ಮೇ 30 ರಂದು `ಗೋವಾ ದಿನ’ದ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿ ಮತ್ತು `ಫ್ಯಾಕ್ಟ್’ ಜಂಟಿಯಾಗಿ

ಮಿಷನರಿಗಳು `ಇನ್‌ಕ್ವೀಝಿಶನ್’ನ ಹೆಸರಿನಲ್ಲಿ ಗೋಮಂತಕದ ಜನರ ಮೇಲೆ ಮಾಡಿದ ದೌರ್ಜನ್ಯದ ಮಾಹಿತಿಯನ್ನು ನೀಡುವ `ಆನ್‌ಲೈನ್ ಚಿತ್ರಪ್ರದರ್ಶನ’ ಲೋಕಾರ್ಪಣೆ ಆಗಲಿದೆ !

ಗೋವಾ ರಾಜ್ಯವನ್ನು ಪೋರ್ಚುಗೀಸರಿಂದ ವಿಮೋಚನೆಗೊಳ್ಳಲು 1961 ನೇ ವರ್ಷ ಬರಬೇಕಾಯಿತು. ಸುಮಾರು 450 ವರ್ಷಗಳ ನಂತರ ಗೋವಾವನ್ನು ಪೋರ್ಚುಗೀಸರ ಹಿಡಿತದಿಂದ ಮುಕ್ತಗೊಳಿಸಲಾಯಿತು; ಆದರೆ ಈ ಅವಧಿಯಲ್ಲಿ ಗೋವಾದಲ್ಲಿ ಹಿಂದೂಗಳು ಅನುಭವಿಸಿದ ದೌರ್ಜನ್ಯದ ಬಗ್ಗೆ ಭಾರತೀಯರಿಗೆ ಹೆಚ್ಚು ತಿಳಿದಿಲ್ಲ. ಪೋರ್ಚುಗೀಸರ ಕ್ರೂರ ಆಳ್ವಿಕೆಯಲ್ಲಿ ಮಿಷನರಿಯವರಿಂದ ರಾಜಾಜ್ಞೆಯನ್ನು ಪಡೆದು `ಇನ್‌ಕ್ವೀಝಿಶನ್’ ಅಂದರೆ ಧಾರ್ಮಿಕ ಪರಿಶೀಲನಾ ಸಭೆಯ ಹೆಸರಿನಲ್ಲಿ ಗೋವಾದ ಹಿಂದೂಗಳ ಮೇಲೆ ದೌರ್ಜನ್ಯ ಮಾಡಲಾಯಿತು. ಅವರನ್ನು ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಿಸಲಾಯಿತು, ದೇವಾಲಯಗಳನ್ನು ಕೆಡವಲಾಯಿತು, ವಿಗ್ರಹ ತಯಾರಿಸುವುದನ್ನು ನಿಷೇಧಿಸಲಾಯಿತು, ಅಂಗಳದಲ್ಲಿ ತುಳಸಿ ನೆಡುವುದನ್ನು ನಿಷೇಧಿಸಲಾಯಿತು, ಜುಟ್ಟಿನ ಮೇಲೆ ತೆರಿಗೆ ವಿಧಿಸಲಾಯಿತು. ಅದೇರೀತಿ ಮಹಿಳೆಯರನ್ನು ಗುಲಾಮರನ್ನಾಗಿ ಮಾಡಲಾಯಿತು. ಇಂತಹ ಪ್ರಚಂಡವಾಗಿ ದೌರ್ಜನ್ಯ ಮಾಡಿಯೂ ಈ ಇತಿಹಾಸವನ್ನು ಯಾವುದೇ ಪಠ್ಯಪುಸ್ತಕದಲ್ಲಿ ನೀಡಿಲ್ಲ. ಒಂದು ಕಾಲದಲ್ಲಿ ಪರಶುರಾಮನ ಭೂಮಿಯಾಗಿದ್ದ ಗೋಮಂತಕ್ ಈಗ `ಗೋವಾ ಅಂದರೆ ಮೋಜುಮಜಾ ಮಾಡುವ ಭೂಮಿ’ ಎಂಬAತಾಗಿದೆ. ಆದ್ದರಿಂದ ಗೋವಾದ ಜನತೆಯ ಮೇಲೆ ಕ್ರೂರ ದೌರ್ಜನ್ಯದ ಹಾಗೂ ಸಂಘರ್ಷದ, ಸ್ವಾಭಿಮಾನದ ಇತಿಹಾಸ ಜನರಮುಂದೆ ತರಲು ಪ್ರಸಿದ್ಧ ಫ್ರೆಂಚ್ ಪತ್ರಕರ್ತ ಫ್ರಾನ್ಸುವಾ ಗೋತಿಯೆ ಇವರು ಒಂದು ಪ್ರದರ್ಶನವನ್ನು ನಿರ್ಮಿಸಿದ್ದಾರೆ. ಈ ಪ್ರದರ್ಶನವು www.goainquisition.info ನ ಜಾಲತಾಣದಲ್ಲಿ ಲಭ್ಯವಿದೆ. ಮೇ 30 ರಂದು `ಗೋವಾ ದಿನ’ ಸಂದರ್ಭದಲ್ಲಿ ಈ ಪ್ರದರ್ಶನದ ಲೋಕಾರ್ಪಣೆಯ ಕಾರ್ಯಕ್ರಮವು ಆನ್‌ಲೈನ್ ಮೂಲಕ ಸಂಜೆ 7 ಗಂಟೆಗೆ ಆಗಲಿದೆ. ಈ ಲೋಕಾರ್ಪಣೆಯ ಕಾರ್ಯಕ್ರಮವನ್ನು ಸಮಿತಿಯ ಯೂ-ಟ್ಯೂಬ್, ಫೇಸ್‌ಬುಕ್ ಮತ್ತು ಟ್ವಿಟರ್ ಈ ಸೋಶಿಯಲ್ ಮೀಡಿಯಾದಲ್ಲಿ ಪ್ರದರ್ಶಿಸಲಾಗುವುದರಿಂದ ಗೋಮಂತಕಿಗಳು ಸೇರಿದಂತೆ ಸಮಸ್ತ ಭಾರತೀಯರು ಇದನ್ನು ಖಂಡಿತವಾಗಿಯೂ ನೋಡಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿ ಮನವಿ ಮಾಡಿದೆ.

ಫ್ರಾನ್ಸುವಾ ಗೊತಿಯೇಯವರ `ಈಂಅಖಿ’ ಮತ್ತು ಹಿಂದೂ ಜನಜಾಗೃತಿ ಸಮಿತಿ ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸುತ್ತಿವೆ. ಈ ಕಾರ್ಯಕ್ರಮದಲ್ಲಿ ಫ್ರಾನ್ಸುವಾ ಗೊತಿಯೇ ವಿಶೇಷವಾಗಿ ಉಪಸ್ಥಿತಿ ಇರುವರು. ಅದೇರೀತಿ ಗೋವಾ ವಿಮೋಚನೆಗಾಗಿ ಹೋರಾಟದ ಕ್ರಾಂತಿಕಾರಿ ಪ್ರಭಾಕರ್ ವೈದ್ಯರ ಮಗಳು ಮತ್ತು ಲೇಖಕಿಯಾದ ಶೆಫಾಲಿ ವೈದ್ಯ, ಗೋವಾದ ಪ್ರಖ್ಯಾತ ಇತಿಹಾಸಕಾರ, ಪ್ರಾ. ಪ್ರಜಲ ಸಖರದಂಡೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಆನ್‌ಲೈನ್ ಪ್ರದರ್ಶನವನ್ನು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ) ಚಾರುದತ್ತ ಪಿಂಗಳೆಯವರು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದ ನೇರಪ್ರಸಾರ  Youtube.com/HinduJagruti ಈ ಯೂಟ್ಯೂಬ್ ಚಾನೆಲ್ ಅದೇರೀತಿ ಫೇಸ್‌ಬುಕ್‌ನ ‘Facebook.com/HinduAdhiveshan’ ಮತ್ತು ಟ್ವಿಟರ್‌ನ ‘Twitter.com/HinduJagrutiOrg’ ಇವುಗಳಲ್ಲಿ ಸಂಜೆ 7 ಗಂಟೆಗೆ ನಡೆಯಲಿದೆ.