ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಶಿವಾಜಿ ರಾಜ್ಯಾಭಿಷೇಕ ದಿನ’ದ ನಿಮಿತ್ತ ‘ಆನ್‌ಲೈನ್’ದಲ್ಲಿ ವಿಶೇಷ ಸಂವಾದ !

ಛತ್ರಪತಿ ಶಿವಾಜಿ ಮಹಾರಾಜರ ನೀತಿಯನ್ನು ಅನುಸರಿಸಿ ‘ಹಿಂದೂ ರಾಷ್ಟ್ರ’ ನಿರ್ಮಿಸಲು ಸಂಘಟಿತರಾಗಿ ! – ಪ್ರಮೋದ ಮುತಾಲಿಕ್, ಅಧ್ಯಕ್ಷರು, ಶ್ರೀರಾಮ ಸೇನೆ

ಜನರು ಮೊಘಲರ ದೌರ್ಜನ್ಯದಿಂದ ತತ್ತರಿಸಿ ಹೋಗಿದ್ದರು, ಮಹಿಳೆಯರ ಮೇಲೆ ಅತ್ಯಾಚಾರಗಳಾಗುತ್ತಿತ್ತು. ಆ ಸಮಯದಲ್ಲಿ, ಛತ್ರಪತಿ ಶಿವಾಜಿ ಮಹಾರಾಜರು ಚಿಕ್ಕನಿಂದಲೇ ಜನಸಾಮಾನ್ಯರು, ಶ್ರಮಿಕರು ಹಾಗೂ ರೈತರನ್ನು ಒಗ್ಗೂಡಿಸುವ ಮೂಲಕ ತಮ್ಮ ಸೈನ್ಯವನ್ನು ನಿರ್ಮಿಸಿದರು. ಅವರಲ್ಲಿ ದೇವರು, ದೇಶ ಮತ್ತು ಧರ್ಮದ ರಕ್ಷಣೆಗಾಗಿ ಸ್ವಾಭಿಮಾನವನ್ನು ನಿರ್ಮಿಸಿದರು. ಇದರಿಂದಲೇ ಮುಂದೆ ತಾನಾಜಿ ಮತ್ತು ಸೂರ್ಯಾಜಿಯಂತಹ ಶೂರವೀರರು ನಿರ್ಮಾಣವಾದರು. ಅವರು ಚಾತುರ್ಯ ಹಾಗೂ ಕೌಶಲ್ಯದ ಬಲದಿಂದ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿದರು. ಇಂದು ನಮಗೂ ಅದೇ ನೀತಿಯನ್ನು ಅನುಸರಿಸಬೇಕಾಗಿದೆ; ಏಕೆಂದರೆ ಇಂದು ಕಟ್ಟರ ಜಿಹಾದಿಗಳು, ಕ್ರೈಸ್ತ ಮಿಶನರಿಗಳು, ರಾಷ್ಟ್ರವಿರೋಧಿ ಕಮ್ಯುನಿಸ್ಟರು ಮತ್ತು ಭ್ರಷ್ಟಾಚಾರಿಗಳಿಂದ ಭಾರತದ ಮೇಲೆ ಆಕ್ರಮಣವಾಗುತ್ತಿದೆ. ಅದಕ್ಕೆ ಒಂದೇ ಉತ್ತರವೆಂದರೆ ಛತ್ರಪತಿ ಶಿವಾಜಿ ಮಹಾರಾಜರು ಅನುಸರಿಸಿದ ಮಾರ್ಗ ! ಛತ್ರಪತಿ ಶಿವಾಜಿ ಮಹಾರಾಜರ ನೀತಿಯನ್ನು ಅನುಸರಿಸುವ ಮೂಲಕ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ನಾವೆಲ್ಲರೂ ಸಂಘಟಿತರಾಗಬೇಕಿದೆ, ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ್ ಇವರು ಪ್ರತಿಪಾದಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ, ‘ಶಿವಾಜಿ ರಾಜ್ಯಾಭಿಷೇಕ ದಿನ’ದ ನಿಮಿತ್ತ ಜೂನ್ ೬ ರಂದು ‘ಛತ್ರಪತಿ ಶಿವಾಜಿ ಮಹಾರಾಜರ ಹಿಂದೂ ರಾಷ್ಟ್ರ’ ಈ ವಿಷಯದಲ್ಲಿ ‘ಆನ್‌ಲೈನ್’ನ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ‘ಸುದರ್ಶನ್ ನ್ಯೂಸ್’ನ ಅಧ್ಯಕ್ಷ ಮತ್ತು ಮುಖ್ಯ ಸಂಪಾದಕರಾದ ಶ್ರೀ. ಸುರೇಶ ಚವ್ಹಾಣಕೆ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ) ಚಾರುದತ್ತ ಪಿಂಗಳೆ ಮತ್ತು ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರೂ ವೀಕ್ಷಕರನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಸನಾತನ ಸಂಸ್ಥೆಯ ಪೂ. ರಾಮನಂದ ಗೌಡ ಇವರು ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಉಪಸ್ಥಿತರು ಹಿಂದೂ ರಾಷ್ಟ್ರಕ್ಕಾಗಿ ಸಕ್ರಿಯರಾಗಿರಲು ಪ್ರತಿಜ್ಞೆಯನ್ನು ಮಾಡಿದರು. ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸುಮಿತ ಸಾಗ್ವೆಕರ್ ಕಾರ್ಯಕ್ರಮದ ಸೂತ್ರಸಂಚಾಲನೆಯನ್ನು ಮಾಡಿದರು. ‘ಫೇಸ್‌ಬುಕ್’ ಮತ್ತು ‘ಯೂಟ್ಯೂಬ್’ನಲ್ಲಿ ನೇರ ಪ್ರಸಾರವಾದ ಈ ಕಾರ್ಯಕ್ರಮವನ್ನು ೪೨ ಸಾವಿರ ಜನರು ವೀಕ್ಷಿಸಿದರೆ, ೧ ಲಕ್ಷದ ೭ ಸಾವಿರ ಜನರ ತನಕ ಈ ಕಾರ್ಯಕ್ರಮ ತಲುಪಿದೆ.

ಛತ್ರಪತಿ ಶಿವಾಜಿ ಮಹಾರಾಜರು ‘ಸೆಕ್ಯುಲರ್‌ವಾದಿ ಅಲ್ಲ’, ಬದಲಾಗಿ ಹಿಂದೂ ಧರ್ಮದ ರಕ್ಷಕರು ! – ಸದ್ಗುರು (ಡಾ.) ಚಾರುದತ್ತ ಪಿಂಗಳೆ

ವೈಯಕ್ತಿಕ ಜೀವನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಧರ್ಮಪಾರಾಯಣರಾಗಿದ್ದರು, ಅದೇರೀತಿ ಅವರ ರಾಜಧರ್ಮವು ಸನಾತನ ಹಿಂದೂ ಧರ್ಮದ ಮೌಲ್ಯಗಳನ್ನು ಆಧರಿಸಿಯೇ ಇತ್ತು. ಅವರು ‘ಸೆಕ್ಯುಲರ್‌ವಾದಿ’ ಅಲ್ಲ, ಬದಲಾಗಿ ಹಿಂದೂ ಧರ್ಮರಕ್ಷಕರಾಗಿದ್ದರು. ಶಿವಾಜಿ ಮಹಾರಾಜರ ರಾಜ್ಯಾಭಿಷೇಕ ಸಮಾರಂಭವನ್ನು ವೈದಿಕ ಪದ್ದತಿಯಿಂದ ಮಾಡಲಾಯಿತು. ಕಾಶಿಯ ‘ಬ್ರಾಹ್ಮಣರಿಂದ ರಾಜ್ಯಾಭಿಷೇಕ, ಅಷ್ಟಪ್ರಧಾನ್ ಮಂಡಲದ ರಚನೆ, ಸಂಸ್ಕೃತದಲ್ಲಿ ರಾಜಮುದ್ರೆ, ವಿದೇಶಿ ಪದಗಳನ್ನು ತೆಗೆದುಹಾಕಲು ರಾಜವ್ಯವಹಾರಕೋಶ, ಶ್ರೀ ರಾಯರೇಶ್ವರ ದೇವಸ್ಥಾನದಲ್ಲಿ ಹಿಂದವೀ ಸ್ವರಾಜ್ಯದ ಪ್ರತಿಜ್ಞೆ ಮಾಡುವುದು ಇತ್ಯಾದಿ ಕೃತಿಗಳನ್ನು ‘ಸೆಕ್ಯುಲರ್’ ವಿಚಾರವುಳ್ಳ ರಾಜರು ಎಂದಾದರು ಮಾಡುವರೇ ? ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ ಸಾಮ್ರಾಜ್ಯದ ಚಕ್ರವರ್ತಿ ಮತ್ತು ಹಿಂದೂ ಧರ್ಮದ ರಕ್ಷಕರಾಗಿದ್ದರು, ಎಂಬುದು ಇದರಿಂದ ಸಾಬೀತಾಗುತ್ತದೆ ಎಂದು ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ) ಚಾರುದತ್ತ ಪಿಂಗಳೆಯವರು ಹೇಳಿದರು.

ಹಿಂದೂಗಳ ಮೇಲೆ ಅನ್ಯಾಯ ಮಾಡುವ ಸಂವಿಧಾನದ ನಿಬಂಧನೆಗಳನ್ನು ತಿದ್ದುಪಡಿ ಮಾಡಲು ಹೋರಾಟ ನಡೆಸಿ ! – ಸುರೇಶ ಚವ್ಹಾಣಕೆ

ಛತ್ರಪತಿ ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು; ಆದರೆ ಸ್ವಾತಂತ್ರ್ಯದ ನಂತರದ ಕಾಲಾವಧಿಯಲ್ಲಿ ಮಹಾರಾಜರ ಅಪೇಕ್ಷೆಯಂತೆ ರಾಷ್ಟ್ರವನ್ನು ರೂಪಿಸುವಲ್ಲಿ ನಾವು ಬಹಳ ಕಡಿಮೆ ಬಿದ್ದೆವು. ಸ್ವಾತಂತ್ರ್ಯದ ನಂತರದ ಅವಧಿಯಲ್ಲಿ ಹಿಂದೂ ರಾಷ್ಟ್ರ ಈ ಸಂಕಲ್ಪನೆಯನ್ನು ಕೈಬಿಡಲಾಯಿತು. ಆದ್ದರಿಂದ ಇಂದು ದೇಶಾದ್ಯಂತ ಅನೇಕ ಸ್ಥಳಗಳಲ್ಲಿ ಹಿಂದೂಗಳ ಮೇಲೆ ಮತಾಂಧರಿಂದ ದೌರ್ಜನ್ಯ ನಡೆಯುತ್ತಿದೆ, ಅನೇಕ ‘ಮಿನಿ ಪಾಕಿಸ್ತಾನ’ಗಳನ್ನು ನಿರ್ಮಿಸಲಾಗಿದೆ. ಇದು ಛತ್ರಪತಿ ಶಿವಾಜಿ ಮಹಾರಾಜರಿಗೆ ಅಪೇಕ್ಷಿತವಿಲ್ಲ. ಯಾವಾಗ ದೇಶದಲ್ಲಿ ಹಿಂದುತ್ವ ಮತ್ತು ರಾಷ್ಟ್ರೀಯತೆಯಿಂದ ತುಂಬಿದ ವಾತಾವರಣ ನಿರ್ಮಾಣವಾಗುತ್ತದೆಯೋ, ಆಗ ಹಿಂದೂವಿರೋಧಿ ಜನಪ್ರತಿನಿಧಿಗಳು ಕೂಡ ‘ಹಿಂದೂ ಕಾರ್ಡ್’ ಆಡಬೇಕಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಹಿಂದೂಗಳ ಮೇಲೆ ಅನ್ಯಾಯ ಮಾಡುವ ಸಂವಿಧಾನದ ನಿಬಂಧನೆಗಳನ್ನು ತಿದ್ದುಪಡಿ ಮಾಡಲು ಜನಾಭಿಪ್ರಾಯ ಸಂಗ್ರಹಿಸುವುದು ಅಗತ್ಯವಾಗಿದೆ, ಎಂದು ’ಸುದರ್ಶನ್ ನ್ಯೂಸ್’ನ ಸಂಸ್ಥಾಪಕ-ಸಂಪಾದಕರಾದ ಶ್ರೀ. ಸುರೇಶ ಚವ್ಹಾಣಕೆಯವರು ಕರೆ ನೀಡಿದರು.

ಚಲನಚಿತ್ರಗಳು, ಧಾರಾವಾಹಿಗಳಲ್ಲಿ ಶಿವಾಜಿ ಮಹಾರಾಜರ ಸೈನ್ಯದಲ್ಲಿ ಅನೇಕ ಮುಸಲ್ಮಾನರಿದ್ದರು ಎಂದು ತೋರಿಸುವ ಮೂಲಕ ವಿಕೃತಿಕರಣ ಮಾಡಲಾಗುತ್ತಿದೆ ! – ರಮೇಶ ಶಿಂದೆ

ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದಲ್ಲಿ ಅನೇಕ ಮುಸಲ್ಮಾನರಿದ್ದರು, ಎಂದು ಪದೇ ಪದೇ ಬಿಂಬಿಸುವ ಮೂಲಕ ಮಹಾರಾಜರನ್ನು ‘ಸೆಕ್ಯುಲರ್‌ವಾದಿ’ ಎಂದು ಕರೆಯಲಾಗುತ್ತದೆ. ಈ ತರ್ಕದಿಂದ ಔರಂಗಜೇಬನ ಸೈನ್ಯದಲ್ಲಿಯೂ ಹಿಂದೂ ಸರದಾರರು ಇದ್ದರು; ಹಾಗಾದರೆ ಔರಂಗಜೇಬನನ್ನು ‘ಸೆಕ್ಯುಲರ್’ ಎಂದು ಪರಿಗಣಿಸುವಿರಾ ? ಸ್ವತಃ ಛತ್ರಪತಿ ಸಂಭಾಜಿ ನಹಾರಾಜರು ೨೭ ಆಗಸ್ಟ್ ೧೬೮೦ ರಂದು ನೀಡಿದ ದಾನಪತ್ರದಲ್ಲಿ ಶಿವಾಜಿ ಮಹಾರಾಜರನ್ನು ‘ಮ್ಲೆಂಚ್ಛಕ್ಷಯದೀಕ್ಷಿತ್’ ಎಂದು ಉಲ್ಲೇಖಿಸಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರು ಸ್ವತಃ ತಮ್ಮ ಸಹೋದರ ವ್ಯಂಕೋಜಿರಾಜೆಯವರನ್ನು ಸಪ್ಟೆಂಬರ ೧೬೭೭ ರಲ್ಲಿ ಬರೆದ ಪತ್ರದಲ್ಲಿ ತನ್ನ ಸೈನ್ಯದಲ್ಲಿ ಮುಸಲ್ಮಾನ ಸೈನಿಕರನ್ನು ನೇಮಕ ಮಾಡುವ ಬಗ್ಗೆ ಕೇಳಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರು ಮತಾಂತರ ಮಾಡುವ ಗೋವಾದಲ್ಲಿ ಪಾದ್ರಿಗಳ ಶಿರಚ್ಛೇದ ಮಾಡಿದ್ದಾರೆ. ಬಲವಂತವಾಗಿ ಇಸ್ಲಾಂಗೆ ಮತಾಂತರಗೊಂಡ ನೇತಾಜಿ ಪಾಲ್ಕರ್ ಮತ್ತು ಇತರ ಮತಾಂತರ ಗೊಂಡವರನ್ನು ಪುನಃ ಶುದ್ಧೀಕರಿಸಿ ಹಿಂದೂ ಧರ್ಮಕ್ಕೆ ತಂದಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರು ನಿಜವಾದ ಅರ್ಥದಲ್ಲಿ ಹಿಂದೂ ರಾಜರಾಗಿದ್ದರೂ, ಈಗಿನ ಧಾರಾವಾಹಿಗಳು, ಚಲನಚಿತ್ರಗಳ ಮೂಲಕ ಶಿವಾಜಿ ಮಹಾರಾಜರ ಚರಿತ್ರೆಯ ಘಟನೆಗಳನ್ನು ತೋರಿಸುವಾಗ ಮುಸಲ್ಮಾನರ ವೈಭವೀಕರಣ ಮಾಡಲಾಗುತ್ತಿದೆ. ಈ ವಿಕೃತ ಇತಿಹಾಸವನ್ನು ನಿಲ್ಲಿಸಬೇಕಾಗಿದೆ, ಎಂದು ಶ್ರೀ. ಶಿಂದೆಯವರು ಹೇಳಿದರು.