ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕಲು ಪ್ರತಿದಿನ ಮನೆಯಲ್ಲಿ ಹವನ ಮಾಡಿ ! – ಸಂಸದೆ ಮತ್ತು ನಟಿ ಹೇಮಾಮಾಲಿನಿ

ಮಥುರಾ (ಉತ್ತರ ಪ್ರದೇಶ) – ಇಲ್ಲಿಯ ಬಿಜೆಪಿಯ ಸಂಸದೆ ಮತ್ತು ಪ್ರಸಿದ್ಧ ನಟಿ ಹೇಮಾಮಾಲಿನಿ ಇವರು ಕೊರೊನಾವನ್ನು ಸೋಲಿಸಲು ಪ್ರತಿದಿನ ಮನೆಯಲ್ಲಿ ಹವನ ಮಾಡುವಂತೆ ಮನವಿ ಮಾಡಿದ್ದಾರೆ. ಹವನದಿಂದ ನಕರಾತ್ಮಕ ಶಕ್ತಿ ದೂರ ಹೋಗುತ್ತದೆ ಎಂದು ಅವರು ಹೇಳಿದ್ದಾರೆ. ಹೇಮಾಮಾಲಿನಿ ಇದರ ಬಗ್ಗೆ ವಿಡಿಯೋ ಪ್ರಸಾರ ಮಾಡಿದ್ದಾರೆ. ಅದರಲ್ಲಿ ಅವರು `ವಿಶ್ವ ಪರಿಸರ ದಿನಾಚರಣೆ’ ಸಂದರ್ಭದಲ್ಲಿ ಮಥುರಾದ ಜನರಿಗೆ ಈ ಸಂದೇಶವನ್ನು ನೀಡಿದ್ದಾರೆ.

ಈ ವಿಡಿಯೊದಲ್ಲಿ, ಹೇಮಾಮಾಲಿನಿಯವರು, ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಹವನ ಮಾಡುವ ಪದ್ದತಿ ರೂಢಿಯಲ್ಲಿದೆ ಇದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗಿ ವಾತಾವರಣವನ್ನು ಶುದ್ಧೀಕರಿಸಬಹುದಾಗಿದೆ. ಹವನವೇ ಇದಕ್ಕೆಲ್ಲ ಪರಿಹಾರವಾಗಿದೆ ಮತ್ತು ಇದು ಸಹ ಪ್ರಯೋಜನಕಾರಿಯಾಗಿದೆ. ಇಂದು ಇಡೀ ಜಗತ್ತು ಸಾಂಕ್ರಾಮಿಕ ಮತ್ತು ಪರಿಸರ ಹಾನಿಯ ಬಿಕ್ಕಟ್ಟಿನಲ್ಲಿದೆ. ಇಂತಹ ಸಮಯದಲ್ಲಿ, ಸಾಂಕ್ರಾಮಿಕ ರೋಗವು ದೂರವಾಗುವವರೆಗೆ ಹವನವನ್ನು ಪ್ರತಿದಿನ ಮಾಡಬೇಕು ಎಂದು ಹೇಳಿದ್ದಾರೆ.