ಮಂಗಳೂರಿನ ಸನಾತನದ ಸಾಧಕಿ ಕು. ಮಂಜೂಷಾ ಪೈ ಇವರು ಪ್ರಥಮ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ. ೯೯ ಅಂಕಗಳನ್ನುಗಳಿಸಿ ತೇರ್ಗಡೆ !

ಕು. ಮಂಜೂಷಾ ಪೈ

ಮಂಗಳೂರಿನ ಸನಾತನದ ಸಾಧಕಿ ಸೌ. ಲಕ್ಷ್ಮಿ ಪೈ ಇವರ ಮಗಳಾದ ಕು. ಮಂಜೂಷಾ ಪೈ ಇವರು ಪ್ರಥಮ ಪಿ.ಯು.ಸಿ.ಯಲ್ಲಿ ಶೇ. ೯೯ ರಷ್ಟು ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದಾರೆ. ಕು. ಮಂಜೂಷಾ ಪೈ ಇವರು ಕಳೆದ ೩ ವರ್ಷಗಳಿಂದ ಸನಾತನ ಸಂಸ್ಥೆಯ ಮಾರ್ಗದರ್ಶನಕ್ಕನುಸಾರ ಸಾಧನೆ ಮಾಡುತ್ತಿದ್ದಾರೆ. ಅವರು ಸನಾತನ ಪ್ರಭಾತದ ಜಾಹೀರಾತು ಸಂರಚನೆ ಮಾಡುವ ಸೇವೆಯನ್ನು ಮಾಡುತ್ತಿದ್ದಾರೆ. ‘ಕೇವಲ ಗುರುಕೃಪೆಯಿಂದಲೇ ಸೇವೆಯ ಜೊತೆಗೆ ವಿದ್ಯಾಭ್ಯಾಸ ಪಡೆಯುತ್ತಾ ಈ ಉನ್ನತ ಶ್ರೇಣಿಯನ್ನು ಪಡೆಯಲು ಸಾಧ್ಯವಾಗಿದೆ. ಅದಕ್ಕಾಗಿ ಶ್ರೀಗುರುಚರಣಗಳಲ್ಲಿ ಅನಂತ ಕೋಟಿ ಕೃತಜ್ಞತೆಗಳು ಎಂದು ಅವರು ಹೇಳಿದ್ದಾರೆ.