ಆಪತ್ಕಾಲದಲ್ಲಿ ದಿಕ್ಕುತೋರುವ ಸಂತರ ಅಮೃತವಾಣಿ

ಪೂ. ರಮಾನಂದ ಗೌಡ

ಪ್ರಸ್ತುತ ವಿವಿಧ ವಿಪತ್ತುಗಳಿಂದಾಗಿ ಮಾನವನು ದಿಕ್ಕೆಟ್ಟಿದ್ದಾನೆ. ಇಂತಹ ಈ ಘೋರ ಆಪತ್ಕಾಲದಲ್ಲಿ ವಿಜ್ಞಾನವಲ್ಲ ಬದಲಾಗಿ ಸಾಧನೆಯಿಂದಲೇ ಅವನಿಗೆ ಸುಖ ಮತ್ತು ಶಾಂತಿ ಲಭಿಸಲಿದೆ. ಈ ಹಿನ್ನೆಲೆಯಲ್ಲಿ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಸಾಧನೆಯ ಕುರಿತಾದ ‘ಆನ್‌ಲೈನ್ ಸತ್ಸಂಗಗಳ ಆಯೋಜನೆ ಮಾಡಲಾಗುತ್ತಿದೆ ಇತ್ತೀಚೆಗೆ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ‘ಜಾಗತಿಕ ಸಂಕಟಗಳು : ಧರ್ಮದ ಕುರಿತು ದೃಷ್ಟಿಕೋನ ಮತ್ತು ಉಪಾಯ ಇದರ ಬಗ್ಗೆ ಮಾರ್ಗದರ್ಶನ ಮಾಡಿದರು. ಅವರು ಮಾಡಿದ ಮಾರ್ಗದರ್ಶನದ ಆಯ್ದ ಭಾಗವನ್ನು ಇಲ್ಲಿ ಕ್ರಮಶಃ ಮುದ್ರಿಸುತ್ತಿದ್ದೇವೆ.

೫. ಆಪತ್ಕಾಲ ಏಕೆ ಬರುತ್ತದೆ ?

‘ಕಳೆದ ಒಂದು ದಶಕದಿಂದ ಇಡೀ ಜಗತ್ತಿನಲ್ಲಿ ನೈಸರ್ಗಿಕ ವಿಪತ್ತಿನ ತೀವ್ರತೆ ಹೆಚ್ಚಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಿಸರ್ಗದ ಭಯಾನಕ ಸಾಮರ್ಥ್ಯವನ್ನು ನಾವು ಅನುಭವಿಸುತ್ತಿದ್ದೇವೆ. ಕೆಲವು ಸಮಯಗಳ ಹಿಂದೆ ದಕ್ಷಿಣ-ಏಶಿಯಾ ಹಾಗೂ ಜಪಾನಿನಲ್ಲಿ ಬಂದಂತಹ ಸುನಾಮಿ, ಅದೇರೀತಿ ಪಾಕಿಸ್ತಾನ, ಹೈತಿ ಹಾಗೂ ಚೀನಾದಲ್ಲಿ ಆದಂತಹ ಭೂಕಂಪ, ಅದರೊಂದಿಗೆ ‘ಕಟರಿನಾ ಹಾಗೂ ಉತ್ತರ ಮತ್ತು ಮಧ್ಯ ಅಮೇರಿಕಾದಲ್ಲಿ ಬಂದಿದ್ದ ಇತರ ಚಂಡಮಾರುತ ಇತ್ಯಾದಿ ನೈಸರ್ಗಿಕ ವಿಪತ್ತುಗಳನ್ನು ನಾವು ನೋಡಿದ್ದೇವೆ. ಅವುಗಳ ತೀವ್ರತೆಯಿಂದಾಗಿ ಉಂಟಾದ ಮಹಾಭಯಾನಕ ವಿಧ್ವಂಸಕ ಹಾಗೂ ಜೀವಹಾನಿ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ನಿಸರ್ಗದ ಈ ಪ್ರಕೋಪಕ್ಕೆ ಕಾರಣವೇನೆಂದು ಮೊದಲು ತಿಳಿದುಕೊಳ್ಳಬೇಕು.

೫ ಅ. ಇಡೀ ವಿಶ್ವದಲ್ಲಿ ಜಾತ್ಯತೀತ ವಿಚಾರಧಾರೆಯ ಸೆಮೆಟಿಕ್ ವಿಚಾರಧಾರೆಯ ಪಂಥ : ಇಸ್ಲಾಂ ಹಾಗೂ ಕ್ರೈಸ್ತರಲ್ಲಿ ಪುಣ್ಯದ ಯಾವುದೇ ಸಂಕಲ್ಪನೆಯಿಲ್ಲ. ಅವರ ಪ್ರವಾದಿ ಹೇಳಿದ ಮಾರ್ಗದಲ್ಲಿ ಸಾಗುವುದೇ ಪುಣ್ಯಕರವಾಗಿದೆ ಹಾಗೂ ಅದರ ವಿರುದ್ಧ ಕೃತಿ ಮಾಡುವುದು ಪಾಪವಾಗಿದೆ ಎಂದು ಅವರು ತಿಳಿದಿದ್ದಾರೆ. ಈ ಪಂಥಗಳಲ್ಲಿ ಮಾನವನೇ ಸರ್ವಶ್ರೇಷ್ಠನಿದ್ದಾನೆ ಹಾಗೂ ಸಂಪೂರ್ಣ ಸೃಷ್ಟಿಯು ಅವನ ಭೋಗಕ್ಕಿದೆ ಎಂಬ ವಿಚಾರಧಾರೆಯಿದೆ. ಇದರ ಪರಿಣಾಮವಾಗಿ ಪೃಕೃತಿಯ ಬೇಕಾಬಿಟ್ಟಿಯಾಗಿ ಉಪಯೋಗಿಸಿ, ಪ್ರಕೃತಿಯ ನಾಶಕ್ಕೆ ಕಾರಣನಾಗಿದ್ದಾನೆ. ಆದರೆ ಹಿಂದೂ ಧರ್ಮದಲ್ಲಿ ಪ್ರಕೃತಿ, ಮರ, ಗಿಡ, ಪ್ರಾಣಿ ಇವುಗಳಲ್ಲಿ ದೇವರು ಇದ್ದಾನೆ ಭಾವನೆ ಇತ್ತು. ಆದರೆ ದೌರ್ಭಾಗ್ಯದಿಂದ ಇಂದು ಭಾರತದಲ್ಲಿ ಅದಕ್ಕೆ ಹಿಂದೂ ಧರ್ಮ ಬಿಟ್ಟು, ಪಾಶ್ಚಾತ್ಯರ ಮತಕ್ಕೆ ರಾಜಾಶ್ರಯ ಇದೆ ಮತ್ತು ಅವರ ಶಿಕ್ಷಣ ಪದ್ದತಿಯನ್ನು ಹಿಂದೂ ಮಕ್ಕಳಿಗೆ ಕಲಿಸುತ್ತಿದ್ದೇವೆ. ಇದರ ಪರಿಣಾಮವಾಗಿ ಪರಿಸರವನ್ನು ಹಾಳು ಮಾಡುವುದು, ಪ್ರಾಣಿ-ಪಕ್ಷಿಗಳ ಹತ್ಯೆ ಮಾಡುವುದು, ಕೊಲೆ, ಅನೈತಿಕತೆ, ಅಪರಾಧ, ಗುಂಡಾಗಿರಿಯಂತಹ ತಾಮಸಿಕ ವೃತ್ತಿ ಹೆಚ್ಚಾಗುತ್ತಿವೆ. ಮನುಷ್ಯ ಕಾಡುಮೃಗವಾದರೆ, ಕಾಡಿನ ವನ್ಯಜೀವಿಗಳು ನಗರಗಳಲ್ಲಿ ಪ್ರವೇಶಿಸುತ್ತವೆ, ಮಳೆ ಮಾರುತ ಮನುಷ್ಯನಿಗೆ ವಿರುದ್ಧವಾಗಿ ವರ್ತನೆ ಮಾಡುತ್ತದೆ. ಅಂದರೆ ಮನುಷ್ಯನ ಈ ವೃತ್ತಿಯೇ ಈ ಆಪತ್ತುಗಳಿಗೆ ಆಮಂತ್ರಣ ನೀಡಿದೆ.

೫ ಆ. ಮಾನವನ ಸ್ವಾರ್ಥ : ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಸಮುದ್ರ ಹಾಗೂ ನದಿಗಳನ್ನು ಕಲುಷಿತ ಮಾಡುವುದು, ಅಲ್ಲಿ ಅಭಿವೃದ್ದಿ ಹೆಸರಿನಲ್ಲಿ ಸುಂದರ ಪರಿಸರ ಹಾಳು ಮಾಡುವುದು, ಪ್ರಾಣಿಗಳನ್ನು ಕೊಲ್ಲುವುದು, ಹಾಗೂ ಜಲ ಪ್ರದೂಷಣೆ ಮಾಡಿ, ರಾಸಾಯನಿಕಗಳಿಂದ ಭೂಮಿಯನ್ನು ಬರಡುಗೊಳಿಸಿ ಎಲ್ಲ ಆಪತ್ತುಗಳನ್ನು ಎದುರಿಸಬೇಕಾಗಿದೆ. ಉದಾಹರಣೆಗೆ ಇಂದು ಸಮುದ್ರದ ದಂಡೆಗಳಲ್ಲಿ ಉಪ್ಪು ನೀರಿನಲ್ಲಿ ಬೆಳೆಯುವ ಪ್ರಕೃತಿಯ ಸಂರಕ್ಷಣೆಯನ್ನು ಮಾಡುವ ಮ್ಯಾಂಗ್ರೋವ್ ಕಾಡುಗಳನ್ನು ತೆಗೆದು ಆ ಪ್ರದೇಶಗಳಲ್ಲಿ ಅತಿಕ್ರಮಣ ಮಾಡಲಾಗುತ್ತಿದೆ. ಅಲ್ಲಿ ತ್ಸುನಾಮಿಯ ಭಯಂಕರ ಪರಿಣಾಮವನ್ನು ನಾವು ತ್ಸುನಾಮಿಯ ಸಮಯದಲ್ಲಿಯೂ ನೋಡಿದ್ದೇವೆ. ಸದ್ಯದ ಕಾಲದಲ್ಲಿನ ಕೊರೋನಾ ರೋಗಾಣುವಿನ ಮಹಾಮಾರಿಯೂ ಇದರ ಒಂದು ಉದಾಹರಣೆಯೇ ಆಗಿದೆ.- ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ.