ಬಿಜೆಪಿಯ ರಾಷ್ಟ್ರೀಯ ವಕ್ತಾರ ಡಾ. ಸಂಬಿತ್ ಪತ್ರಾ ಇವರಿಂದ ತಿರುಗೇಟು
|
ನವ ದೆಹಲಿ – ಭಾರತೀಯ ಚಲನಚಿತ್ರೋದ್ಯಮದ ನಟರು ಮಾದಕ ವಸ್ತುಗಳ ಸೇವನೆ ಮಾಡುತ್ತಾರೆ, ಇದು ಬಹಿರಂಗವಾಗುತ್ತಿರುವಾಗ ಈ ಬಗ್ಗೆ ‘ಇಂಡಿಯಾ ಟುಡೇ’ ಸುದ್ದಿವಾಹಿನಿಯಲ್ಲಿನ ಚರ್ಚಾಕೂಟದಲ್ಲಿ ಲೇಖಕಿ ಮೇಘನಾ ಪಂತ್ ಇವರು, ‘ಭಗವಾನ ಶಿವನೂ ಕೂಡಾ ಮಾದಕ ವಸ್ತುಗಳನ್ನು ಸೇವಿಸುತ್ತಾರೆ’ ಎಂದು ಹೇಳಿದರು,
Anyone who is consuming or supplying drugs is breaking the law and should be punished: Akashdeep Sabir, Film Director; @sambitswaraj demands apology from Meghna Pant for calling Lord Shiva a drug addict.
Watch #Newstrack with @RahulKanwal LIVE at https://t.co/4fqxBWbTYl pic.twitter.com/NWPXsVWfgJ— IndiaToday (@IndiaToday) September 22, 2020
ಈ ಚರ್ಚಾಕೂಟದಲ್ಲಿ ಸಹಭಾಗಿಯಾಗಿರುವ ಭಾಜಪದ ರಾಷ್ಟ್ರೀಯ ವಕ್ತಾರರಾದ ಡಾ. ಸಂಬಿತ್ ಪತ್ರಾ ಇವರು ಪಂತ್ ಇವರಿಗೆ ತಿರುಗೇಟು ನೀಡುತ್ತಾ, ಮೇಘನಾ ಪಂತ್ ಇವರಂತಹ ಜನರು ಇತರ ಧರ್ಮದವರ ಶ್ರದ್ಧಾಸ್ಥಾನಗಳ ಬಗ್ಗೆ ಇಂತಹ ಹೇಳಿಕೆ ನೀಡಲು ಧೈರ್ಯ ಮಾಡುವುದಿಲ್ಲ ಎಂದು ಹೇಳಿದರು.