ಪ್ರಧಾನಿ ನರೇಂದ್ರ ಮೋದಿಯವರ ಬಾಂಗ್ಲಾದೇಶದ ಭೇಟಿಯ ನಂತರ ಮತ್ತೊಂದು ದೇವಾಲಯದ ಮೇಲೆ ದಾಳಿ !

ಮತಾಂಧರಿಂದ ಸರಸ್ವತಿದೇವಿಯ ವಿಗ್ರಹ ಧ್ವಂಸ !

ಇಂತಹ ಘಟನೆಗಳನ್ನು ತಡೆಯಲು ಭಾರತ ಸರಕಾರ ಪ್ರಯತ್ನಗಳನ್ನು ಮಾಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಬೊಗುಲಾ ಜಿಲ್ಲೆಯ ಧುನೋತ ಉಪಜಿಲ್ಲೆಯ ದೇವಾಲಯವೊಂದರಲ್ಲಿ ಸರಸ್ವತಿ ದೇವಿಯ ವಿಗ್ರಹವನ್ನು ಮತಾಂಧರು ಧ್ವಂಸಗೊಳಿಸಿದರು. ಈ ಬಗ್ಗೆ ಪೊಲೀಸರಿಗೆ ದೂರು ದಾಖಲಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಬಾಂಗ್ಲಾದೇಶ ಭೇಟಿಯ ನಂತರ ಮಾಗೂರ ಜಿಲ್ಲೆಯ ಮಹಮ್ಮದಪುರ ಉಪಜಿಲ್ಲೆಯ ೪೦೦ ವರ್ಷಗಳಷ್ಟು ಹಿಂದಿನ ದೇವಾಲಯವನ್ನು ಧ್ವಂಸಗೊಳಿಸಲಾಗಿತ್ತು.

ಬ್ರಾಹ್ಮಣಬರಿಯಾದಲ್ಲಿರುವ ಕಾಳಿಮಾತೆ ಮತ್ತು ಶ್ರೀಕೃಷ್ಣ ದೇವಾಲಯಗಳನ್ನೂ ಧ್ವಂಸಗೊಳಿಸಿದ್ದರು.

ದೇವಾಲಯದ ಆಡಳಿತಾಧಿಕಾರಿ ಸುಮೋತಿರಾಣಿ ಸೆಬಾಯಾತ ಇವರು, ನಾನು ರಾತ್ರಿ ಪೂಜೆ ಮಾಡಿದ ನಂತರ ಮನೆಗೆ ಹೋಗಿ ಬೆಳಿಗ್ಗೆ ೪ ಗಂಟೆಗೆ ದೇವಸ್ಥಾನಕ್ಕೆ ಬಂದೆ, ಆಗ ದೇವಾಲಯದ ಬಾಗಿಲು ತೆರೆದಿತ್ತು ಅಲ್ಲದೆ, ಇಲ್ಲಿ ಬಟ್ಟೆಗಳನ್ನು ಸುಡಲಾಗಿತ್ತು. ನಾನು ದೇವಸ್ಥಾನಕ್ಕೆ ಹೋದಾಗ ಸರಸ್ವತಿ ದೇವಿಯ ವಿಗ್ರಹವನ್ನು ಧ್ವಂಸ ಮಾಡಲಾಗಿತ್ತು ಎಂದು ಹೇಳಿದರು.