|
ಬರೇಲಿ (ಉತ್ತರ ಪ್ರದೇಶ) – ಇಲ್ಲಿಯ ಆಮ್ ಆದ್ಮಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಯಾಮೀನ ಉಲ್ ಇಸ್ಲಾಂ ಉರ್ಫ ಅಜೀಮ ಪ್ರಧಾನ ಇವನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಕ್ಷೇಪಾರ್ಹ ಛಾಯಾಚಿತ್ರವನ್ನು ಪ್ರಸಾರ ಮಾಡಿದ್ದಾನೆ. ಆದ್ದರಿಂದ ಇಸ್ಲಾಂ ನ ವಿರುದ್ಧ ದೂರು ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ಪೊಲೀಸ್ ಉಪನಿರೀಕ್ಷಕ ನರೇಶ ಶರ್ಮಾ ಇವರು ದೂರು ದಾಖಲಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆ ಬರೇಲಿ ಜಿಲ್ಲೆಯ ಭೋಜಿಪುರದಲ್ಲಿ ನಡೆದಿದೆ.
AAP के जिला उपाध्यक्ष यामीन उल इस्लाम ने शेयर की PM मोदी की आपत्तिजनक तस्वीर: हिन्दू संगठन नाराज़, पुलिस ने FIR दर्ज कर शुरू की जाँच#UttarPradesh #bareillyhttps://t.co/1ywBzyT70K
— ऑपइंडिया (@OpIndia_in) October 7, 2023
ಇಸ್ಲಾಮನು ಪ್ರಧಾನ ಮಂತ್ರಿಯ ಮೂಲ ಛಾಯಾಚಿತ್ರವನ್ನು ತೆಗೆದುಕೊಂಡು ಅದನ್ನು ವಿಕೃತಗೊಳಿಸಿದನು. ನಿರ್ಮಾ ಈ ಬಟ್ಟೆ ತೊಳೆಯುವ ಪೌಡರ ಪ್ಯಾಕೇಜಿಂಗ್ ಮೇಲೆ ಬಿಳಿ ಫ್ರಾಕ್ ಧರಿಸಿರುವ ಹುಡುಗಿಯ ಚಿತ್ರವಿದೆ. ಆ ಹುಡುಗಿಯ ಮುಖದ ಜಾಗದಲ್ಲಿ ನರೇಂದ್ರ ಮೋದಿಯವರ ಮುಖವನ್ನು ಹಾಕಿದ್ದ. ಛಾಯಾಚಿತ್ರದ ಕೆಳಗೆ, ‘ಬಿಜೆಪಿಯಿಂದ ಹಾಲಿನಂತೆ ಬಿಳುಪು ಬಂದಿದೆ ಮತ್ತು ಭ್ರಷ್ಟಾಚಾರ ಮಾಡಿರುವ ಪ್ರತಿಯೊಬ್ಬ ನಾಯಕನು ಸ್ವಚ್ಛನಾದನು. ಕಲೆ ಹೊಂದಿರುವ (ಕಳಂಕಿತ) ನಾಯಕರನ್ನು (ವಾಷಿಂಗ್ ಮೆಷಿನ್ ನಲ್ಲಿ) ಹಾಕಿರಿ ಮತ್ತು ಅವನನ್ನು ಸ್ವಚ್ಛಗೊಳಿಸಿರಿ. ಬಿಜೆಪಿಯ ವಾಷಿಂಗ್ ಪೌಡರ್’ ಎಂದು ಬರೆಯಲಾಗಿದೆ. ಇದನ್ನು ಹಿಂದುತ್ವನಿಷ್ಠ ಸಂಘಟನೆಗಳೂ ಆಕ್ಷೇಪ ವ್ಯಕ್ತಪಡಿಸಿದ್ದವು.
ಸಂಪಾದಕೀಯ ನಿಲುವುಉತ್ತರ ಪ್ರದೇಶ ಪೊಲೀಸರ ಈ ಕ್ರಮದಿಂದ ಯಾರಾದರೂ ‘ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಸುಕುತ್ತಿದ್ದಾರೆ’ ಎಂದು ಆರೋಪಿಸಿದರೆ ಆಶ್ಚರ್ಯಪಡಬಾರದು ! |