ಸಾಧಕರೇ, ಹಿಂದೂ ರಾಷ್ಟ್ರದ ಮುಂಬರುವ ಪೀಳಿಗೆಯನ್ನು ತಯಾರಿಸಲು ನಿಮ್ಮ ಮಕ್ಕಳ ಸಾಧಕತ್ವದ ಕಡೆಗೆ ಗಮನಕೊಟ್ಟು ಅವರ ಸಾಧನೆಗೆ ಸಹಾಯ ಮಾಡಿರಿ !
ಸಾಧಕರು ತಮ್ಮ ಮಕ್ಕಳಿಗೆ ಸಾತ್ತ್ವಿಕ ಮತ್ತು ಸರಳತೆಯ (ಸಿಂಪಲ್) ಅಭ್ಯಾಸವನ್ನು ಮಾಡಿಸಿರುತ್ತಾರೆ. ಹೊರಗಿನ ಗಂಡು ಮಕ್ಕಳ ಅಥವಾ ಹೆಣ್ಣುಮಕ್ಕಳನ್ನು ನೋಡಿ ಮಕ್ಕಳಿಗೆ ‘ಜೀನ್ಸ್, ಟಿ-ಶರ್ಟ್; ‘ಲೋ ವೆಸ್ಟ್ (ಸೊಂಟದ ಕೆಳಗೆ ಬರುವ), ತೊಡೆಯ ಮೇಲೆ ಹರಿದ, ಬಣ್ಣಹೋದ ಪ್ಯಾಂಟ್ ಇತ್ಯಾದಿ ಬಟ್ಟೆಗಳನ್ನು ಧರಿಸಬೇಕೆಂದು ಅನಿಸುತ್ತದೆ.