ಚೀನಾದ ಕಪಟ ಯುದ್ಧತಂತ್ರಕ್ಕೆ ಚಾಣಕ್ಯನೀತಿಯಿಂದ ಉತ್ತರಿಸಬೇಕು! – ಹಿಂದೂ ಜನಜಾಗೃತಿ ಸಮಿತಿ
ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಮತ್ತು ಭಾರತ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ಭಾರತೀಯ ಕರ್ನಲ್ ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯು ಚೀನಾದ ಈ ಕುಕೃತ್ಯವನ್ನು ತೀವ್ರವಾಗಿ ಖಂಡಿಸುತ್ತದೆ. ಕೇಂದ್ರ ಸರಕಾರವು ದೇಶದ ಗಡಿಗಳನ್ನು ಭದ್ರಪಡಿಸಲು ಚಾಣಕ್ಯನೀತಿ ಮತ್ತು ಗೆರಿಲ್ಲಾಯುದ್ಧತಂತ್ರದ ಮೂಲಕ ಚೀನಾಗೆ ಕಠೋರವಾದ ಪ್ರತ್ಯುತ್ತರ ನೀಡಬೇಕು