|
ಇದರೊಂದಿಗೆ ಮಹಿಳೆಯರಿಗೆ ಕಿರುಕುಳ ನೀಡಲು ಯಾರೂ ಧೈರ್ಯ ತೋರದಂತೆ ಅಪರಾಧಿಗಳಿಗೆ ಶಿಕ್ಷೆಯಾಬೇಕು ಎಂಬುದು ಅಪೇಕ್ಷಿತವಿದೆ !
ಲಕ್ಷ್ಮಣಪುರಿ – ಉತ್ತರಪ್ರದೇಶ ರಾಜ್ಯದಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳನ್ನು ತಡೆಯಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಸರಕಾರವು ಮಹಿಳೆಯರಿಗೆ ಕಿರುಕುಳ ನೀಡುವವರ ಫಲಕಗಳನ್ನು ಬೀದಿ ಬೀದಿಗಳಲ್ಲಿ ಹಾಕುವಂತೆ ಪೊಲೀಸರಿಗೆ ಆದೇಶಿಸಿದೆ.
ಸರಕಾರ ಈ ಅಭಿಯಾನಕ್ಕೆ ‘ಮಿಷನ್ ದುರಾಚಾರಿ’ ಎಂದು ಹೆಸರಿಡಲಾಗಿದೆ. ಈ ಅಭಿಯಾನದ ಜವಾಬ್ದಾರಿಯನ್ನು ಪೊಲೀಸ್ ಇಲಾಖೆಗೆ ವಹಿಸಲಾಗಿದೆ. ಅಭಿಯಾನದಡಿಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳು ನಗರಗಳಲ್ಲಿ ಪ್ರಮುಖ ಸ್ಥಳಗಳಲ್ಲಿ ಗಸ್ತು ತಿರುಗುತ್ತಾರೆ ಮತ್ತು ಮಹಿಳೆಯರನ್ನು ಕಿರುಕುಳ ನೀಡುವವರ ಮೇಲೆ ನಿಗಾ ಇಡುತ್ತಾರೆ. ಯಾವುದೇ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಹಿಳೆಯರ ವಿರುದ್ಧ ಅಪರಾಧ ನಡೆದರೆ ಅಲ್ಲಿಯ ಬೀಟ್ ಇನ್‌ಚಾರ್ಜ್ ಪಡೆಯ ಅಧಿಕಾರಿ, ಪೊಲೀಸ್ ಠಾಣೆಯ ಮುಖ್ಯ ಅಧಿಕಾರಿ ಮತ್ತು ‘ಸರ್ಕಲ್ ಆಫೀಸರ್’ ಜವಾಬ್ದಾರರಾಗಿರುತ್ತಾರೆ. ‘ಮಹಿಳೆಯರ ಮತ್ತು ಹುಡುಗಿಯರ ವಿರುದ್ಧ ನಡೆಯುವ ಕಿರುಕುಳ, ಅತ್ಯಾಚಾರ ಮತ್ತು ಲೈಂಗಿಕ ಶೋಷಣೆಯಂತಹ ಗಂಭೀರ ಅಪರಾಧಗಳಲ್ಲಿ ಮುಖ್ಯ ಆರೋಪಿಗಳಿಗೆ ಸಹಾಯ ಮಾಡಿದವರ ಹೆಸರನ್ನು ಸಹ ಬೆಳಕಿಗೆ ತರಬೇಕು. ಹೀಗೆ ಮಾಡುವುದರಿಂದ ಅಪರಾಧಕ್ಕೆ ಸಹಾಯ ಮಾಡುವವರ ಮನಸ್ಸಿನಲ್ಲಿ ಭಯ ಉಂಟಾಗುತ್ತದೆ’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಹೇಳಿದರು.
Yogi govt launches ‘Operation Durachari’ to check crime against women, perpetrators of sex crimes to have their posters displayed on UP https://t.co/pFA5LMNCqb
— OpIndia.com (@OpIndia_com) September 25, 2020
ಸರ್ಕಾರಿ ಆಸ್ತಿಪಾಸ್ತಿಗೆ ಹಾನಿ ಮಾಡಿದವರ ಛಾಯಾಚಿತ್ರಗಳನ್ನು ಸಹ ಬೀದಿ ಬೀದಿಗಳಲ್ಲಿ ಹಾಕಲಾಗಿತ್ತು !
ಈ ಹಿಂದೆ ಯೋಗಿ ಆದಿತ್ಯನಾಥ ಸರಕಾರವು ಪೌರತ್ವ ಸುಧಾರಣಾ ಕಾಯ್ದೆಯ ವಿರುದ್ಧದ ಆಂದೋಲನದಲ್ಲಿ ಸರ್ಕಾರಿ ಆಸ್ತಿಪಾಸ್ತಿಗೆ ಹಾನಿ ಮಾಡಿದವರ ಚಿತ್ರಗಳನ್ನು ಬೀದಿಬೀದಿಗಳಲ್ಲಿ ಹಾಕಲಾಗಿತ್ತು.