ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಶಿವಾಜಿ ರಾಜ್ಯಾಭಿಷೇಕ ದಿನ’ ನಿಮಿತ್ತ ಹಿಂದಿ ಭಾಷೆಯಲ್ಲಿ ವಿಶೇಷ ‘ಆನ್‌ಲೈನ್’ಕಾರ್ಯಕ್ರಮ !

‘ಛತ್ರಪತಿ ಶಿವಾಜಿ ಮಹಾರಾಜರ ಹಿಂದೂ ರಾಷ್ಟ್ರ’ !

ಮೊಘಲರ ಅತ್ಯಾಚಾರದಿಂದ ತತ್ತರಿಸಿ ಹೋಗಿದ್ದ ಹಿಂದೂಗಳನ್ನು ಮೊಘಲರ ವಿರುದ್ಧ ಎದ್ದು ನಿಲ್ಲುವ ಅದಮ್ಯ ಸಾಹಸ ತೋರಿದ ಹಾಗೂ ಹಿಂದವಿ ಸ್ವರಾಜ್ಯದ ಬುನಾದಿ ಕಟ್ಟಿದ ಛತ್ರಪತಿ ಶಿವಾಜಿ ಮಹಾರಾಜರ ಶಿವಾಜಿ ರಾಜ್ಯಾಭಿಷೇಕ ದಿನವನ್ನು ಜೂನ್ ೬ ರಂದು ಆಚರಿಸಲಾಗುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜರ ರಾಜ್ಯಾಭಿಷೇಕವು ಭಾರತದ ಇತಿಹಾಸದಲ್ಲಿ ಒಂದು ಸುವರ್ಣ ಪುಟವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಪರಾಕ್ರಮಗಳನ್ನು ನೆನಪಿಸಿಕೊಳ್ಳುವುದರ ಜೊತೆಗೆ ಜನರಲ್ಲಿ ಸ್ಫೂರ್ತಿ ನಿರ್ಮಾಣವಾಗಲಿ ಎಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಶಿವಾಜಿ ರಾಜ್ಯಾಭಿಷೇಕ ದಿನ’ ನಿಮಿತ್ತ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಜೂನ್ ೬ ರ ಶನಿವಾರ ಸಂಜೆ ೭ ರಿಂದ ರಾತ್ರಿ ೮.೩೦ ರವರೆಗೆ ಸಾಮಾಜಿಕ ಜಾಲತಾಣಗಳಾದ ‘ಫೇಸ್‌ಬುಕ್’ ಮತ್ತು ‘ಯೂಟ್ಯೂಬ್’ಗಳಲ್ಲಿ ನೇರ ಪ್ರಸಾರಗೊಳ್ಳಲಿದೆ. ‘ಛತ್ರಪತಿ ಶಿವಾಜಿ ಮಹಾರಾಜರ ಹಿಂದೂ ರಾಷ್ಟ್ರ’ ಈ ವಿಷಯದಲ್ಲಿ ಹಿಂದಿ ಭಾಷೆಯ ವಿಶೇಷ ಕಾರ್ಯಕ್ರಮದಲ್ಲಿ ‘ಸುದರ್ಶನ ನ್ಯೂಸ್’ನ ಮುಖ್ಯ ಸಂಪಾದಕರು ಹಾಗೂ ಅಧ್ಯಕ್ಷರಾದ ಶ್ರೀ. ಸುರೇಶ ಚವ್ಹಾಣಕೆ, ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಇವರು ‘ಫೇಸ್‌ಬುಕ್ ಲೈವ್’ ಮತ್ತು ‘ಯೂಟ್ಯೂಬ್ ಲೈವ್’, ಮೂಲಕ ಮಾತನಾಡಲಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯು ಎಲ್ಲಾ ಹಿಂದೂ ಧರ್ಮಪ್ರೇಮಿಗಳು ಮತ್ತು ರಾಷ್ಟ್ರಪ್ರೇಮಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಅಮೂಲ್ಯ ವಿಚಾರಗಳ ಲಾಭವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದೆ.

ವಿಶೇಷ ಸಂವಾದದ ನೇರ ಪ್ರಸಾರವನ್ನು ವೀಕ್ಷಿಸಲು ಈ ಕೆಳಗಿನ ‘ಲಿಂಕ್‌ಗಳಿಗೆ’ ಭೇಟಿ ನೀಡಿ

Facebook.com/HinduAdhiveshan

YouTube.com/HinduJagruti