ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕಲು ಪ್ರತಿದಿನ ಮನೆಯಲ್ಲಿ ಹವನ ಮಾಡಿ ! – ಸಂಸದೆ ಮತ್ತು ನಟಿ ಹೇಮಾಮಾಲಿನಿ

ಬಿಜೆಪಿಯ ಸಂಸದೆ ಮತ್ತು ಪ್ರಸಿದ್ಧ ನಟಿ ಹೇಮಾಮಾಲಿನಿ ಇವರು ಕೊರೊನಾವನ್ನು ಸೋಲಿಸಲು ಪ್ರತಿದಿನ ಮನೆಯಲ್ಲಿ ಹವನ ಮಾಡುವಂತೆ ಮನವಿ ಮಾಡಿದ್ದಾರೆ. ಹವನದಿಂದ ನಕರಾತ್ಮಕ ಶಕ್ತಿ ದೂರ ಹೋಗುತ್ತದೆ ಎಂದು ಅವರು ಹೇಳಿದ್ದಾರೆ.

ಟ್ವಿಟರ್ ಗೆ ಕೇಂದ್ರ ಸರಕಾರದಿಂದ ಕೊನೆಯ ಎಚ್ಚರಿಕೆ ! 

ಕೇಂದ್ರ ಸರಕಾರವು ‘ಟ್ವಿಟರ್’, ‘ಫೇಸ್‍ಬುಕ್’ ಮತ್ತು ಇತರ ವಿದೇಶಿ ಸಾಮಾಜಿಕ ಮಾಧ್ಯಮಗಳ ಮನಬಂದಂತೆ ವರ್ತಿಸುವ ಮತ್ತು ಮೊಂಡುತನದ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಅವರನ್ನು ನೂಲಿನಂತೆ ನೇರಗೊಳಿಸಬೇಕು ಎಂದು ಹಿಂದೂಗಳಿಗೆ ಮತ್ತು ಅವರ ಸಂಘಟನೆಗಳಿಗೆ ಅನಿಸುತ್ತದೆ !

ಗುಜರಾತನಲ್ಲಿ ಜೂನ್ ೧೫ ರಿಂದ ‘ಲವ್ ಜಿಹಾದ್’ ವಿರೋಧಿ ಕಾನೂನು ಜಾರಿಗೆ

ಗುಜರಾತ ಸರಕಾರವು ಬಜೆಟ್ ಅಧಿವೇಶನದಲ್ಲಿ ಅಂಗೀಕರಿಸಿದ ಲವ್ ಜಿಹಾದ ವಿರೋಧಿ ಕಾನೂನಿಗೆ ರಾಜ್ಯಪಾಲ ಆಚಾರ್ಯ ದೇವವ್ರತ ಅವರು ಅನುಮೋದನೆ ನೀಡಿದ್ದಾರೆ. ಈ ಕಾನೂನು ಜೂನ್ ೧೫ ರಿಂದ ರಾಜ್ಯದಲ್ಲಿ ಜಾರಿಗೆ ಬರಲಿದೆ.

ಪುತ್ತೂರಿನಲ್ಲಿ ೫೮ ವರ್ಷದ ಮತಾಂಧನಿಂದ ಮೆಡಿಕಲ್‍ಗೆ ನುಗ್ಗಿ ಯುವತಿಯ ಮೇಲೆ ಅತ್ಯಾಚಾರ

ಕರ್ನಾಟಕ ಮತ್ತು ಕೇರಳದ ಗಡಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ನೆಟ್ಟಣಿಗೆಯ ಮುಡ್ನೂರು ಗ್ರಾಮದ ಇಬ್ರಾಹಿಂ ಕುಕ್ಕಾಜೆ (೫೮) ಮೆಡಿಕಲ್ ಅಂಗಡಿಯೊಳಗೆ ನುಗ್ಗಿ ಮಹಿಳಾ ಉದ್ಯೋಗಿಯ ಮೇಲೆ ಅತ್ಯಾಚಾರ ಮಾಡಿರುವ ಘಟನೆಯು ಬೆಳಕಿಗೆ ಬಂದಿದೆ.

ಕೊರೊನಾ ಒಂದು ರೋಗವಲ್ಲ, ಅಲ್ಲಾನ ಎದುರು ಅಳುತ್ತಾ ಕ್ಷಮೆ ಕೇಳಿದರೆ ಅದು ನಾಶವಾಗುತ್ತದೆ !

ಮುಸಲ್ಮಾನ ಮತ್ತು ಕ್ರೈಸ್ತ ನಾಯಕರು ಕೊರೊನಾದ ನಾಶಕ್ಕಾಗಿ ದೇವರಿಗೆ ಶರಣಾಗುವ ಕರೆಯನ್ನು ನೀಡುತ್ತಾರೆ; ಆದರೆ ಯಾವುದೇ ಹಿಂದೂ ನಾಯಕನು ಇಂತಹ ಮನವಿಯನ್ನು ಮಾಡುವುದಿಲ್ಲ; ಏಕೆಂದರೆ ಅವರು ತಮ್ಮನ್ನು ಪ್ರಗತಿ(ಅಧೋಗತಿ)ಪರ ಹಾಗೂ ವಿಜ್ಞಾನನಿಷ್ಠರೆಂದು ತಿಳಿದುಕೊಳ್ಳುತ್ತಾರೆ !

ದೆಹಲಿಯ ‘ಅಖಿಲ ಭಾರತೀಯ ಆಯುರ್ವೇದ ಸಂಸ್ಥಾನ’ ಆಸ್ಪತ್ರೆಯಲ್ಲಿ ಆಯುರ್ವೇದ ಔಷಧಿಯಿಂದ ಗುಣಮುಖರಾದ ೬೦೦ ರೋಗಿಗಳು !

ಅಖಿಲ ಭಾರತೀಯ ಆಯುರ್ವೇದ ಸಂಸ್ಥಾನ (ಆಲ್ ಇಂಡಿಯಾ ಇನ್ಸ್‍ಸ್ಟಿಟ್ಯೂಟ್ ಆಫ್ ಆಯುರ್ವೇದ – ಎಐಐಎ) ಈ ಆಸ್ಪತ್ರೆಯಲ್ಲಿ ಈವರೆಗೆ ೬೦೦ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ವಿಶೇಷವೆಂದರೆ, ಒಟ್ಟು ರೋಗಿಗಳಲ್ಲಿ ಯಾರೂ ಸಾಯಲಿಲ್ಲ. ದಾಖಲಾದ ಶೇ. ೯೪ ರಷ್ಟು ರೋಗಿಗಳಿಗೆ ಆಯುರ್ವೇದ ಚಿಕಿತ್ಸೆಯನ್ನು ನೀಡಲಾಯಿತು.

ದೆಹಲಿ ಪುರಸಭೆಯು ಕೊರೊನಾದಿಂದ ಗುಣಮುಖರಾದವರಿಗೆ ಆಯುರ್ವೇದ ಮತ್ತು ಪಂಚಕರ್ಮದಿಂದ ಮುಂದಿನ ಚಿಕಿತ್ಸೆ ನೀಡಲಿದೆ

ಈಗ ಆಯುರ್ವೇದದ ಮಹತ್ವವು ಗಮನಕ್ಕೆ ಬರುತ್ತಿರುವುದರಿಂದ, ಇಂತಹ ಚಿಕಿತ್ಸೆಗಳು ಸರಕಾರಿ ಹಂತದಲ್ಲಿ ನಡೆಯುತ್ತಿದ್ದರೆ ಅದು ಶ್ಲಾಘನೀಯವಾಗಿದೆ! ಇಂತಹ ಪ್ರಯತ್ನಗಳು ದೇಶದೆಲ್ಲೆಡೆ ಆಗಬೇಕು !

ತಮಿಳುನಾಡಿನ ಒಂದು ಹಳ್ಳಿಯಲ್ಲಿ ಲಸಿಕೆ ತೆಗೆದುಕೊಳ್ಳಬೇಕೆಂದು ಉಚಿತ ಬಿರಿಯಾನಿ ಹಾಗೂ ಉಡುಗೊರೆ ನೀಡುವ ಯೋಜನೆ

ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಇಂತಹ ಯೋಜನೆಯನ್ನು ನಡೆಸಬೇಕಾಗುತ್ತದೆ, ಇದು ಜನರು ತಮ್ಮ ಆರೋಗ್ಯದ ಬಗ್ಗೆ ಎಷ್ಟು ಅಸಡ್ಡೆ ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ !

ಕನ್ನಡ ಭಾಷೆಯ ಬಗ್ಗೆ ಅಪಶಬ್ದವನ್ನು ಬಳಸಿದ್ದಕ್ಕಾಗಿ ಗೂಗಲ್‍ನಿಂದ ಕ್ಷಮೆಯಾಚನೆ !

ವಿಶ್ವದ ಅತಿದೊಡ್ಡ ಆನ್‍ಲೈನ್ `ಸರ್ಚ್ ಎಂಜಿನ್’ ಗೂಗಲ್, ಕನ್ನಡ ಭಾಷೆಯನ್ನು ‘ಭಾರತದ ಅತ್ಯಂತ ಕೆಟ್ಟ ಭಾಷೆ’ ಎಂದು ಹೇಳಿತ್ತು. ಇದಕ್ಕೆ ಭಾರತೀಯರು ಮತ್ತು ಕರ್ನಾಟಕ ಸರಕಾರದಿಂದ ವಿರೋಧವಾದ ನಂತರ ಗೂಗಲ್ ಭಾರತೀಯರಲ್ಲಿ ಕ್ಷಮೆಯಾಚಿಸಿದೆ.

ಕರ್ನಾಟಕದ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀ ಅವರ ಭವಿಷ್ಯವಾಣಿ !

ಕೊರೊನಾದ ಬಿಕ್ಕಟ್ಟು ಇನ್ನೂ ೧೦ ವರ್ಷಗಳ ಕಾಲ ಇರಲಿದೆ. ಜೂನ್ ೨೦ ರಂದು ಕೊರೊನಾದ ಎರಡನೆಯ ಅಲೆಯು ಕಡಿಮೆಯಾಗುತ್ತದೆ; ಆದರೆ ನಂತರ ಮೂರನೆಯ ಅಲೆ ಬರಲಿದೆ. ಅದು ಭಯಂಕರವಾಗಿರುತ್ತದೆ. ಕೋಟ್ಯಂತರ ಜನರು ಬೀದಿಗಳಲ್ಲಿ ರಕ್ತದ ವಾಂತಿ ಮಾಡಿ ಸಾಯುತ್ತಾರೆ. ಅದೇರೀತಿ ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಹತ್ಯೆಗಳೂ ನಡೆಯಲಿವೆ, ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದಿದ್ದಾರೆ.