ಬಾಂಗ್ಲಾದೇಶದ ಜಿಹಾದಿ ಸಂಘಟನೆಯ ಪದಾಧಿಕಾರಿಗಳ ಬಂಧನ

ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ಸಮಯದಲ್ಲಿ ಹಿಂಸಾಚಾರ ನಡೆಸಿದ ಪ್ರಕರಣ

ಮಹಿಳೆಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದಾಗ ಬಂಧನ !

ಢಾಕಾ (ಬಾಂಗ್ಲಾದೇಶ) – ಕೆಲವು ದಿನಗಳ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದಾಗ, ಹಾಗೂ ಅಲ್ಲಿಂದ ಹಿಂದಿರುಗಿದ ನಂತರ ಬಾಂಗ್ಲಾದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಹಿಂಸಾಚಾರ ಮಾಡಲಾಗಿತ್ತು. ಇದರ ಹಿಂದೆ ಜಿಹಾದಿ ಸಂಘಟನೆಯಾದ ಹಿಫಜತ್-ಎ-ಇಸ್ಲಾಂನ ಕೈವಾಡವಿತ್ತು. ಈ ಪ್ರಕರಣದಲ್ಲಿ ಪೊಲೀಸರು ಒಂದು ರೆಸಾರ್ಟ್ ಮೇಲೆ ದಾಳಿ ನಡೆಸಿ ಸಂಘಟನೆಯ ಜಂಟಿ ಪ್ರಧಾನ ಕಾರ್ಯದರ್ಶಿ ಮಾಮುನುಲ್ ಹಕ್‍ನನ್ನು ಬಂಧಿಸಿದ್ದಾರೆ. ಆತ ಓರ್ವ ಮಹಿಳೆಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಆತ ಪತ್ತೆಯಾಗಿದ್ದಾನೆ.

ಶೇಖ್ ಹಸೀನಾ

ಶೇಖ್ ಹಸೀನಾ ಈ ಘಟನೆಯ ಬಗ್ಗೆ ಸಂಸತ್ತಿನಲ್ಲಿ, ಮಾಮುನುಲ್ ಹಕ್ ಇಸ್ಲಾಂ ಧರ್ಮವನ್ನು ಅವಮಾನಿಸಿದ್ದಾರೆ. ನಾನು ಮಾಮುನುಲ ಹಕ್‍ನ ಚಾರಿತ್ರ್ಯದ ಬಗ್ಗೆ ಮಾತನಾಡಲು ಬಯಸುವುದಿಲ್ಲ. ನೀವೆಲ್ಲರೂ ಆತನನ್ನು ಅಪವಿತ್ರ ಕೆಲಸಗಳನ್ನು ಮಾಡುತ್ತಿರುವಾಗ ನೋಡಿದ್ದೀರಿ. ಅವನು ಯಾವಾಗಲೂ ಕರ್ಮ ಮತ್ತು ಧರ್ಮದ ಬಗ್ಗೆ ಮಾತನಾಡುತ್ತಿರುತ್ತಾನೆ. ದೇಶಾದ್ಯಂತ ಹಿಂಸಾಚಾರವನ್ನು ಹಬ್ಬಿಸಿ ಮಾಮುನುಲ್ ಸುಂದರ ಮಹಿಳೆಯೊಂದಿಗೆ ಮೋಜು-ಮಜಾ ಮಾಡಲು ರೆಸಾರ್ಟ್‍ಗೆ ಹೋದನು. ಆತ ಇಸ್ಲಾಂ ಧರ್ಮದ ಹೆಸರಿಗೆ ಕಪ್ಪುಚುಕ್ಕೆಯಾಗಿದ್ದಾನೆ. ಇಂತಹ ಜನರು ಇಸ್ಲಾಂ ಧರ್ಮವನ್ನು ಅಪವಿತ್ರಗೊಳಿಸುತ್ತಿದ್ದಾರೆ.

ಇಸ್ಲಾಂ ಧರ್ಮವನ್ನು ನಂಬುವ ಯಾವುದೇ ವ್ಯಕ್ತಿಯು ಸುಳ್ಳು ಹೇಳುತ್ತಾರೇನು ? ಅಂತಹ ಜನರು ಧರ್ಮಪಾಲನೆಯನ್ನು ಯಾವ ರೀತಿ ಮಾಡುತ್ತಿರಬಹುದು ಮತ್ತು ಅವರು ಜನರಿಗೆ ಏನು ಹೇಳುತ್ತಾರೆ ? ಇಂತಹ ಕೆಲವು ಜನರಿಂದ ಇಸ್ಲಾಂನ ಹೆಸರು ಭಯೋತ್ಪಾದನೆ ಮತ್ತು ಚಾರಿತ್ರ್ಯಹೀನ ಜನರೊಂದಿಗೆ ಜೋಡಿಸಲ್ಪಟ್ಟಿದೆ.