿಯ ಆನಂದವನ್ನು ಆಚರಿಸಲಾಗುತ್ತಿದೆ, ಹಾಗೆಯೇ ಅವರಿಗೆ ಬೆಂಬಲ ನೀಡಲಾಗುತ್ತಿದೆ. ಅಮೇರಿಕಾ, ಬ್ರಿಟನ್, ಕೆನಡಾ, ಸ್ವೀಡನ್, ಜರ್ಮನಿ ಮತ್ತು ಟರ್ಕಿಯ ಮುಸ್ಲಿಮರೂ ಪ್ಯಾಲೆಸ್ತೀನ್ ಧ್ವಜಗಳನ್ನು ಹಿಡಿದು ಘೋಷಣೆಗಳನ್ನು ಕೂಗುವ ಮೂಲಕ ಸಂಭ್ರಮಿಸಿದರು. ಈ ಸಂದರ್ಭದಲ್ಲಿನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನ್ಯೂಯಾರ್ಕ್‌ನಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಬೆಂಬಲಿಗರು ಪರಸ್ಪರ ಮುಖಾಮುಖಿಯಾಗಿರುವುದು ಕಂಡುಬಂದಿತು.

ಸಂಪಾದಕೀಯ ನಿಲುವು

ಹಮಾಸ್ ಇಸ್ರೇಲ್ ಮತ್ತು ಇತರ ದೇಶಗಳ ನಾಗರಿಕರ ಮೇಲೆ ನಡೆಸಿದ ಅಮಾನುಷ ದೌರ್ಜನ್ಯವನ್ನು ಯಾವುದೇ ಇಸ್ಲಾಮಿಕ್ ದೇಶ ಅಥವಾ ಸಂಘಟನೆ ವಿರೋಧಿಸಿಲ್ಲ ಎಂಬುದನ್ನು ಗಮನಿಸಿ !