ಜೂನ್ 7 ರ ರಾತ್ರಿ ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ
ಇಸ್ರೇಲ್ ಪ್ರತಿಯಾಗಿ ಇರಾನ್‌ನ 15 ಸ್ಥಳಗಳನ್ನು ಗುರಿಯಾಗಿಸಿಕೊಂಡಿದೆ

ತೆಹ್ರಾನ್ / ಟೆಲ್ ಅವಿವ್ – ಗಲ್ಫ್ ದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಹೊಗೆಯಾಡುತ್ತಿದ್ದ ಉದ್ವಿಗ್ನತೆ ಮತ್ತೆ ಭುಗಿಲೆದ್ದಿದೆ. ಜೂನ್ 7 ರ ತಡರಾತ್ರಿ ಇರಾನ್ ಇಸ್ರೇಲ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೂಲಕ ದಾಳಿ ನಡೆಸಿತು. ಇದಕ್ಕೆ ಪ್ರತಿಯಾಗಿ ಕೆಲವೇ ಗಂಟೆಗಳಲ್ಲಿ ಇಸ್ರೇಲ್ ಸೈನ್ಯವು ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿ ಇರಾನ್ ಮೇಲೆ ದಾಳಿ ನಡೆಸಿತು.
ಯುದ್ಧಕ್ಕೆ ಸಂಬಂಧಿಸಿದ 6 ಪ್ರಮುಖ ಬೆಳವಣಿಗೆಗಳು !
1. ಇಸ್ರೇಲ್ ರಕ್ಷಣಾ ಪಡೆಯು, ಇಸ್ರೇಲ್ ವಾಯುಪಡೆಯು ಪಶ್ಚಿಮ ಮತ್ತು ಮಧ್ಯ ಇರಾನ್‌ನಲ್ಲಿನ ಮಿಲಿಟರಿ ಗುರಿಗಳ ಮೇಲೆ ದಾಳಿ ನಡೆಸಿದೆ ಎಂದು ತಿಳಿಸಿದೆ.
2. ಇರಾನ್ ಸೈನ್ಯವೂ ಇಸ್ರೇಲ್ ದಾಳಿಯನ್ನು ಖಚಿತಪಡಿಸಿದೆ. ಇಸ್ರೇಲ್ ವಾಯುಮಾರ್ಗದ ಮೂಲಕ ಉಡಾಯಿಸಲಾಗುವ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಿ ಇರಾನ್‌ನ ಸುಮಾರು 15 ಸ್ಥಳಗಳ ಮೇಲೆ ದಾಳಿ ನಡೆಸಿದೆ ಎಂದು ಅದು ಹೇಳಿದೆ. ತೆಹ್ರಾನ್‌ನಲ್ಲಿನ ಡ್ರೋನ್ ಉತ್ಪಾದನಾ ಕೇಂದ್ರವೂ ಗುರಿಯಾಗಿಸಿಕೊಂಡ ಸ್ಥಳಗಳಲ್ಲಿ ಸೇರಿದೆ.
3. ಸ್ಥಳೀಯ ಇರಾನ್ ಮಾಧ್ಯಮಗಳ ವರದಿ ಪ್ರಕಾರ, ತೆಹ್ರಾನ್, ತಬ್ರಿಜ್ ಮತ್ತು ಇಸ್ಫಹಾನ್ ಪ್ರದೇಶಗಳಲ್ಲಿ ಸ್ಫೋಟದ ಶಬ್ದಗಳು ಕೇಳಿಬಂದಿವೆ.
4. ಇರಾನ್ ರಾಜಧಾನಿ ತೆಹ್ರಾನ್‌ನ ‘ಇಮಾಮ್ ಖೊಮೇನಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ದ ಸಮೀಪವಿರುವ ವಾಯುಪ್ರದೇಶವನ್ನು ಮುಚ್ಚಿದೆ.
5. ಅಲ್ಲಿ ಮಧ್ಯ ಇಸ್ರೇಲ್‌ನ ಹಲವು ಭಾಗಗಳಲ್ಲಿ ಸೈರನ್ ಮೊಳಗಿಸಲಾಗಿದೆ. ಗುಶ್ ಡ್ಯಾನ್, ಜೆರುಸಲೆಮ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ಜಾಗರೂಕರಾಗಿರಲು ಸೂಚಿಸಲಾಗಿದೆ. ಸಂಭವನೀಯ ದಾಳಿಯ ಭೀತಿಯಿಂದಾಗಿ ಇಸ್ರೇಲ್ ತನ್ನ ವಾಯು ಗಡಿಯನ್ನು ತಾತ್ಕಾಲಿಕವಾಗಿ ಮುಚ್ಚಿದೆ.
6. ಈ ಎಲ್ಲದರ ನಡುವೆ ಯೆಮೆನ್‌ನ ಹೌತಿ ಬಂಡುಕೋರ ಗುಂಪು ಇಸ್ರೇಲ್ ಮೇಲಿನ ಇರಾನ್‌ನ ಕ್ಷಿಪಣಿ ದಾಳಿಯನ್ನು ಬಹಿರಂಗವಾಗಿ ಬೆಂಬಲಿಸಿದೆ.
ಭಾರತೀಯ ರಾಯಭಾರ ಕಚೇರಿಯಿಂದ ಭಾರತೀಯರಿಗೆ ತಕ್ಷಣ ಇರಾನ್ ತೊರೆಯಲು ಕರೆ !ಇರಾನ್‌ನಲ್ಲಿ ಹದಗೆಡುತ್ತಿರುವ ಪ್ರಾದೇಶಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತ ಸರಕಾರವು ತನ್ನ ನಾಗರಿಕರಿಗಾಗಿ ಹೊಸ ಮಾರ್ಗಸೂಚಿಯನ್ನು (ಅಡ್ವೈಸರಿ) ಹೊರಡಿಸಿದೆ. ತೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಎಲ್ಲಾ ಭಾರತೀಯರಿಗೆ ಇರಾನ್ ಪ್ರವಾಸವನ್ನು ತಪ್ಪಿಸಲು ಸಲಹೆ ನೀಡಿದ್ದು, ಇರಾನ್‌ನಲ್ಲಿರುವ ಭಾರತೀಯ ನಾಗರಿಕರು ಲಭ್ಯವಿರುವ ಸಾರಿಗೆ ಸೌಲಭ್ಯಗಳನ್ನು ಬಳಸಿಕೊಂಡು ಆದಷ್ಟು ಬೇಗ ಇರಾನ್ ತೊರೆಯುವಂತೆ ಸಲಹೆ ನೀಡಲಾಗಿದೆ. |
ಅಮೆರಿಕ ನೀಡಿದ ಸ್ಪಷ್ಟನೆ !
ಇರಾನ್ ಮೇಲಿನ ಇಸ್ರೇಲ್ ದಾಳಿಯಲ್ಲಿ ಅಮೆರಿಕ ಮಿಲಿಟರಿಯ ಪಾತ್ರವಿರಲಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಇಸ್ರೇಲ್ ದಾಳಿಯ ವ್ಯಾಪ್ತಿ ತಕ್ಕಮಟ್ಟಿಗೆ ಸೀಮಿತವಾಗಿತ್ತು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಮೂಲತಃ ಇರಾನ್ ದಾಳಿಯ ನಂತರ ಅಧ್ಯಕ್ಷ ಟ್ರಂಪ್ ಅವರು ನೆತನ್ಯಾಹು ಅವರಿಗೆ ಯಾವುದೇ ಪ್ರತಿದಾಳಿ ನಡೆಸದಂತೆ ಮನವಿ ಮಾಡಿದ್ದರು. ಇಸ್ರೇಲ್ ಪ್ರಧಾನಿ ಈ ಮನವಿಗೆ ಒಪ್ಪಿದ್ದರು ಎಂದು ‘ಆಕ್ಸಿಯೋಸ್’ ಸುದ್ದಿ ಸಂಸ್ಥೆ ವರದಿ ಮಾಡಿತ್ತು. ಆದಾಗ್ಯೂ, ಕೆಲವೇ ಗಂಟೆಗಳಲ್ಲಿ ಇಸ್ರೇಲ್ ಕಡೆಯಿಂದ ಪ್ರತಿದಾಳಿ ನಡೆಸಲಾಯಿತು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation