ಹಿಂದೂ ಸಂಘಟನೆಗಳಿಂದ ನಿಷೇಧ !
|
ತಿರುಪತಿ (ಆಂಧ್ರಪ್ರದೇಶ) – ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಾಗೂ ಆಂಧ್ರಪ್ರದೇಶದ ಕ್ರೈಸ್ತ ಮುಖ್ಯಮಂತ್ರಿ ವೈ.ಎಸ್. ಜಗನಮೋಹನ್ ರೆಡ್ಡಿಯವರು ಸೆಪ್ಟೆಂಬರ್ ೨೩ ರಂದು ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಮಯದಲ್ಲಿ ಅವರು ಇತರ ಧರ್ಮಗಳಿಗೆ ಬಂಧನಕಾರಿಯಾಗಿರುವ ಭಗವಾನ್ ವೆಂಕಟೇಶ್ವರನ ಮೇಲೆ ಶ್ರದ್ಧೆ ಇರುವ ಕುರಿತಾದ ಪ್ರಮಾಣವಚನಕ್ಕೆ ಸಹಿ ಹಾಕಲಿಲ್ಲ. ಇದರಿಂದಾಗಿ ವಿರೋಧ ಪಕ್ಷಗಳು ಮತ್ತು ಹಿಂದೂ ಸಂಘಟನೆಗಳು ಖಂಡನೆ ವ್ಯಕ್ತಪಡಿಸಿದರು.
Here’s Why A Furore Has Been Raised Over Andhra Chief Minister Jagan Reddy’s Visit To Tirupati Balaji Temple Today@mrsubramanihttps://t.co/3KzB1KsoZ8
— Swarajya (@SwarajyaMag) September 23, 2020
೧. ಮುಖ್ಯಮಂತ್ರಿಯವರು ನವ ದೆಹಲಿಯಿಂದ ನೇರವಾಗಿ ತಿರುಮಲಕ್ಕೆ ಬಂದರು. ಅವರು ಹಿಂದೂ ಭಕ್ತರ ಸಾಂಪ್ರದಾಯಿಕ ಉಡುಪನ್ನು ಧರಿಸುತ್ತಾ ‘ತಿರು’ ಎಂಬ ತಿಲಕ ಹಚ್ಚಿಕೊಂಡರು ಮತ್ತು ರಾಜ್ಯ ಸರಕಾರದ ಪರವಾಗಿ ದೇವರಿಗೆ ಅರ್ಪಿಸಲು ರೇಶ್ಮೆ ವಸ್ತ್ರವನ್ನು ತಮ್ಮ ತಲೆಯ ಮೇಲೆ ಇಟ್ಟುಕೊಂಡು ದೇವಸ್ಥಾನಕ್ಕೆ ಹೋದರು. (ಹಿಂದೂಗಳನ್ನು ಓಲೈಸಲು ರೆಡ್ಡಿ ಇದನ್ನು ಮಾಡುತ್ತಿದ್ದಾರೆ. ಇನ್ನು ಹಿಂದೂಗಳು ಈಗ ಈ ನಾಟಕಕ್ಕೆ ಬಲಿಯಾಗಬಾರದು ! – ಸಂಪಾದಕರು) ಈ ಸಮಯದಲ್ಲಿ ವೇದ ಮಂತ್ರಘೋಷ ಮಾಡಿದರು.
೨. ಭಾಜಪ, ತೆಲುಗು ದೇಶಂ, ಕಾಂಗ್ರೆಸ್ ಮತ್ತು ಹಿಂದೂ ಸಂಘಟನೆಗಳು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಾ, ‘ಜಗನಮೋಹನ ರೆಡ್ಡಿಯವರು ಪ್ರಮಾಣಪತ್ರದ ಮೇಲೆ ಸಹಿ ಮಾಡುವ ಶತಮಾನಗಳಷ್ಟು ಹಳೆಯ ಸಂಪ್ರದಾಯವನ್ನು ಪಾಲಿಸಬೇಕಿತ್ತು. ಈ ಹಿಂದೆ ಅವರು ಪ್ರಮಾಣಪತ್ರದ ಮೇಲೆ ಸಹಿ ಮಾಡದೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರೂ, ಈಗ ಅವರು ನಿಯಮಗಳನ್ನು ಪಾಲಿಸಬೇಕಿತ್ತು’ ಎಂದು ಹೇಳಿದರು.
೩. ಮುಖ್ಯಮಂತ್ರಿಯ ಭೇಟಿಯ ಸಂದರ್ಭದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ಯೋಜಿಸುತ್ತಿದ್ದ ತೆಲುಗು ದೇಶಂ ಮತ್ತು ಹಿಂದೂ ಸಂಘಟನೆಯ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಆದ್ದರಿಂದ ತಿರುಪತಿಯಲ್ಲಿ ಇಂದು ವಾತಾವರಣ ಉದ್ವಿಗ್ನವಾಗಿದೆ.
೪. ‘ಜಗನಮೋಹನ ರೆಡ್ಡಿಯವರು ದೇವಸ್ಥಾನದ ಸಂಪ್ರದಾಯಗಳನ್ನು ಗೌರವಿಸಬೇಕು ಮತ್ತು ಹಿಂದೂಯೇತರಿಗಾಗಿ ಇರುವ ಪ್ರಮಾಣಪತ್ರದ ಮೇಲೆ ಸಹಿ ಹಾಕಬೇಕು’ ಎಂದು ತೆಲುಗು ದೇಶಂನ ಅಧ್ಯಕ್ಷ ಎನ್. ಚಂದ್ರಬಾಬು ನಾಯಡು ಇವರು ಒತ್ತಾಯಿಸಿದರು.
೫. ಭಾಗ್ಯನಗರದಲ್ಲಿ ಶ್ರೀ ಪಿಠಮ್ ಸ್ವಾಮಿ ಪರಿಪರ್ಣಾನಂದ್ ಇವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಜಗನಮೋಹನ್ ರೆಡ್ಡಿ ಹಿಂದೂಗಳ ಭಾವನೆಗಳನ್ನು ಗೌರವಿಸಬೇಕು; ಏಕೆಂದರೆ ಈ ಪ್ರಮಾಣಪತ್ರದ ಮೇಲೆ ಸಹಿ ಮಾಡುವುದರಿಂದ ಅವರಿಗೆ ಯಾವುದೇ ಹಾನಿ ಆಗುವುದಿಲ್ಲ.
೫. ತಿರುಮಲದಲ್ಲಿ ಇಂತಹ ನಿಯಮವನ್ನು ಜಾರಿಗೆ ತರುವ ಔಪಚಾರಿಕತೆಯ ಬಗ್ಗೆ ರಾಜ್ಯ ನಾಗರಿಕ ಸರಬರಾಜು ಸಚಿವ ಕೊಡಾಲಿ ನಾನಿ ಪ್ರಶ್ನಿಸಿದ್ದಾರೆ. ‘ಯಾರಿಗೆ ಭಗವಾನ್ ವೆಂಕಟೇಶ್ವರನ ಮೇಲೆ ಶ್ರದ್ಧೆ ಇದೆ ಅವರು ಮಾತ್ರ ತಿರುಮಲ ದೇವಸ್ಥಾನಕ್ಕೆ ಬರುತ್ತಾರೆ. ಯಾರಾದರೂ ತಮ್ಮ ಶ್ರದ್ಧೆಯನ್ನು ಏಕೆ ಘೋಷಿಸಬೇಕು ?’ಎಂದು ಕೇಳಿದರು. (ಶ್ರದ್ಧೆ ಇದ್ದರೆ ಅದನ್ನು ಘೋಷಿಸಲು ಏನು ಕಷ್ಟ ? ಎಂಬುದನ್ನು ಕೊಡಾಲಿ ನಾನಿಯವರು ಹೇಳಬೇಕು ! ಧರ್ಮಹಾನಿ ಆಗುತ್ತಿರುವಾಗ ಅದನ್ನು ಬೆಂಬಲಿಸುವ ಇಂತಹ ಹಿಂದೂ ಜನಪ್ರತಿನಿಧಿಗಳೇ ಹಿಂದೂ ಧರ್ಮದ ನಿಜವಾದ ವೈರಿಗಳಾಗಿದ್ದಾರೆ ! – ಸಂಪಾದಕರು)
ಮುಖ್ಯಮಂತ್ರಿಗಳನ್ನು ಬೆಂಬಲಿಸಿದ ದೇವಸ್ಥಾನಮ್ ಅಧ್ಯಕ್ಷರಾಗಿರುವ ಅವರ ಚಿಕ್ಕಪ್ಪ ಸುಬ್ಬಾ ರೆಡ್ಡಿ !
ತಿರುಮಲ ತಿರುಪತಿ ದೇವಸ್ಥಾನಮ್ ಅಧ್ಯಕ್ಷ ಹಾಗೂ ಜಗನಮೋಹನ್ ರೆಡ್ಡಿಯವರ ಚಿಕ್ಕಪ್ಪ ಸುಬ್ಬಾ ರೆಡ್ಡಿಯವರು, ಹಿಂದೂಯೇತರರು ಕಡ್ಡಾಯವಾಗಿ ಸಹಿ ಹಾಕುವ ಅಗತ್ಯವಿಲ್ಲ ಹಾಗೂ ಅದಕ್ಕಾಗಿಯೇ ಜಗನಮೋಹನ್ ರೆಡ್ಡಿ ಸಹಿ ಮಾಡಬೇಕಾಗಿಲ್ಲ ಎಂದು ಹೇಳಿದರು.