ಆಪತ್ಕಾಲಕ್ಕಿಂತ ಮೊದಲು ಮಹಾನಗರ ಹಾಗೂ ನಗರ ಪ್ರದೇಶಗಳಿಂದ ಹಳ್ಳಿಗಳಿಗೆ ಸ್ಥಳಾಂತರವಾಗುವಾಗ ಒಬ್ಬೊಬ್ಬರೇ ವಾಸಿಸದೇ ಇತರ ಸಾಧಕರ ಜೊತೆಗೆ ತಮ್ಮ ನಿವಾಸವ್ಯವಸ್ಥೆಯನ್ನು ಮಾಡಿಕೊಳ್ಳಿ !
ಸಾಧಕರು ಆಪತ್ಕಾಲವನ್ನು ಎದುರಿಸಲು ಮಾಡಿಕೊಳ್ಳಬೇಕಾದ ಪೂರ್ವಸಿದ್ಧತೆಗಳಲ್ಲಿ ಮಹತ್ವದ ಅಂಶವೆಂದರೆ ಮಹಾನಗರ ಹಾಗೂ ದೊಡ್ಡ ನಗರಗಳಲ್ಲಿ ವಾಸಿಸದೇ ಹಳ್ಳಿ ಅಥವಾ ತಾಲೂಕು ಪ್ರದೇಶಗಳಲ್ಲಿ ವಾಸಿಸಲು ಪರ್ಯಾಯ ವ್ಯವಸ್ಥೆಯನ್ನು ಮಾಡುವುದು. ಇಲ್ಲಿ ನೀಡಿರುವ ಚೌಕಟ್ಟಿನಲ್ಲಿ ಹೇಳಿದಂತೆ ಸಾಧಕರು ಭಾರತದಾದ್ಯಂತ ಯಾವುದೇ ಹಳ್ಳಿ ಅಥವಾ ತಾಲೂಕಿನಲ್ಲಿ ಮನೆಯನ್ನು ತೆಗೆದುಕೊಳ್ಳಬಹುದು. ಆದರೆ ತಮ್ಮ ಕುಟುಂಬದವರ ಜೊತೆಗೆ ಸ್ಥಳಾಂತರವಾಗುವಾಗ ಅವರು ಬೇರೆ ಬೇರೆ ಹಳ್ಳಿಗಳಿಗೆ ಒಬ್ಬೊಬ್ಬರೇ ವಾಸಿಸುವ ವಿಚಾರವನ್ನು ಮಾಡಬಾರದು. ಅದರ ಬದಲು ಎಲ್ಲರಿಗೂ ಸುಲಭವಾಗುವಂತಹ ಯಾವುದಾದರೊಂದು ಹಳ್ಳಿಯಲ್ಲಿ ಸಾಧಕರು ಹತ್ತಿರದಲ್ಲಿರುವಂತಹ ಜಾಗದಲ್ಲಿ ಮನೆಯನ್ನು ಖರೀದಿಸಿ ವಾಸಿಸಬಹುದು. ಈ ರೀತಿ ಹಳ್ಳಿ ಅಥವಾ ತಾಲೂಕಿನಲ್ಲಿ ಸಾಧಕರು ಒಟ್ಟಿಗಿರುವುದು ಅವರ ಸಾಧನೆಯ ದೃಷ್ಟಿಯಿಂದ ಪೂರಕವಾಗಿದ್ದು ಕಾಲಾನುಸಾರ ಆವಶ್ಯಕವೂ ಆಗಿದೆ. ಇದರ ಬಗ್ಗೆ ಹಾಗೂ ಮನೆಯ ವಿಷಯದಲ್ಲಿ ಕೆಲವು ಮಾರ್ಗದರ್ಶಕ ಅಂಶಗಳನ್ನು ಮುಂದೆ ಕೊಡಲಾಗಿದೆ.
೧. ಸಾಧಕರು ಹಳ್ಳಿಯಲ್ಲಿ ಒಬ್ಬೊಬ್ಬರೇ ವಾಸಿಸದೇ ಇತರ ಸಾಧಕರ ಜೊತೆಯಲ್ಲಿದ್ದರೆ ಆಗುವ ಲಾಭಗಳು
೧ ಅ. ಸಾಧನೆಯ ದೃಷ್ಟಿಯಿಂದ
೧. ಮುಂಬರುವ ಆಪತ್ಕಾಲದಲ್ಲಿ ಪ್ರತಿಯೊಬ್ಬರೂ ಪ್ರತಿಕೂಲ ಪ್ರಸಂಗಗಳನ್ನು ಎದುರಿಸಬೇಕಾಗಲಿದೆ. ಕಠಿಣ ಪ್ರಸಂಗದಲ್ಲಿ ಸಾಧಕರು ಪರಸ್ಪರ ಹತ್ತಿರದಲ್ಲಿದ್ದರೆ ಅವರು ಇತರರಿಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಸಹಾಯ ಮಾಡಬಲ್ಲರು. ಹಾಗಾಗಿ ಸಾಧಕರಲ್ಲಿ ಸಂಘಟಿತನ ಹಾಗೂ ಕೌಟುಂಬಿಕ ಭಾವನೆಯು ಮೂಡುವುದು.
೨. ಆಪತ್ಕಾಲದಲ್ಲಿ ಬಾಹ್ಯ ಪರಿಸ್ಥಿತಿ ಎಷ್ಟೇ ಪ್ರತಿಕೂಲವಾಗಿದ್ದರೂ, ಸಾಧಕರು ಒಟ್ಟಿಗೆ ಇದ್ದಲ್ಲಿ ಅವರು ಪರಸ್ಪರರಿಗೆ ಸಾಧನೆಯಲ್ಲಿ ಸಹಾಯ ಮಾಡಲು ಆಗುತ್ತದೆ. ಇದರಿಂದ ಅವರ ಸಾಧನೆಗೆ ವೇಗ ಬರಲಿದೆ ಮತ್ತು ಅವರ ಸಾಧನಾವೃದ್ಧಿಗಾಗಿ ಈ ಕಾಲವು ಅನುಕೂಲವಾಗುವುದು.
೩. ಒಳ್ಳೆಯ ಆಧ್ಯಾತ್ಮಿಕ ಮಟ್ಟ ಇರುವ ಸಾಧಕರು ಹಾಗೂ ಸಾಧನೆಗಾಗಿ ತಳಮಳದಿಂದ ಪ್ರಯತ್ನಿಸುವ ಸಾಧಕರು ಇತರರಿಗೆ ಸಾಧನೆಯ ಬಗ್ಗೆ ದಿಶೆಯನ್ನು ನೀಡಬಲ್ಲರು. ಹಾಗಾಗಿ ಶೀಘ್ರವಾಗಿ ಎಲ್ಲರ ಆಧ್ಯಾತ್ಮಿಕ ಉನ್ನತಿಯಾಗುವುದು ಆಪತ್ಕಾಲದಲ್ಲಿಯೂ ಹಳ್ಳಿಹಳ್ಳಿಗಳಲ್ಲಿ ಸಾಧನೆಗಾಗಿ ಪೂರಕ ಹಾಗೂ ಆಶ್ರಮದಂತಹ ಸಾತ್ತ್ವಿಕ ವಾತಾವರಣದ ನಿರ್ಮಿತಿಯಾಗುವುದು
೧ ಆ. ಧರ್ಮಪ್ರಸಾರದ ವಿಷಯದಲ್ಲಿ
೧. ಸಾಧಕರು ಸಾಧ್ಯವಿರುವಲ್ಲೆಲ್ಲ ಸಂಘಟಿತರಾಗಿ ಧರ್ಮಪ್ರಸಾರದ ಕಾರ್ಯವನ್ನು ಮಾಡಬಹುದು
೨. ಪ್ರಸ್ತುತ ನಡೆಯುತ್ತಿರುವ ಧರ್ಮಪ್ರಸಾರದ ಉಪಕ್ರಮಗಳಲ್ಲಿ ಸಾಧ್ಯವಿರುವಷ್ಟು ಮತ್ತು ಕಾಲಸುಸಂಗತ ಉಪಕ್ರಮಗಳನ್ನು (ಉದಾ. ನಾಮಸತ್ಸಂಗ, ಭಾವಸತ್ಸಂಗ, ಧರ್ಮಶಿಕ್ಷಣ ವರ್ಗ, ಬಾಲಸಂಸ್ಕಾರ ವರ್ಗ) ಆಯಾ ಹಳ್ಳಿಗಳಲ್ಲಿ ನಡೆಸಬಹುದು.
೧ ಇ. ಇತರ ಲಾಭಗಳು
೧. ಆಪತ್ಕಾಲದಲ್ಲಿ ಮನೆಯ ಆವರಣದಲ್ಲಿರುವ ಬಾವಿಯ ನೀರು ಉಪಯುಕ್ತವಾಗಲಿದೆ. ಸುತ್ತಮುತ್ತಲಿನ ಕೆಲವು ಸಾಧಕರು ಒಟ್ಟು ಸೇರಿ ಬಾವಿಯನ್ನು ತೋಡಿಸಿಕೊಳ್ಳಬಹುದು
೨. ಗೋಪಾಲನೆ, ಕೃಷಿ, ವನೌಷಧಿಗಳ ತೋಟಗಾರಿಕೆ ಇವೆಲ್ಲವುಗಳನ್ನು ಜೊತೆಯಲ್ಲಿದ್ದು ಮಾಡಬಹುದು.
೩. ಸಾಧಕರು ಪರಸ್ಪರರ ಸಮೀಪ ವಾಸಿಸುವುದು, ಸುರಕ್ಷೆಯ ದೃಷ್ಟಿಯಿಂದ ಹಿತಕರವಾಗಿದೆ.
೪. ಯಾರಾದರೊಬ್ಬ ಸಾಧಕನಿಗೆ ಅನಾರೋಗ್ಯವಿದ್ದರೆ ಇತರ ಸಾಧಕರು ಅವರಿಗೆ ಬೇರೆಬೇರೆ ಚಿಕಿತ್ಸಾ ಪದ್ಧತಿಗಳಿಗನುಸಾರ (ಬಿಂದು ಒತ್ತಡ, ಪ್ರಾಣಶಕ್ತಿವಹನ ಉಪಾಯ, ನಾಮಜಪ-ಉಪಾಯ ಮುಂತಾದವುಗಳಿಗನುಸಾರ) ಉಪಾಯ ಮಾಡಬಹುದು.
೫. ಯಾರಾದರೊಬ್ಬ ಸಾಧಕರ ಬಳಿ ವಿಶಿಷ್ಟ (ಉದಾ. ಮೇಸ್ತ್ರಿ ಕೆಲಸ, ಬಡಗಿಯ ಕೆಲಸ, ತೋಟಗಾರಿಕೆ, ಹೊಲಿಗೆ) ಕೌಶಲ್ಯವಿದ್ದಲ್ಲಿ ಆ ಕೌಶಲ್ಯದಿಂದ ಇತರರಿಗೂ ಲಾಭವಾಗುವುದು
೨. ಹಳ್ಳಿಯಲ್ಲಿ ಮನೆಗಳನ್ನು ಖರೀದಿಸುವ ಬಗ್ಗೆ ಅಂಶಗಳು
ಮೇಲೆ ಹೇಳಿದ ಎಲ್ಲ ಲಾಭಗಳನ್ನು ಗಮನದಲ್ಲಿರಿಸಿ ಸಾಧಕರು ಎಲ್ಲ ದೃಷ್ಟಿಯಿಂದ ಸೌಲಭ್ಯಕ್ಕನುಸಾರ ಯಾವುದಾದರೊಂದು ಹಳ್ಳಿಯಲ್ಲಿ ಹತ್ತಿರಹತ್ತಿರ ಮನೆಗಳನ್ನು ಖರೀದಿಸಿ ಅಥವಾ ಕಟ್ಟಿಸಿ ಅಲ್ಲಿ ವಾಸಿಸುವ ನಿರ್ಣಯ ತೆಗೆದುಕೊಳ್ಳಬೇಕು. ಇದರಲ್ಲಿ ೨-೩ ಸಾಧಕರು ಮುಂದಾಳತ್ವ ವಹಿಸಿ ಯೋಗ್ಯ ಹಳ್ಳಿ ಅಥವಾ ತಾಲೂಕುಗಳನ್ನು ಆಯ್ಕೆ ಮಾಡುವುದು, ಅಲ್ಲಿ ಮನೆ ಹುಡುಕುವುದು ಅಥವಾ ಕಟ್ಟಿಸುವುದು ಮುಂತಾದವುಗಳನ್ನು ಪ್ರಾರಂಭಿಸಬಹುದು.
ಅ. ಆಪತ್ಕಾಲದಲ್ಲಿ ನಮ್ಮ ಮೂಲಭೂತ ಆವಶ್ಯಕತೆಗಳನ್ನು ಪೂರೈಸಲು ಬಹಳ ಖರ್ಚನ್ನು ಮಾಡಬೇಕಾಗಬಹುದು. ಹಾಗಾಗಿ ಸಾಧಕರು ತಮ್ಮ ಉಳಿತಾಯವನ್ನು ಮುಂದಿನ ಆಪತ್ಕಾಲಕ್ಕಾಗಿ ಉಳಿಸಿಡಬೇಕು. ಹಳ್ಳಿಯಲ್ಲಿ ಮನೆ ಕಟ್ಟಿಸುವ ಅಥವಾ ಖರೀದಿಸುವ ವಿಚಾರ ಮಾಡುವಾಗ, ಅತ್ಯಂತ ಕಡಿಮೆ ಖರ್ಚಿನಲ್ಲಿ ಮನೆಯ ವ್ಯವಸ್ಥೆ ಹೇಗೆ ಮಾಡಬಹುದು? ಇದರತ್ತ ಕಟಾಕ್ಷದಿಂದ ಗಮನ ಹರಿಸಬೇಕು.
ಆ. ಈಗ ಸಮಯವು ಬಹಳ ಕಡಿಮೆಯಿರುವುದರಿಂದ ಮನೆಯನ್ನು ಕಟ್ಟುವ ಬದಲು ತಯಾರಿರುವ ಮನೆಯನ್ನು ಖರೀದಿಸಲು ಆದ್ಯತೆ ನೀಡಬೇಕು. ಅಪೇಕ್ಷಿತ ರೀತಿಯಲ್ಲಿ ಸಿದ್ಧಮನೆ ಸಿಗದಿದ್ದಲ್ಲಿ ಮನೆ ಕಟ್ಟಿಸುವ ನಿರ್ಣಯ ತೆಗೆದುಕೊಳ್ಳಬಹುದು. ಹಳ್ಳಿಯಲ್ಲಿ ಮನೆ ಕಟ್ಟಿಸುವ ಪ್ರಕ್ರಿಯೆಯನ್ನು ಮುಂದಿನ ೫ ತಿಂಗಳಿನಲ್ಲಿ ಪೂರ್ಣಗೊಳಿಸಬೇಕು. ಆದರೆ ಈಗ ಅಲ್ಲಿಗೆ ಸ್ಥಳಾಂತರವಾಗಬಾರದು.
ಇ. ಸಾಮಾನ್ಯವಾಗಿ ಹೊಸ ಮನೆ ಖರೀದಿಸುವಾಗ ‘ನಮ್ಮ ಮನೆಯು ಪ್ರಶಸ್ತವಾಗಿರಬೇಕು, ಅಲ್ಲಿ ಎಲ್ಲ ಸುಖ-ಸೌಲಭ್ಯಗಳಿರಬೇಕು ಎಂದು ಪ್ರತಿಯೊಬ್ಬರಿಗೆ ಅನಿಸುತ್ತದೆ. ಆಪತ್ಕಾಲದ ದೃಷ್ಟಿಯಿಂದ ಹಳ್ಳಿಯಲ್ಲಿ ಮನೆಯ ವ್ಯವಸ್ಥೆಯನ್ನು ಮಾಡುವಾಗ ಮಾತ್ರ ಎಲ್ಲ ಸುಖ ಸೌಲಭ್ಯಗಳ ಬದಲು ಅವಶ್ಯವಿರುವಷ್ಟು ಜೀವನಾವಶ್ಯಕ ಸೌಲಭ್ಯಗಳು ಸಿಗುವಂತಹ ವಿಚಾರ ಮಾಡಬೇಕು. ‘ನಾವು ಕೇವಲ ಆಪತ್ಕಾಲದ ದೃಷ್ಟಿಯಿಂದ ಈ ವ್ಯವಸ್ಥೆ ಮಾಡುತ್ತಿದ್ದೇವೆ ಎಂಬುದನ್ನು ಗಮನದಲ್ಲಿಡಬೇಕು.
ಈ. ಹಳ್ಳಿಯಲ್ಲಿ ತೆಗೆದುಕೊಳ್ಳಲಿರುವ ಮನೆಯ ಪರಿಸರದಲ್ಲಿ ಸ್ವಲ್ಪ ಖಾಲಿ ಜಾಗ ಸಹ ಇರಬೇಕು. ಈ ಖಾಲಿಜಾಗದಲ್ಲಿ ಔಷಧೀಯ ವನಸ್ಪತಿಗಳು, ಹೂವು, ಹಣ್ಣು, ಕಾಯಿಪಲ್ಲೆಗಳು ಮುಂತಾದ ಜೀವನಾವಶ್ಯಕ ವಿಷಯಗಳ ತೋಟಗಾರಿಕೆ ಮಾಡಬಹುದು.
ಸಾಧಕರು ಮೇಲಿನ ಚೌಕಟ್ಟಿನಲ್ಲಿ ನೀಡಿರುವ ಅಂಶಗಳಿಗನುಸಾರ ಹಳ್ಳಿಯನ್ನು ಆರಿಸುವ ನಿರ್ಣಯವನ್ನು ಸ್ವಂತ ಮನಸ್ಸಿನಂತೆ ತೆಗೆದುಕೊಳ್ಳದೇ ಅದರ ಬಗ್ಗೆ ಜವಾಬ್ದಾರ ಸಾಧಕರ ಮಾರ್ಗದರ್ಶನ ಪಡೆದು ಅದಕ್ಕನುಸಾರ ಮುಂದಿನ ಪ್ರಕ್ರಿಯೆ ಮಾಡಬೇಕು. ಈ ಸಂದರ್ಭದಲ್ಲಿ ಏನಾದರೂ ಸಂದೇಹಗಳಿದ್ದಲ್ಲಿ ಜವಾಬ್ದಾರ ಸಾಧಕರಿಗೆ ಕೇಳಬೇಕು.
ಸಾಧಕರೇ ಆಪತ್ಕಾಲವು ದಿನೇ ದಿನೇ ಹತ್ತಿರ ಬರುತ್ತಿದೆ. ಕಾಲದ ಭೀಕರತೆಯನ್ನು ಗಮನದಲ್ಲಿರಿಸಿ ಭಗವಾನ್ ಶ್ರೀಕೃಷ್ಣನ ಮೇಲೆ ಅನನ್ಯವಾದ ನಿಷ್ಠೆಯನ್ನು ಇಟ್ಟು ಮೇಲಿನ ಎಲ್ಲ ಪ್ರಕ್ರಿಯೆಗಳನ್ನು (ಹೊಸ ಜಾಗ ಹುಡುಕುವುದು, ಅಲ್ಲಿ ಮನೆ ಖರೀದಿಸುವುದು,ಕಟ್ಟಿಸುವುದು ಇತ್ಯಾದಿ) ಮುಂದಿನ ೫ ತಿಂಗಳೊಳಗೆ ಆದಷ್ಟು ಶೀಘ್ರ ವಾಗಿ ಪೂರ್ಣಗೊಳಿಸಿರಿ. ಹಳ್ಳಿಯಲ್ಲಿ ನಿವಾಸ ವ್ಯವಸ್ಥೆ ಮಾಡಿದ್ದರೂ ಸದ್ಯ ಅಲ್ಲಿ ಸ್ಥಳಾಂತರವಾಗಬಾರದು.