ಎಲ್ಲ ಸಾಧಕರಿಗಾಗಿ ಸೂಚನೆ 

‘ಕೊರೋನಾ’ ವೈರಾಣುವಿನ ಸೋಂಕಿನಿಂದಾಗುವ ರೋಗಗಳಿಂದ ನಮ್ಮ ರಕ್ಷಣೆಯಾಗಬೇಕು ಅಥವಾ ಅದನ್ನು ತಡೆಗಟ್ಟಬೇಕು’, ಎಂದು ಆಯುಷ ಸಚಿವಾಲಯವು ಪ್ರಕಟಿಸಿದ ಸುತ್ತೋಲೆಯಲ್ಲಿ ಹೋಮಿಯೋಪಥಿಯ ‘ಅರ್ಸೆನಿಕ್ ಆಲ್ಬ್ ೩೦’ ಈ ಔಷಧಿಯನ್ನು ಸೂಚಿಸಲಾಗಿತ್ತು. ಈ ರೋಗನಿರೋಧಕ ಔಷಧಿಯನ್ನು ಎಲ್ಲೆಡೆಯ ಸಾಧಕರು ಕಡ್ಡಾಯವಾಗಿ ತೆಗೆದುಕೊಳ್ಳಬೇಕು.

ಸಾಧಕರಿಗೆ ಮಹತ್ವದ ಸೂಚನೆ !

ಧರ್ಮಪ್ರಸಾರದ ಕಾರ್ಯಕ್ಕಾಗಿ ನಾವು ಸ್ಥಳೀಯ ಅವಶ್ಯಕತೆಯಂತೆ ಏನೆಲ್ಲ ಸಂಹಿತೆಯನ್ನು ಬರೆಯುತ್ತೇವೆಯೋ ಅಥವಾ ಹೊಸ ವಿಷಯವನ್ನು ಮಂಡಿಸುತ್ತೇವೆಯೋ, ಅದನ್ನೂ ಬರೆದು ಕಳುಹಿಸಿದರೆ ಭಾರತದಾದ್ಯಂತ ಕಾರ್ಯ ಮಾಡುತ್ತಿರುವ ಇತರರಿಗೂ ಅಂತಹ ವಿಷಯಗಳ ಭಾಷಣಕ್ಕೆ ಉಪಯೋಗಿಸಬಹುದು. ಇದರಿಂದ ಆಯಾ ಸ್ಥಳಗಳ ಸಾಧಕರ ಸಂಹಿತೆ ಬರೆಯುವ ಸಮಯವು ಉಳಿತಾಯವಾಗುತ್ತದೆ. ಬೇರೆ ಕಡೆಗಳಲ್ಲಿ ಸಾಧಕರಿಗೆ ಸಂಹಿತೆ ಉಪಲಬ್ಧವಾಗುವುದರಿಂದ ತಮ್ಮ ಭಾಗದಲ್ಲಿ ವಿಷಯವನ್ನು ಮಂಡಿಸಲು ಸಾಧ್ಯವಾಗುತ್ತದೆ.

ಸಾಧಕರಿಗೆ ಸೂಚನೆ ಮತ್ತು ಓದುಗರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳಿಗೆ ನಮ್ರ ವಿನಂತಿ !

ಸದ್ಯ ಸಾಮಾಜಿಕ ಪ್ರಸಾರ ಮಾಧ್ಯಮಗಳ ಮುಖಾಂತರ ಆರ್ಥಿಕ ಲಾಭವನ್ನು ಪಡೆಯುವ ಯೋಜನೆಯ (ಸ್ಕೀಮ್) ಸಂದರ್ಭದಲ್ಲಿ ಒಂದು ವಿಡಿಯೋ ಪ್ರಸಾರವಾಗುತ್ತಿದೆ. ಅದರಲ್ಲಿ ಕೆಲವು ಆಪ್‌ಗಳು ಮತ್ತು ಅವುಗಳನ್ನು ಅಭಿವೃದ್ಧಿ ಪಡಿಸಿರುವ ಹೆಸರಾಂತ ಕಂಪನಿಗಳ ಉಲ್ಲೇಖವಿದ್ದು, ಒಂದು ಆಪ್ ‘ಡೌನಲೋಡ್ ಮಾಡಿಕೊಳ್ಳುವಂತೆ ಕರೆ ನೀಡಲಾಗಿದೆ. ಇದರಿಂದ ನಾಗರಿಕರು ಮೋಸ ಹೋಗುವ ಸಾಧ್ಯತೆಯಿದೆ.

ಪಾಕಿಸ್ತಾನವು ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ದ ನಾಗರಿಕರನ್ನು ಪ್ರಾಣಿಗಳಂತೆ ನೋಡಿಕೊಳ್ಳುತ್ತಿದೆ !

ಪಾಕಿಸ್ತಾನವು ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ದ ಜನರನ್ನು ಪ್ರಾಣಿಗಳಂತೆ ನೋಡಿಕೊಳ್ಳುತ್ತಿದೆ. ಪಾಕಿಸ್ತಾನ ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡಿದೆ ಮತ್ತು ನಮ್ಮ ಧ್ವನಿಯನ್ನು ಅದುಮಿಡಲು ಪ್ರಯತ್ನಿಸುತ್ತಿದೆ; ಆದರೆ ನಮ್ಮ ಧ್ವನಿ ಕೇಳಿಕೊಳ್ಳಬಹುದು, ಎಂಬ ವಿಶ್ವಾಸ ನಮಗಿದೆ, ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತಿನಲ್ಲಿ ಅಲ್ಲಿಯ ಕಾರ್ಯಕರ್ತ ಸಜ್ಜಾದ್ ರಾಜಾ ಹೇಳಿದ್ದಾರೆ.

ಮಾಸ್ಕನ್ನು ಧರಿಸದೆ ತಿರುಗಾಡುವವರು ಸಾಮಾಜಿಕ ಅಪರಾಧಿಗಳಾಗಿರುವುದರಿಂದ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ! – ಅಲಾಹಾಬಾದ್ ಉಚ್ಚ ನ್ಯಾಯಾಲಯದ ಆದೇಶ

ರಾಜ್ಯದಲ್ಲಿ ಕರೋನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಅಲಹಾಬಾದ್ ಉಚ್ಚ ನ್ಯಾಯಾಲಯವು ಇದನ್ನು ಗಮನಿಸಿ ‘ಮನೆಯಿಂದ ಹೊರಡುವಾಗ ಮಾಸ್ಕ ಧರಿಸದೇ ಇರುವುದು ಕಂಡುಬಂದರೆ, ಅವರ ಮೇಲೆ ಕ್ರಮ ಕೈಗೊಳ್ಳುವಂತೆ’ ಪೊಲೀಸರಿಗೆ ಆದೇಶಿಸಿದೆ.

‘ಶಿವನು ಕೂಡ ಮಾದಕವಸ್ತುಗಳನ್ನು ಸೇವಿಸುತ್ತಾರೆ !’(ಅಂತೆ) – ಲೇಖಕಿ ಮೇಘನಾ ಪಂತ್

ಭಾರತೀಯ ಚಲನಚಿತ್ರೋದ್ಯಮದ ನಟರು ಮಾದಕ ವಸ್ತುಗಳ ಸೇವನೆ ಮಾಡುತ್ತಾರೆ, ಇದು ಬಹಿರಂಗವಾಗುತ್ತಿರುವಾಗ ಈ ಬಗ್ಗೆ ‘ಇಂಡಿಯಾ ಟುಡೇ’ ಸುದ್ದಿವಾಹಿನಿಯಲ್ಲಿನ ಚರ್ಚಾಕೂಟದಲ್ಲಿ ಲೇಖಕಿ ಮೇಘನಾ ಪಂತ್ ಇವರು, ‘ಭಗವಾನ ಶಿವನೂ ಕೂಡಾ ಮಾದಕ ವಸ್ತುಗಳನ್ನು ಸೇವಿಸುತ್ತಾರೆ’ ಎಂದು ಹೇಳಿದರು.

ಮಹಿಳೆಯರಿಗೆ ಕಿರುಕುಳ ನೀಡುವವರ ಫಲಕವನ್ನು ಬೀದಿ ಬೀದಿಗಳಲ್ಲಿ ಹಾಕಿ ! – ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಂದ ಪೊಲೀಸರಿಗೆ ಆದೇಶ

ಉತ್ತರಪ್ರದೇಶ ರಾಜ್ಯದಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳನ್ನು ತಡೆಯಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಸರಕಾರವು ಮಹಿಳೆಯರಿಗೆ ಕಿರುಕುಳ ನೀಡುವವರ ಫಲಕಗಳನ್ನು ಬೀದಿ ಬೀದಿಗಳಲ್ಲಿ ಹಾಕುವಂತೆ ಪೊಲೀಸರಿಗೆ ಆದೇಶಿಸಿದೆ.

ಆಂಧ್ರಪ್ರದೇಶದ ಕ್ರೈಸ್ತ ಮುಖ್ಯಮಂತ್ರಿ ಜಗನಮೋಹನ್ ರೆಡ್ಡಿಯವರು ‘ಭಗವಾನ್ ವೆಂಕಟೇಶ್ವರನಲ್ಲಿ ನನಗೆ ಶ್ರದ್ಧೆ ಇದೆ’ ಎಂಬ ಬಂಧನಕಾರಿ ಪ್ರಮಾಣಪತ್ರಕ್ಕೆ ಸಹಿ ಹಾಕದೇ ತಿರುಪತಿ ದೇವಸ್ಥಾನದಲ್ಲಿ ಪ್ರವೇಶ !

ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಾಗೂ ಆಂಧ್ರಪ್ರದೇಶದ ಕ್ರೈಸ್ತ ಮುಖ್ಯಮಂತ್ರಿ ವೈ.ಎಸ್. ಜಗನಮೋಹನ್ ರೆಡ್ಡಿಯವರು ಸೆಪ್ಟೆಂಬರ್ ೨೩ ರಂದು ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಮಯದಲ್ಲಿ ಅವರು ಇತರ ಧರ್ಮಗಳಿಗೆ ಬಂಧನಕಾರಿಯಾಗಿರುವ ಭಗವಾನ್ ವೆಂಕಟೇಶ್ವರನ ಮೇಲೆ ಶ್ರದ್ಧೆ ಇರುವ ಕುರಿತಾದ ಪ್ರಮಾಣವಚನಕ್ಕೆ ಸಹಿ ಹಾಕಲಿಲ್ಲ.

ಮಹಾನಗರಗಳು ಮತ್ತು ದೊಡ್ಡ ನಗರಗಳಲ್ಲಿ ವಾಸಿಸುವ ಸಾಧಕರಿಗಾಗಿ ಮಹತ್ವದ ಸೂಚನೆ

ಸದ್ಯ ಭಾರತದಲ್ಲಿರುವ ಮಹಾನಗರಗಳಲ್ಲಿ ಹಾಗೆಯೇ ಇತರ ದೊಡ್ಡ ನಗರಗಳಲ್ಲಿ ಜನಸಂಖ್ಯೆಯು ದಿನೇ ದಿನೇ ಹೆಚ್ಚಾಗುತ್ತಿದೆ. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿರುವ ರೋಗರುಜಿನಗಳು ಎಲ್ಲರ ಚಿಂತೆಯ ವಿಷಯವಾಗಿವೆ. ನಗರಗಳಲ್ಲಿರುವ ಅಪಾರ ಜನಜಂಗುಳಿ, ಸ್ವಚ್ಛತೆಯ ಅಭಾವ, ಹೆಚ್ಚುತ್ತಿರುವ ಮಾಲಿನ್ಯ, ರಜ-ತಮಗಳ ಅಧಿಕ ಪ್ರಾಬಲ್ಯ ಇತ್ಯಾದಿಗಳ ಕಾರಣಗಳಿಂದ ಅಲ್ಲಿನ ನಾಗರಿಕರು ಭಯ ಮತ್ತು ಅಸುರಕ್ಷತೆಯ ನೆರಳಿನಲ್ಲಿ ಬದುಕುತ್ತಿರುವುದು ಕಂಡುಬರುತ್ತದೆ.

ಮಹಾನಗರಗಳು ಮತ್ತು ದೊಡ್ಡ ನಗರಗಳಲ್ಲಿ ವಾಸಿಸುವ ಸಾಧಕರಿಗಾಗಿ ಮಹತ್ವದ ಸೂಚನೆ

ಮುಂಬರುವ ಆಪತ್ಕಾಲದಲ್ಲಿ ಪ್ರತಿಯೊಬ್ಬರೂ ಪ್ರತಿಕೂಲ ಪ್ರಸಂಗಗಳನ್ನು ಎದುರಿಸಬೇಕಾಗಲಿದೆ. ಕಠಿಣ ಪ್ರಸಂಗದಲ್ಲಿ ಸಾಧಕರು ಪರಸ್ಪರ ಹತ್ತಿರದಲ್ಲಿದ್ದರೆ ಅವರು ಇತರರಿಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಸಹಾಯ ಮಾಡಬಲ್ಲರು. ಹಾಗಾಗಿ ಸಾಧಕರಲ್ಲಿ ಸಂಘಟಿತನ ಹಾಗೂ ಕೌಟುಂಬಿಕ ಭಾವನೆಯು ಮೂಡುವುದು.