ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಸಾಧನೆಯ ಬಗ್ಗೆ ಮಾಡಿದ ಮಾರ್ಗದರ್ಶನ !
ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಗೆ ಮೊದಲ ಆದ್ಯತೆಯಿದೆ. ಇದು ಮೊದಲನೇ ಹಂತವಾಗಿದೆ. ಶಾಲೆಗೆ ಹೋದಾಗ ಹೇಗೆ ನಾವು ಮೊದಲು ‘ಅ, ಆ, ಇ, ಈ ….’ ಮತ್ತು ‘ಎ. ಬಿ. ಸಿ. ಡಿ…..’ ಬರೆಯಲು ಕಲಿಯುತ್ತೇವೆ ಮತ್ತು ನಂತರ ದೊಡ್ಡ ದೊಡ್ಡ ಪುಸ್ತಕಗಳನ್ನು ಓದಲು ಕಲಿಯುತ್ತೇವೆ; ಅದೇ ರೀತಿ ಮೊದಲು ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯನ್ನು ಮಾಡಬೇಕು.