ತೃಣಮೂಲ ಕಾಂಗ್ರೆಸ್‍ಗೆ ಮತ ಚಲಾಯಿಸುವಂತೆ ಮುಸಲ್ಮಾನರಿಗೆ ಕರೆ ನೀಡಿದರೆಂಬ ಕಾರಣದಿಂದ ಮಮತಾ ಬ್ಯಾನರ್ಜಿಗೆ ಚುನಾವಣಾ ಆಯೋಗದಿಂದ ನೋಟಿಸ್ ಜಾರಿ

ಬಂಗಾಳ ವಿಧಾನಸಭಾ ಚುನಾವಣೆಯ ಪ್ರಸಾರದ ಸಮಯದಲ್ಲಿ ತೃಣಮೂಲ ಮುಸಲ್ಮಾನರಿಗೆ ಸಂಘಟಿತರಾಗಿ ತೃಣಮೂಲ ಕಾಂಗ್ರೆಸ್‍ಗೆ ಮತ ಚಲಾಯಿಸಿ ಎಂದು ಕರೆ ನೀಡಿದ್ದಕ್ಕಾಗಿ ಚುನಾವಣಾ ಆಯೋಗವು ತೃಣಮೂಲ ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಕಾರಣ ತೋರಿಸಿ ಎಂದು ನೋಟಿಸ್ ನೀಡಿದೆ.

ಮಮತಾ ಬ್ಯಾನರ್ಜಿ ‘ಇಸ್ಲಾಮಿಕ್ ಭಯೋತ್ಪಾದಕಿ’ ! – ಉತ್ತರ ಪ್ರದೇಶದ ಬಿಜೆಪಿ ಸಚಿವ ಆನಂದ ಸ್ವರೂಪ ಶುಕ್ಲಾ

ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ರೋಹಿಂಗ್ಯಾ ಮುಸ್ಲಿಮರಿಗೆ ಪೌರತ್ವ ನೀಡಿದ್ದಾರೆ, ಹಿಂದೂಗಳಿಗೆ ತಮ್ಮ ಹಬ್ಬಗಳನ್ನು ಆಚರಿಸಲು ಅವಕಾಶ ನೀಡುತ್ತಿಲ್ಲ. ಆದ್ದರಿಂದ ಬಂಗಾಲದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಹೀನಾಯವಾಗಿ ಸೋಲನುಭವಿಸಲಿದ್ದು ಚುನಾವಣೆಯ ನಂತರ ಮಮತಾ ಬ್ಯಾನರ್ಜಿ ಬಾಂಗ್ಲಾದೇಶದಲ್ಲಿ ಆಶ್ರಯ ಪಡೆಯಬೇಕಾಗುತ್ತದೆ ಎಂದು ಉತ್ತರ ಪ್ರದೇಶದ ಸಂಸದೀಯ ವ್ಯವಹಾರಗಳ ಸಚಿವ ಆನಂದ ಸ್ವರೂಪ ಶುಕ್ಲಾ ಹೇಳಿದ್ದಾರೆ.

ಚುನಾವಣೆಯ ಎದುರಾಗುತ್ತಿದ್ದಂತ್ಲೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಂದ ಬಂಗಾಲದ ಬ್ರಾಹ್ಮಣ ಅರ್ಚಕರಿಗೆ ಉಚಿತ ಮನೆ ಹಾಗೂ ೧ ಸಾವಿರ ರೂಪಾಯಿ ಮಾಸಿಕ ಭತ್ಯೆ !

ಚುನಾವಣೆಯ ಎದುರಾಗುತ್ತಿದ್ದಂತೆ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬಂಗಾಲದ ಬ್ರಾಹ್ಮಣ ಅರ್ಚಕರಿಗೆ ಉಚಿತವಾಗಿ ಮನೆ ಹಾಗೂ ೧ ಸಾವಿರ ರೂಪಾಯಿ ತಿಂಗಳ ಭತ್ಯೆ ನೀಡುವಂತೆ ಘೋಷಿಸಿದ್ದಾರೆ. ಬಂಗಾಲದಲ್ಲಿ ೮ ಸಾವಿರ ಬ್ರಾಹ್ಮಣ ಅರ್ಚಕರು ಇದ್ದಾರೆ. ಈ ಮೂಲಕ ಬ್ಯಾನರ್ಜಿಯವರು ರಾಜ್ಯದ ಬ್ರಾಹ್ಮಣ ಮತದಾರರನ್ನು ತಮ್ಮತ್ತ ಆಕರ್ಷಿಸಲು ಪ್ರಯತ್ನಿಸಿತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

‘ಪುನಃ ಅಧಿಕಾರಕ್ಕೆ ಬಂದರೆ ಬಡವರಿಗೆ ಜೀವನಪೂರ್ತಿ ಉಚಿತ ಧಾನ್ಯ ನೀಡುವೆನು !’ – ಮಮತಾ ಬ್ಯಾನರ್ಜಿಯವರಿಂದ ಜನರಿಗೆ ಆಮಿಷ

ತೃಣಮೂಲ ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬಂದರೆ ಬಡವರಿಗೆ ಜೀವನಪೂರ್ತಿ ಉಚಿತವಾಗಿ ಧಾನ್ಯ ನೀಡುವುದು, ಎಂದು ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಒಂದು ‘ಆನ್‌ಲೈನ್’ ಸಭೆಯಲ್ಲಿ ಮತದಾರರಿಗೆ ಆಮಿಷ ನೀಡಿದ್ದಾರೆ. ರಾಜ್ಯದಲ್ಲಿ ೨೦೨೧ ರಲ್ಲಿ ವಿಧಾನಸಭೆ ಚುನಾವಣೆಯಾಗಲಿದ್ದು ಈ ಹಿನ್ನೆಲೆಯಲ್ಲಿ ಬ್ಯಾನರ್ಜಿಯವರು ಈ ಸಭೆಯನ್ನು ತೆಗೆದುಕೊಂಡಿದ್ದರು.