ಕೊರೋನಾ ರೋಗಾಣುಗಳ ಸಂಕ್ರಮಣದಿಂದ ಮೃತಪಟ್ಟ ಜನರ ಮೃತದೇಹಗಳನ್ನು ಶವಾಗಾರದಲ್ಲಿಡುವುದು ಅಥವಾ ಹೂಳುವುದಕ್ಕಿಂತ ಅಗ್ನಿ ಸಂಸ್ಕಾರ ಮಾಡುವುದೇ ಎಲ್ಲ ದೃಷ್ಟಿಯಿಂದ ಯೋಗ್ಯ !

ಕು. ಮಧುರಾ ಭೋಸಲೆ

‘ಸದ್ಯ ಕೊರೋನಾ ರೋಗದಿಂದ ಮೃತಪಟ್ಟ ಜನರ ಮೃತದೇಹಗಳು ಸ್ಪೇನ್, ಇಟಲಿ, ಅಮೇರಿಕಾ, ಕೊಲಂಬಿಯಾ, ಚೀನ ಇತ್ಯಾದಿ ದೇಶಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಂಗ್ರಹವಾಗುತ್ತಿವೆ. ಅವರು ಕೆಲವು ಶವಗಳನ್ನು ಶವಾಗಾರದಲ್ಲಿ ಇಡುತ್ತಿದ್ದಾರೆ ಹಾಗೂ ಕೆಲವು ಮೃತದೇಹಗಳನ್ನು ಹೂಳುತ್ತಿದ್ದಾರೆ. ಶವಗಳನ್ನು ಹೂಳಲು ಸ್ಥಳ ಕಡಿಮೆ ಬೀಳುತ್ತಿರುವುರಿಂದ ಕೆಲವು ಸ್ಥಳಗಳಲ್ಲಿ ಮಾಲ್‌ಗಳನ್ನು ಶವಾಗಾರವಾಗಿ ರೂಪಾಂತರಿಸಿ ಅಲ್ಲಿ ಮೃತದೇಹಗಳನ್ನು ಇಡುತ್ತಿದ್ದಾರೆ.

ಹೀಗೆ ‘ಮೃತದೇಹಗಳನ್ನು ಶವಾಗಾರದಲ್ಲಿಡುವುದರಿಂದ ಅಥವಾ ಹೂಳುವುದರಿಂದ ಆಗುವ ಹಾನಿ ಹಾಗೂ ಅಗ್ನಿಸಂಸ್ಕಾರವನ್ನು ಮಾಡಿ ಸುಡುವುದರಿಂದ ಆಗುವ ಲಾಭದ ವಿಷಯದಲ್ಲಿ ಸೂಕ್ಷ್ಮದಿಂದ ಸಿಕ್ಕಿದ ಜ್ಞಾನವನ್ನು ಕೆಳಗೆ ನೀಡುತ್ತಿದ್ದೇವೆ. (ಈ ಹಿಂದೆ ಆಪತ್ಕಾಲದ ಸಂದರ್ಭದಲ್ಲಿ ಸೂಕ್ಷ್ಮ ಜ್ಞಾನಪ್ರಾಪ್ತಕರ್ತ ಸಾಧಕರಿಗೆ ಸಿಕ್ಕಿದ ಜ್ಞಾನದಲ್ಲಿ ‘ಅನೇಕ ಸ್ಥಳಗಳಲ್ಲಿ ಮೃತದೇಹಗಳ ರಾಶಿ ಬೀಳುತ್ತದೆ ಹಾಗೂ ಸಾಮೂಹಿಕ ಅಂತ್ಯವಿಧಿಗಳನ್ನು ಮಾಡ ಬೇಕಾಗುವುದು, ಎಂಬ ವಿಷಯದ ಜ್ಞಾನ ಸಿಕ್ಕಿತ್ತು. ಅದರ ಸತ್ಯತೆಯು ಕೊರೋನಾ ರೋಗಾಣುಗಳಿಂದ ಮೃತಪಟ್ಟ ಜನರ ಸಂಖ್ಯೆಯಿಂದ ಅರಿವಾಗುತ್ತದೆ. – ಸಂಕಲನಕಾರರು)

೧. ಮೃತದೇಹಗಳನ್ನು ಹೂಳುವುದು ಅಥವಾ ಮೃತದೇಹಗಳನ್ನು ಶವಾಗಾರದಲ್ಲಿಡುವುದು ಇದರಿಂದಾಗುವ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಸ್ತರದಲ್ಲಿನ ಹಾನಿ

೧ ಅ. ಶಾರೀರಿಕ ಹಾನಿ : ಶವಾಗಾರದಲ್ಲಿ ಮೃತದೇಹಗಳನ್ನು ಇಡುವುದರಿಂದ ಮೃತದೇಹಗಳಲ್ಲಿನ ರೋಗಾಣುಗಳು ವಾತಾವರಣದಲ್ಲಿ ಹೆಚ್ಚಾಗಿ ಎಲ್ಲ ಕಡೆಗಳಲ್ಲಿಯೂ ರೋಗ ಹಬ್ಬಬಹುದು. ಇದರಿಂದ ರೋಗವು ಹಬ್ಬಿ ಅನೇಕರ ಜೀವಕ್ಕೆ ಅಪಾಯ ನಿರ್ಮಾಣವಾಗಬಹುದು.

೧ ಆ. ಮಾನಸಿಕ ಹಾನಿ : ಎಲ್ಲಿಯವರೆಗೆ ಮೃತದೇಹ ನಾಶವಾಗುವುದಿಲ್ಲವೋ, ಅಲ್ಲಿಯ ತನಕ ಮೃತ ವ್ಯಕ್ತಿಯ ಲಿಂಗದೇಹವು ಅವನ ಮೃತ ದೇಹದ ಸುತ್ತಲು ಸುಳಿದಾಡುತ್ತಿರುತ್ತದೆ, ಹಾಗೆಯೇ ಮೃತವ್ಯಕ್ತಿಗಳ ಸಂಬಂಧಿಕರಲ್ಲಿ ಹಾಗೂ ಆಪ್ತರಲ್ಲಿ ಮೃತ ದೇಹಕ್ಕೆ ಸಂಬಂಧಿಸಿದ ಭಾವನೆಗಳು ಜಾಗೃತವಾಗಿರುತ್ತವೆ. ಆದ್ದರಿಂದ ಆ ಸಮಯದಲ್ಲಿ ಮೃತ ವ್ಯಕ್ತಿಯ ನೆನಪಾಗುವ ಪ್ರಮಾಣವೂ ಹೆಚ್ಚಿರುತ್ತದೆ. ಈ ರೀತಿ ಮೃತ ವ್ಯಕ್ತಿಯ ಲಿಂಗದೇಹ ಅವನನ್ನು ನೆನಪಿಸಿಕೊಳ್ಳುವವರೊಂದಿಗೆ ಭಾವನಾತ್ಮಕ ಸ್ತರದಲ್ಲಿ ಜೊತೆಯಾಗಿರುತ್ತದೆ. ಆದುದರಿಂದ ಅವನಿಗೆ ಮುಂದಿನ ಗತಿ ಸಿಗುವುದಿಲ್ಲ ಹಾಗೂ ಅವನು ತನ್ನ ಮೃತದೇಹದ ಸುತ್ತಲು ಸತತವಾಗಿ ಸುಳಿದಾಡುತ್ತಿರುತ್ತಾನೆ.

೧ ಇ. ಆಧ್ಯಾತ್ಮಿಕ ಹಾನಿ : ಮೃತದೇಹವನ್ನು ಶವಾಗಾರದಲ್ಲಿಡುವುದರಿಂದ ಅಥವಾ ಹೂಳುವುದರಿಂದ ಮೃತದೇಹವನ್ನು ಹಾಗೂ ಮೃತ ವ್ಯಕ್ತಿಯ ಲಿಂಗದೇಹವನ್ನು ಪಾತಾಳದಲ್ಲಿರುವ ಕೆಟ್ಟ ಶಕ್ತಿಗಳು ಹಾಗೂ ಅಘೋರಿ ವಿಧಿಗಳನ್ನು ಮಾಡುವ ತಾಂತ್ರಿಕರು ತಮ್ಮ ನಿಯಂತ್ರಣದಲ್ಲಿ ತೆಗೆದುಕೊಳ್ಳಬಹುದು. ಆದ್ದರಿಂದ ಕೇವಲ ಸಂಬಂಧಪಟ್ಟ ಮೃತವ್ಯಕ್ತಿಯ ಲಿಂಗದೇಹಕಷ್ಟೇ ಅಲ್ಲ, ಅವರ ಕುಟುಂಬದವರಿಗೂ ಕೆಟ್ಟ ಶಕ್ತಿಗಳ ತೊಂದರೆಯಾಗಬಹುದು. ಮೃತದೇಹವು ಪೃಥ್ವಿಯ ಮೇಲಿರುವುದರಿಂದ ಪೃಥ್ವಿಯ ಮೇಲೆ ಅದರ ಸ್ಥಾನ ನಿರ್ಮಾಣವಾಗುತ್ತದೆ. ಆದ್ದರಿಂದ ಮೃತ ವ್ಯಕ್ತಿಯ ಲಿಂಗದೇಹಕ್ಕೆ ಪೃಥ್ವಿಯ ಕಕ್ಷೆಯಿಂದ ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ. ಅದೇರೀತಿ ಪೃಥ್ವಿಯ ಮೇಲೆ ಅದರ ಸ್ಥಾನ ನಿರ್ಮಾಣವಾಗುವುದರಿಂದ ಪ್ರಥ್ವಿಯ ಮೇಲಿನ ರಜ-ತಮ ಹಾಗೂ ಕಪ್ಪು ಶಕ್ತಿಯ ಪ್ರಮಾಣ ಹೆಚ್ಚಾಗುತ್ತದೆ. ಇದರ ಪರಿಣಾಮದಿಂದ ಪೃಥ್ವಿಯ ಮೇಲೆ ಸ್ಥೂಲದಲ್ಲಿ ಹಾಗೂ ಸೂಕ್ಷ್ಮದಲ್ಲಿ ಮಾಲಿನ್ಯ ಹೆಚ್ಚಾಗುತ್ತದೆ.

೨. ಮೃತದೇಹವನ್ನು ಅಗ್ನಿಸಂಸ್ಕಾರದ ಮೂಲಕ ದಹನ ಮಾಡುವುದರಿಂದ ವ್ಯಷ್ಟಿ ಸ್ತರದಲ್ಲಿ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಸ್ತರದಲ್ಲಾಗುವ ಲಾಭಗಳು

೨ ಅ. ಶಾರೀರಿಕ ಲಾಭಗಳು : ಅಗ್ನಿಯ ಜ್ವಾಲೆಯಲ್ಲಿರುವ ದಾಹಕತೆಯಿಂದ ಮೃತದೇಹದಲ್ಲಿನ ರೋಗಾಣುಗಳು ನಾಶವಾಗುತ್ತವೆ. ಆದ್ದರಿಂದ ರೋಗಾಣುಗಳ ಸಂಕ್ರಮಣ ಆಗುವುದಿಲ್ಲ.

೨ ಆ. ಮಾನಸಿಕ ಲಾಭಗಳು : ಅಗ್ನಿಸಂಸ್ಕಾರ ಮಾಡುವುದರಿಂದ ಮೃತದೇಹವು ಶೀಘ್ರ ಗತಿಯಲ್ಲಿ ಪಂಚತತ್ತ್ವಗಳಲ್ಲಿ ವಿಲೀನವಾಗುತ್ತದೆ. ಇದರಿಂದ ಮೃತದೇಹರೂಪಿ ಮೃತ ವ್ಯಕ್ತಿಯ ಅಸ್ತಿತ್ವವು ಕೊನೆಗೊಳ್ಳುವುದರಿಂದ ಮೃತ ವ್ಯಕ್ತಿಯ ಲಿಂಗದೇಹ ಹಾಗೂ ಅವನ ಆಪ್ತೇಷ್ಟರಲ್ಲಿನ ಭಾವನಿಕ ಸಂಬಂಧವೂ ಬೇಗನೇ ಕೊನೆಗೊಳ್ಳುತ್ತದೆ. ಇದರಿಂದ ಮೃತ ವ್ಯಕ್ತಿಯ ಲಿಂಗದೇಹಕ್ಕೆ ಮೃತ್ಯುವಿನ ನಂತರದ ಮುಂದಿನ ಪ್ರವಾಸ ಮಾಡುವುದು ಸುಲಭವಾಗುತ್ತದೆ.

೨ ಇ. ಆಧ್ಯಾತ್ಮಿಕ ಲಾಭಗಳು : ಅಗ್ನಿಸಂಸ್ಕಾರ ಮಾಡುವುದರಿಂದ ಮೃತದೇಹವು ಪಂಚತತ್ತ್ವಗಳಲ್ಲಿ ಶೀಘ್ರ ಗತಿಯಲ್ಲಿ ವಿಲೀನವಾಗುವುದರಿಂದ ಮೃತ ದೇಹ ಹಾಗೂ ಮೃತವ್ಯಕ್ತಿಯ ಲಿಂಗದೇಹದ ಮೇಲೆ ಕೆಟ್ಟ ಶಕ್ತಿಗಳಿಗೆ ನಿಯಂತ್ರಣ ಪಡೆಯಲು ಸಾಧ್ಯವಾಗುವುದಿಲ್ಲ. ಅದೇರೀತಿ ಲಿಂಗದೇಹಕ್ಕೆ ಮೃತ್ಯೋತ್ತರ ಪ್ರವಾಸ ಮಾಡಲು ಬೇಕಾಗುವ ಆಧ್ಯಾತ್ಮಿಕ ಊರ್ಜೆಯು ಅಗ್ನಿಯಿಂದ ಸಿಗುವುದರಿಂದ ಅದು ಪೃಥ್ವಿಯ ಕಕ್ಷೆಯಿಂದ ಬೇಗನೇ ಹೊರಗೆ ಹೋಗುತ್ತದೆ. ಹೀಗೆ ಮೃತದೇಹಕ್ಕೆ ಅಗ್ನಿಸಂಸ್ಕಾರ ಮಾಡಿ ದಹನ ಮಾಡುವುದರಿಂದ ವ್ಯಷ್ಟಿ ಹಾಗೂ ಸಮಷ್ಟಿ ಸ್ತರದಲ್ಲಿ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಹೀಗೆ  ಮೂರು ಸ್ತರಗಳಲ್ಲಿ ಲಾಭವಾಗುವುದು.

೩.ಮೃತದೇಹವನ್ನು ಅಗ್ನಿಸಂಸ್ಕಾರಗಳ ಮೂಲಕ ದಹನ ಮಾಡುವುದರಿಂದ ಸಮಷ್ಟಿ ಸ್ತರದಲ್ಲಿ ಶಾರೀರಿಕ, ಆರ್ಥಿಕ ಹಾಗೂ ಆಧ್ಯಾತ್ಮಿಕ ಮಟ್ಟದಲ್ಲಾಗುವ ಲಾಭಗಳು

೩ ಅ. ಶಾರೀರಿಕ ಲಾಭಗಳು : ಎಲ್ಲೆಡೆಯಾಗುವ ರೋಗಾಣುಗಳ ಸಂಕ್ರಮಣ ನಿಲ್ಲುವುದರಿಂದ ಅನೇಕ ಜನರ ಪ್ರಾಣ ಉಳಿಯುವುದು. ಅದರಂತೆ ಶವಾಗಾರ ಹಾಗೂ ಹೂಳುವ ಭೂಮಿಯನ್ನು ನೋಡಿಕೊಳ್ಳಲು ಖರ್ಚಾಗುವ ಶಾರೀರಿಕ ಬಲವು ಕೂಡಾ ಉಳಿಯುತ್ತದೆ. ಹಾಗೆಯೇ ಹೂಳಲು ಬೇಕಾಗುವ ಭೂಮಿಯೂ ಉಳಿಯುವುದು. ಅದನ್ನು ಇತರ ಕಾರ್ಯಗಳಿಗಾಗಿ ಉಪಯೋಗಿಸಬಹುದು.

೩ ಆ. ಆರ್ಥಿಕ ಲಾಭಗಳು : ಶವಾಗಾರವನ್ನು ನಡೆಸುವುದು ಅಥವಾ ಹೂಳುವ ಭೂಮಿಯನ್ನು ನೋಡಿಕೊಳ್ಳಲು ಬೇಕಾಗುವ ಸರಕಾರಿ ಹಣದ ಉಳಿತಾಯವಾಗುವುದು. ಆ ಧನವನ್ನು ಸಮಾಜ ಕಾರ್ಯ ಅಥವಾ ರಾಷ್ಟ್ರ ಕಾರ್ಯಕ್ಕಾಗಿ ಉಪಯೋಗಿಸಬಹುದು.

೩ ಇ. ಆಧ್ಯಾತ್ಮಿಕ ಲಾಭಗಳು : ಸಮಾಜದಲ್ಲಿನ ಅತೃಪ್ತ ಲಿಂಗದೇಹಗಳ ಪ್ರಮಾಣವು ಕಡಿಮೆಯಾಗುವುದರಿಂದ ಅನೇಕರ ಆಧ್ಯಾತ್ಮಿಕ ತೊಂದರೆಗಳಿಂದಾಗುವ ಶಾರೀರಿಕ ರೋಗಗಳು, ಮನೋರೋಗಗಳು ಹಾಗೂ ಆಧ್ಯಾತ್ಮಿಕ ತೊಂದರೆಗಳು ಕಡಿಮೆಯಾಗುವವು. ಇದರಿಂದ ಸಮಾಜಮನವು ಆರೋಗ್ಯವಂತ ಹಾಗೂ ಆನಂದವಾಗಿರಬಹುದು.

೪. ಮೃತದೇಹವನ್ನು ಶವಾಗಾರದಲ್ಲಿಡುವುದು, ಮೃತದೇಹವನ್ನು ಹೂಳುವುದು ಮತ್ತು ಮೃತದೇಹದ ಮೇಲೆ ಅಗ್ನಿಸಂಸ್ಕಾರ ಮಾಡಿ ದಹನ ಮಾಡುವುದು ಇವುಗಳ ನಡುವಿನ ವ್ಯತ್ಯಾಸ !

ಟಿಪ್ಪಣಿ ೧ – ಮೃತದೇಹದ ಮೇಲೆ ಅಗ್ನಿಸಂಸ್ಕಾರ ಮಾಡಿ ದಹನ ಮಾಡಲು ತಗಲುವ ಖರ್ಚ

ಟಿಪ್ಪಣಿ ೨ – ಯಾವುದಾದರೂಬ್ಬ ವ್ಯಕ್ತಿಯಲ್ಲಿ ವಾಸನೆಗಳು, ಸ್ವಭಾವದೋಷಗಳು ಅಥವಾ ಅಹಂಕಾರ ತೀವ್ರವಾಗಿದ್ದರೆ, ಅವನ ಮೃತ್ಯುವಿನ ನಂತರ ಅವನ ಮೇಲೆ ಅಗ್ನಿಸಂಸ್ಕಾರ ಮಾಡಿದರೂ ಕರ್ಮಫಲನ್ಯಾಯದಂತೆ ಅವನ ಲಿಂಗದೇಹವು ಸೂಕ್ಷ್ಮದಲ್ಲಿ ಕೆಟ್ಟ ಶಕ್ತಿಯಾಗಿ ರೂಪಾಂತರವಾಗಬಹುದು ಮತ್ತು ಅದರಿಂದ ಅವನ ಕುಟುಂಬದವರಿಗೆ ಹಾಗೂ ಸಮಾಜಕ್ಕೆ ಕೆಲವೊಂದು ಪ್ರಮಾಣದಲ್ಲಿ ತೊಂದರೆಯಾಗಬಹುದು. ಈ ತೊಂದರೆಯಾಗಬಾರದೆಂದು ಹಿಂದೂ ಧರ್ಮದಲ್ಲಿ ಮೃತ ವ್ಯಕ್ತಿಯ ‘ಪಿಂಡದಾನ ಹಾಗೂ ಶ್ರಾದ್ಧವಿಧಿಗಳನ್ನು ಮಾಡುವುದು,  ಹಾಗೆಯೇ ವಾಸ್ತುವಿಗೆ ತೊಂದರೆಯಾಗಬಾರದು ಮತ್ತು ವಾಸ್ತುವಿನ ಶುದ್ಧಿಗಾಗಿ ಉದಕಶಾಂತಿ ಮಾಡುವುದು, ರಕ್ಷೋಘ್ನ ಯಜ್ಞ ಮಾಡುವುದು, ಹೀಗೆ ಕರ್ಮಕಾಂಡಾನುಸಾರ ಉಪಾಯಗಳನ್ನು ಹೇಳಲಾಗಿದೆ. ಅದರಂತೆ ಉಪಾಸನಾಕಾಂಡಕ್ಕನುಸಾರ ಮೃತ ವ್ಯಕ್ತಿಯ ಸಂಬಂಧಿಕರಿಗೆ ಮೃತ ವ್ಯಕ್ತಿಯ ಆತ್ಮಕ್ಕೆ ಶಾಂತಿ ಹಾಗೂ ಸದ್ಗತಿ ಸಿಗಲಿ ಎಂಬುದಕ್ಕಾಗಿ ‘ಶ್ರೀಗುರುದೇವ ದತ್ತ| ಹಾಗೂ ಸೂಕ್ಷ್ಮದಲ್ಲಿ ಕೆಟ್ಟ ಶಕ್ತಿಗಳ ತೊಂದರೆ ಆಗುವುದು ಬೇಡ ಎಂಬುದಕ್ಕಾಗಿ ‘ಶ್ರೀ ಹನುಮತೆ ನಮಃ| ಇತ್ಯಾದಿ ನಾಮಜಪಗಳನ್ನು ಮಾಡಲು ಹೇಳಲಾಗಿದೆ.

೫. ನಿಷ್ಕರ್ಷ

೫ ಅ. ಮೃತದೇಹವನ್ನು ಭೂಮಿಯಲ್ಲಿ ಹೂಳುವುದು ಅಥವಾ ಅದನ್ನು ಶವಾಗಾರದಲ್ಲಿಡುವುದಕ್ಕಿಂತ ಅದರ ಮೇಲೆ ಅಗ್ನಿಸಂಸ್ಕಾರ ಮಾಡಿ ಅದನ್ನು ದಹನ ಮಾಡುವುದು ಎಲ್ಲ ದೃಷ್ಟಿಯಿಂದಲೂ ಯೋಗ್ಯವಾಗಿದೆ : ಮೃತದೇಹವನ್ನು ದಫನ ಮಾಡುವುದು ಅಥವಾ ಅದನ್ನು ಶವಾಗಾರದಲ್ಲಿಡುವುದರಿಂದ ಶಾರೀರಿಕ, ಮಾನಸಿಕ, ಆರ್ಥಿಕ ಹಾಗೂ ಆಧ್ಯಾತ್ಮಿಕ ಸ್ತರದಲ್ಲಾಗುವ ಹಾನಿಗಳನ್ನು ತಡೆಯಲು ಮೃತದೇಹದ ಮೇಲೆ ಅಗ್ನಿಸಂಸ್ಕಾರಮಾಡಿ ಅದನ್ನು ದಹನ ಮಾಡುವುದು ಎಲ್ಲ ದೃಷ್ಟಿಯಿಂದಲೂ ಯೋಗ್ಯವಾಗಿದೆ.

೫ ಆ. ಹಿಂದೂ ಧರ್ಮದ ಮಹಾನತೆ, ಪರಿಪೂರ್ಣತೆ ಹಾಗೂ ಶ್ರೇಷ್ಠತೆ ಮತ್ತೊಮ್ಮೆ ಸಿದ್ಧವಾಗುವುದು : ಹಿಂದೂ ಧರ್ಮವನ್ನು ಆಚರಿಸುವಾಗ ಮೃತದೇಹದ ಮೇಲೆ ಅಗ್ನಿಸಂಸ್ಕಾರ ಮಾಡಿ ಅದನ್ನು ದಹನ ಮಾಡುವುದರಿಂದ ವ್ಯಕ್ತಿ, ಕುಟುಂಬ, ಸಮಾಜ, ರಾಷ್ಟ್ರ ಹಾಗೂ ವಿಶ್ವ ಇವುಗಳಿಗೆ ಸ್ಥೂಲ ಹಾಗೂ ಸೂಕ್ಷ್ಮ ದೃಷ್ಟಿಯಿಂದ ಲಾಭವಾಗುತ್ತದೆ. ಇದರಿಂದ ಹಿಂದೂ ಧರ್ಮದಲ್ಲಿ ‘ವ್ಯಕ್ತಿಯ ಮೃತದೇಹದ ಮೇಲೆ ಅಗ್ನಿಸಂಸ್ಕಾರಮಾಡಿ ಅದನ್ನು ದಹನ ಮಾಡಲು ಹೇಳುವುದರ ಹಿಂದಿನ ಶಾಸ್ತ್ರದ ಕಾರ್ಯಕಾರಣಭಾವ ಎಷ್ಟು ವ್ಯಾಪಕ ಹಾಗೂ ಲಾಭದಾಯಕವಾಗಿದೆ ಎಂಬುದು ಗಮನಕ್ಕೆ ಬರುತ್ತದೆ. ಇದರಿಂದ ಹಿಂದೂ ಧರ್ಮದ ಮಹಾನತೆ, ಪರಿಪೂರ್ಣತೆ ಹಾಗೂ ಶ್ರೇಷ್ಠತೆ ಮತ್ತೊಮ್ಮೆ ಸಿದ್ಧವಾಗುತ್ತದೆ. – ಕು. ಮಧುರಾ ಭೋಸಲೆ (ಸೂಕ್ಷ್ಮದಲ್ಲಿ ಸಿಕ್ಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥೀ, ಗೋವಾ (೩೧.೩.೨೦೨೦)