ಸಂಘಟನೆಯನ್ನು ನಿಷೇಧಿಸಲಾಯಿತೆಂದರೆ ಅದರ ಚಟುವಟಿಕೆಗಳು ಮುಗಿಯುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಇಂತಹ ನಿಷೇಧಿತ ಸಂಘಟನೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಅವಶ್ಯಕ !
ನವ ದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಬಾಂಗ್ಲಾದೇಶ ಭೇಟಿಯ ಮೊದಲು ಹಾಗೂ ನಂತರ ನಡೆದ ಹಿಂಸಾಚಾರದಲ್ಲಿ ೧೨ ಜನರು ಸಾವನ್ನಪ್ಪಿದ್ದಾರೆ. ಅವರ ಈ ಭೇಟಿಯನ್ನು ಬಾಂಗ್ಲಾದೇಶದ ಮತಾಂಧರು ವಿರೋಧಿಸಿದ್ದರು. ಈ ಹಿಂಸಾಚಾರದ ಹಿಂದೆ ನಿಷೇಧಿತ ಸಂಘಟನೆ ಜಮಾತೆ-ಇ-ಇಸ್ಲಾಮಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ ಬಾಂಗ್ಲಾದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ: 10 ಮಂದಿ ಸಾವು
#Temple https://t.co/Q6dSIjtxNq— vijaykarnataka (@Vijaykarnataka) March 29, 2021
೧. ಪೊಲೀಸ್, ಪ್ರಸಾರಮಾಧ್ಯಮಗಳು ಮತ್ತು ಸರಕಾರಿ ಕಚೇರಿಗಳನ್ನು ಗುರಿಯಾಗಿಸುವ ಸಂಚು ರೂಪಿಸಲಾಗಿತ್ತು. ಇದಕ್ಕಾಗಿ ಜಮಾತೆ-ಇ-ಇಸ್ಲಾಮಿ ದೊಡ್ಡ ಮೊತ್ತವನ್ನು ಹಂಚಿತ್ತು. ಕಾನೂನು ಮತ್ತು ಸುವ್ಯವಸ್ಥೆ ಹೆಸರಿನಲ್ಲಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಮುತ್ತಿಗೆ ಹಾಕುವ ಉದ್ದೇಶವಾಗಿತ್ತು.
೨. ವರದಿಯ ಪ್ರಕಾರ, ಜಮಾತೆ-ಇ-ಇಸ್ಲಾಮಿ ಮತ್ತು ಹಿಫಜತ್-ಎ-ಇಸ್ಲಾಂ ಈ ಸಂಘಟನೆಯ ನಾಯಕರು ಮತ್ತು ಅವರ ಮಾಲಿಕತ್ವ ಹೊಂದಿರುವ ಸ್ಥಳಗಳ ಮೇಲೆ ಜಡ್ತಿ ಹಾಕುವಂತೆ ಶಿಫಾರಸ್ಸನ್ನು ಮಾಡಲಾಗಿದೆ. ಅಗತ್ಯವಿದ್ದರೆ ಅವರನ್ನು ಬಂಧಿಸುವಂತೆ ಕೇಳಿಕೊಳ್ಳಲಾಗಿದೆ.