ನೀರನ್ನು ವ್ಯರ್ಥಗೊಳಿಸುವುದು ಅಕ್ಷಮ್ಯ ಅಪರಾಧ !

‘ಒಬ್ಬ ದರ್ಶನಾರ್ಥಿಯು ಲೋಟದಲ್ಲಿನ ಒಂದು ಗುಟುಕು ನೀರು ಕುಡಿದು ಉಳಿದ ನೀರನ್ನು ಚೆಲ್ಲಿಬಿಟ್ಟನು. ಶೇಗಾವದ ಪ.ಪೂ. ಗಜಾನನ ಮಹಾರಾಜರು ನೀರನ್ನು ಎಸೆದುದಕ್ಕಾಗಿ ಶಿಕ್ಷೆ ಎಂದು ಅವನಿಗೆ, ‘ನೀನು ಮುಂದಿನ ಜನ್ಮದಲ್ಲಿ ಎಲ್ಲಿ ನೀರಿಲ್ಲವೋ ಆ ಊರಿನಲ್ಲಿ ಹುಟ್ಟುವೆ ಎಂದರು.

ಪರಿಸರ ಸಂರಕ್ಷಣೆಯ ಕವಚ : ಅಗ್ನಿಹೋತ್ರ

ಅಗ್ನಿಹೋತ್ರವು ಪಂಚಮಹಾಯಜ್ಞಗಳ ಒಂದು ಭಾಗವಾಗಿದೆ. ದೇವಯಜ್ಞ ಅಥವಾ ಅಗ್ನಿಹೋತ್ರವನ್ನು ಮಾಡುವುದರಿಂದ ವಾಯು, ಮಳೆ ಮತ್ತು ಜಲ ಇವುಗಳ ಶುದ್ಧಿಯಾಗುತ್ತದೆ, ಹಾಗೆಯೇ ಒಳ್ಳೆಯ ಮಳೆಯಾಗಿ ಸಂಪೂರ್ಣ ಜಗತ್ತಿಗೆ ಸುಖ ಪ್ರಾಪ್ತಿಯಾಗುತ್ತದೆ. ಕಾಲಾಂತರದಲ್ಲಿ ಯಜ್ಞ ಈ ಶಬ್ದವು ಅಗ್ನಿಹೋತ್ರಕ್ಕೆ ರೂಢಿಯಾಯಿತು. ವೇದ ಮತ್ತು ವೈದಿಕ ಸಂಸ್ಕೃತಿಯಷ್ಟೇ ಅಗ್ನಿಹೋತ್ರದ ಇತಿಹಾಸವೂ ಪ್ರಾಚೀನವಾಗಿದೆ.

ಮೋಕ್ಷಪ್ರಾಪ್ತಿಗಾಗಿ ಮನುಷ್ಯ ದೇಹವನ್ನು ಸುದೃಢಗೊಳಿಸುವುದೇ ಆಯುರ್ವೇದದ ಗುರಿಯಾಗಿದೆ !

ಮನುಷ್ಯನು ಒಂದು ವೇಳೆ ೧೦೦ ವರ್ಷಗಳ ಕಾಲ ಬದುಕಿದಿದ್ದರೂ, ಅವನು ದೇಹದಿಂದ ವೃದ್ಧನಾಗದೇ ಕೇವಲ ವಯಸ್ಸಿನಿಂದ ವೃದ್ಧನಾದನು, ಹೀಗಾದರೆ ಮಾತ್ರ ಈ ಉದ್ದೇಶವು ನೆರವೇರುವುದು. ಅದಕ್ಕಾಗಿಯೇ ಆಯುರ್ವೇದವನ್ನು ಹೇಳಲಾಗಿದೆ. ರೋಗ ಬಂದಾಗ ಔಷಧಿ ಲಭ್ಯವಿರಬೇಕು, ಎಂಬುದು ಆಯುರ್ವೇದದ ಧೋರಣೆಯಾಗಿದೆ. ಔಷಧಿಗಳಿಗಾಗಿ ರೋಗಗಳಲ್ಲ. ಅದು ವೇದಗಳ ಪೂರ್ವಜ ಆಗಿದೆ ಮತ್ತು ಅದು ಈಶ್ವರನ ವಾಣಿಯಾಗಿದೆ.

ತನು-ಮನ-ಧನಗಳನ್ನು ಸಮರ್ಪಿಸಿ ಗುರುಸೇವೆಯನ್ನು ಮಾಡುವ ಚೆನ್ನೈನ ಸಾಧಕರಾದ ಶ್ರೀ. ಪಟ್ಟಾಭಿರಾಮನ್ ಪ್ರಭಾಕರನ್ ಇವರು ೧೦೫ ನೇ ವ್ಯಷ್ಟಿ ಸಂತಪದವಿಯಲ್ಲಿ ವಿರಾಜಮಾನ

ನಮ್ರತೆ, ಅಲ್ಪ ಅಹಂ ಇರುವ ಮತ್ತು ವೃದ್ಧಾಪ್ಯದಲ್ಲಿಯೂ ತಳಮಳದಿಂದ ಮತ್ತು ಭಾವಪೂರ್ಣ ಸೇವೆ ಮಾಡುವ ಸನಾತನದ ಸಾಧಕರಾದ ಶ್ರೀ ಪಟ್ಟಾಭಿರಾಮನ್ ಪ್ರಭಾಕರನ್ (ವಯಸ್ಸು ೭೬ ವರ್ಷ) ಇವರು ಸನಾತನದ ೧೦೫ ನೇ ವ್ಯಷ್ಟಿ ಸಂತಪದವಿಯಲ್ಲಿ ವಿರಾಜಮಾನರಾದ ಆನಂದವಾರ್ತೆಯನ್ನು ಸನಾತನದ ಸಂತರಾದ ಪೂ. (ಸೌ.) ಉಮಾ ರವಿಚಂದ್ರನ್ ಇವರು ೧೦.೧೨.೨೦೨೦ ರಂದು ಒಂದು ‘ಆನ್‌ಲೈನ್’ ಸತ್ಸಂಗದ ಮೂಲಕ ಘೋಷಿಸಿದರು.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಮಾಡುತ್ತಿರುವ ಪ್ರಾರ್ಥನೆ, ಎಂದರೆ ಈಶ್ವರನೊಂದಿಗೆ ಏಕರೂಪವಾಗಲು ಮಾಡಿದ ಭಾವಪುಷ್ಪಗಳ ಮಾಲೆ !

ಒಮ್ಮೆ ಆಶ್ರಮದಲ್ಲಿ ಒಂದು ಹವನವಾಯಿತು. ಹವನದ ಚೈತನ್ಯವು ಆಶ್ರಮವಾಸ್ತುವಿಗೆ ಮತ್ತು ಎಲ್ಲ ಸಾಧಕರಿಗೆ ಸಿಗಬೇಕು; ಎಂದು ಆ ಹವನದ ಕುಂಡದ ಧೂಮವು ಆಶ್ರಮದಲ್ಲಿ ಪ್ರತಿಯೊಂದು ಕೋಣೆಯಲ್ಲಿ ತೋರಿಸುವುದಿತ್ತು. ಪುರೋಹಿತರು ಶ್ರೀಚಿತ್‌ಶಕ್ತಿ  (ಸೌ.) ಗಾಡಗೀಳರ ಕೋಣೆಗೆ ಹವನಪಾತ್ರೆಯನ್ನು ತೆಗೆದುಕೊಂಡು ಬಂದನಂತರ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಎದ್ದು ನಿಂತು ಕೈಗಳನ್ನು ಜೋಡಿಸಿ ಅವರು ಹವನಪಾತ್ರೆಯತ್ತ ನೋಡಿ ಅಗ್ನಿನಾರಾಯಣನಿಗೆ ಗೌರವದಿಂದ ಮತ್ತು ಭಾವಪೂರ್ಣ ನಮಸ್ಕಾರವನ್ನು ಮಾಡಿದರು.

ತುಮಕೂರಿನ ‘ಯೋಗ ವಿಸ್ಮಯ ಟ್ರಸ್ಟ್ನ ಯೋಗಪ್ರಶಿಕ್ಷಕರಾದ ಅನಂತಜಿ ಗುರುಜಿಯವರ ಪುತ್ರಿ ಚಿ. ಲಹರಿ (೬ ತಿಂಗಳು) ಇವಳು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದಳೆಂದು ಘೋಷಣೆ !

ತುಮಕೂರಿನ ‘ಯೋಗ ವಿಸ್ಮಯ ಟ್ಟಸ್ಟ್ನ ಯೋಗಪ್ರಶಿಕ್ಷಕರಾದ ಶ್ರೀ. ಅನಂತಜಿ ಗುರುಜಿಯವರ ಮಗಳು ಚಿ. ಲಹರಿ (೬ ತಿಂಗಳು) ಇವಳು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡಳು. ಶ್ರೀ. ಅನಂತಜಿ ಗುರುಜಿಯವರು ಇಲ್ಲಿನ ಸನಾತನದ ಆಶ್ರಮದ ಸಾಧಕರಿಗೆ ಯೋಗಾಸನ ಮತ್ತು ಪ್ರಾಣಾಯಾಮಗಳ ಪ್ರಶಿಕ್ಷಣವನ್ನು ನೀಡಲು ಬಂದಿದ್ದರು.

ನಮ್ರತೆ ಹಾಗೂ ಇತರರ ವಿಚಾರ ಮಾಡುವ ಶ್ರೀ. ಅನಂತಜಿ ಗುರುಜಿ !

ಶ್ರೀ. ಅನಂತಜಿ ಗುರುಜಿಯವರು, “ಆಶ್ರಮಕ್ಕೆ ಬಂದ ದಿನದಿಂದ ಪ್ರತಿದಿನ ತಮ್ಮ ಮನಸ್ಸಿನಲ್ಲಿ ಬಹಳಷ್ಟು ಸಾತ್ತ್ವಿಕ ಭಾವವು ಜಾಗೃತವಾಗುತ್ತಿದೆ, ಎಂದು ಹೇಳಿದರು. ಶ್ರೀ. ಅನಂತಜಿಯವರು ಯಾವಾಗ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಾರೋ, ಆಗ ಆ ಸ್ಥಳಗಳಲ್ಲಿ ಮನಸ್ಸಿನಲ್ಲಿ ಯಾವ ಭಾವ ಅಥವಾ ಭಾವನೆಗಳು ಜಾಗೃತವಾಗುತ್ತವೆ, ಎಂದು ಅವರು ಯಾವಾಗಲೂ ಅಧ್ಯಯನ ಮಾಡುತ್ತಾರೆ.

ಸೂಕ್ಷ್ಮ ಜ್ಞಾನ ಪ್ರಾಪ್ತಕರ್ತೆ ಸಾಧಕಿ ಕು. ಮಧುರಾ ಭೋಸಲೆ ಇವರಿಗೆ ಶ್ರೀ. ಅನಂತಜಿ ಗುರುಜಿಯವರ ಬಗ್ಗೆ ಗಮನಕ್ಕೆ ಬಂದ ಅಂಶಗಳು

ಶ್ರೀ. ಅನಂತಜಿ ಗುರುಜಿ ಇವರು ತುಮಕೂರಿನವರಾಗಿದ್ದು ಅವರು ‘ಯೋಗ ವಿಸ್ಮಯ ಟ್ರಸ್ಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅವರು ಕಳೆದ ೯ ವರ್ಷ ಸಾತ್ತ್ವಿಕ ಆಹಾರ, ಯೋಗ ಹಾಗೂ ವಿವಿಧ ಮನೆ ಮದ್ದುಗಳ ವನಸ್ಪತಿಗಳ ಅಧ್ಯಯನ ಮಾಡುತ್ತಿದ್ದಾರೆ ಹಾಗೂ ಅವರಿಗೆ ಇವೆಲ್ಲದರ ಬಗ್ಗೆ ಆಳವಾದ ಅಧ್ಯಯನವಿದೆ. ‘ಪ್ರಜಾ ವಾಹಿನಿಯಲ್ಲಿ ಶ್ರೀ. ಅನಂತಜಿ ಗುರುಜಿ ಇವರ ಯೋಗ ಹಾಗೂ ಪ್ರಾಣಾಯಾಮ ಇವುಗಳನ್ನಧರಿಸಿದ ಮಾಲಿಕೆ ನಡೆಯುತ್ತಿದ್ದು ಅದರ ಒಟ್ಟು ೩೫ ಭಾಗಗಳು ಪೂರ್ಣವಾಗಿವೆ.

ಬಿಸಿಲಿನ ಉಪಾಯ ಮಾಡಿದ್ದರಿಂದ (ಬಿಸಿಲಿಗೆ ಮೈ ಒಡ್ಡುವುದರಿಂದ) ವ್ಯಕ್ತಿಗೆ ಆಧ್ಯಾತ್ಮಿಕ ಲಾಭವಾಗುವುದು

ಶರೀರ ಆರೋಗ್ಯಶಾಲಿಯಾಗಿರಲು ಪ್ರತಿದಿನ ಶರೀರಕ್ಕೆ ಬಿಸಿಲು ತಗಲುವುದು ಆವಶ್ಯಕವಾಗಿರುತ್ತದೆ. ಶರೀರ ಬಿಸಿಲನ್ನು ತೆಗೆದುಕೊಳ್ಳುವಾಗ ಅದನ್ನು ಋತುಗಳಿಗನುಸಾರ ತೆಗೆದುಕೊಳ್ಳುವುದರ ನಿಯಮಗಳನ್ನು ಪಾಲಿಸಬೇಕು. ಪ್ರತಿದಿನ ಯೋಗ್ಯ ಪ್ರಮಾಣದಲ್ಲಿ ಮೈಮೇಲೆ ಬಿಸಿಲನ್ನು ತೆಗೆದುಕೊಳ್ಳುವುದರಿಂದ ಶರೀರದಲ್ಲಿ ಹೆಚ್ಚಾಗಿರುವ ದೋಷಗಳು (ರೋಗಕಾರಕ ದ್ರವ್ಯ) ದೂರವಾಗಲು ಸಹಾಯವಾಗುತ್ತದೆ. ಬಿಸಿಲಿನಿಂದ ಉಪಾಯ ಮಾಡಿದರೆ ವ್ಯಕ್ತಿಯ ದೇಹ, ಮನಸ್ಸು ಮತ್ತು ಬುದ್ಧಿಯ ಮೇಲಿನ ತೊಂದರೆದಾಯಕ ಸ್ಪಂದನಗಳ ಆವರಣ ದೂರವಾಗಲು ಸಹಾಯವಾಗುತ್ತದೆ. ಇದರಿಂದ ವ್ಯಕ್ತಿಯ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳು ಕಡಿಮೆಯಾಗಿ ಅವನ ಆರೋಗ್ಯ ಸುಧಾರಿಸುತ್ತದೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಮೃತವಚನಗಳು !

ಅಂತರ್ಮುಖತೆಯು ಮನುಷ್ಯನ ಆಧ್ಯಾತ್ಮಿಕ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ಈ ದೈವಿ ಶಕ್ತಿಯಿಂದ ಮನುಷ್ಯನು ಸಾಮರ್ಥ್ಯವುಳ್ಳವನಾಗುತ್ತಾನೆ. ಅಂತರ್ಮುಖತೆಯ ಆಧ್ಯಾತ್ಮಿಕ ಶಕ್ತಿಯು ಮನುಷ್ಯನಿಗೆ ಯಾವುದೇ ಕಠಿಣ ಪ್ರಸಂಗದಲ್ಲಿ ಸ್ಥಿರವಾಗಿರಲು ಕಲಿಸುತ್ತದೆ. ಕೊನೆಗೆ ಅದೇ ಅವನಿಗೆ ಅಂತರ್ಗುರುವಾಗುತ್ತದೆ. ಬಹಿರ್ಮುಖತೆಯು ಮಾತ್ರ ಮನುಷ್ಯನನ್ನು ಶಕ್ತಿಹೀನ ಮಾಡುತ್ತದೆ. ಬಹಿರ್ಮುಖತೆಯಿಂದಾಗಿ ಮನುಷ್ಯನು ಭಾವನಾಶೀಲನಾಗುತ್ತಾನೆ. ‘ಭಾವನಾಶೀಲತೆ’ ಇದು ಮನುಷ್ಯನ ದುಃಖದ ಒಂದು ಮುಖ್ಯ ಕಾರಣವಾಗಿದೆ.