|
ಕೊರೊನಾದ ಮೂರನೆ ಅಲೆಯು ಭಯಾನಕವಾಗಿರುತ್ತದೆ ! ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಹತ್ಯೆಗಳು ನಡೆಯಲಿವೆ ! ಸುನಾಮಿ ಮತ್ತು ಭೂಕಂಪಗಳಲ್ಲಿ ಲಕ್ಷಾಂತರ ಜನರು ಸಾಯುವರು ! |

ಹಾಸನ – ಕೊರೊನಾದ ಬಿಕ್ಕಟ್ಟು ಇನ್ನೂ ೧೦ ವರ್ಷಗಳ ಕಾಲ ಇರಲಿದೆ. ಜೂನ್ ೨೦ ರಂದು ಕೊರೊನಾದ ಎರಡನೆಯ ಅಲೆಯು ಕಡಿಮೆಯಾಗುತ್ತದೆ; ಆದರೆ ನಂತರ ಮೂರನೆಯ ಅಲೆ ಬರಲಿದೆ. ಅದು ಭಯಂಕರವಾಗಿರುತ್ತದೆ. ಕೋಟ್ಯಂತರ ಜನರು ಬೀದಿಗಳಲ್ಲಿ ರಕ್ತದ ವಾಂತಿ ಮಾಡಿ ಸಾಯುತ್ತಾರೆ. ಅದೇರೀತಿ ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಹತ್ಯೆಗಳೂ ನಡೆಯಲಿವೆ, ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಅವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
(ಸೌಜನ್ಯ : TV5 Kannada)
ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳವರು ಇಲ್ಲಿಯವರೆಗೆ ಮಾಡಿದ ಯಾವುದೇ ಭವಿಷ್ಯವಾಣಿಯು ಸುಳ್ಳಾಗಿಲ್ಲ ಎಂದು ಹೇಳಲಾಗುತ್ತದೆ. ಎರಡು ವರ್ಷಗಳ ಹಿಂದೆ ಅವರು ಔಷಧ ಸಿಗದಿರುವ ಕಾಯಿಲೆ ಬರಲಿದೆ ಎಂದು ಹೇಳಿದ್ದರು.
ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳವರು ತಮ್ಮ ಮಾತನ್ನು ಮುಂದುವರೆಸುತ್ತಾ, ಕಾರ್ತಿಕ ತಿಂಗಳವರೆಗೆ ಮಳೆ ಬೀಳಲಿದೆ; ಚಳಿಗಾಲದಲ್ಲಿಯೂ ಶೀತಲತೆಯ ಪ್ರಮಾಣ ಅಧಿಕವಾಗಿರಲಿದೆ ಮತ್ತು ಇದು ರೋಗಗಳಿಗೆ ಪೂರಕವಾಗಿರುತ್ತದೆ. ಅಶ್ವಯುಜ ಮಾಸದಲ್ಲಿ ಇನ್ನಷ್ಟು ಅಪಾಯಕಾರಿ ಘಟನೆಗಳಾಗಲಿವೆ. ಆ ಸಮಯದಲ್ಲಿ ಸಾಮೂಹಿಕ ಸಾವುಗಳ ಜೊತೆಗೆ ದೊಡ್ಡ ದೊಡ್ಡ ವ್ಯಕ್ತಿಗಳ ಹತ್ಯೆಗಳಾಗಲಿವೆ. ಸುನಾಮಿಗಳು, ಭೂಕಂಪಗಳು ಮುಂತಾದ ಅನೇಕ ನೈಸರ್ಗಿಕ ವಿಕೋಪಗಳು ಸಂಭವಿಸುತ್ತವೆ. ಅದರಲ್ಲಿ ಲಕ್ಷಾಂತರ ಜನರು ಸಾಯುತ್ತಾರೆ ಎಂದು ಹೇಳಿದ್ದಾರೆ.
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!