ದೆಹಲಿಯಲ್ಲಿನ ‘ಏಮ್ಸ್’ ಆಸ್ಪತ್ರೆಯಲ್ಲಿ ‘ಆಧ್ಯಾತ್ಮಿಕ ಚಿಕಿತ್ಸೆ’ ವಿಭಾಗ ಆರಂಭವಾಗಲಿದೆ !

ಆಸ್ಪತ್ರೆಯಲ್ಲಿನ ಕೆಲವು ವೈದ್ಯರಿಂದ ವಿರೋಧ !

ನವ ದೆಹಲಿ – ಭಾರತದಲ್ಲಿನ ಮೊದಲನೇ ಸ್ಥಾನದಲ್ಲಿರುವ ಆಸ್ಪತ್ರೆಯಾಗಿರುವ ‘ಅಖಿಲ ಭಾರತೀಯ ಆಯುರ್ವಿಜ್ಞಾನ ಸಂಸ್ಥೆ’ ಎಂದರೆ ‘ಏಮ್ಸ್’ ನ ದೆಹಲಿಯ ಆಸ್ಪತ್ರೆಯಲ್ಲಿ ಶೀಘ್ರದಲ್ಲೇ ಆಧ್ಯಾತ್ಮಿಕ ಚಿಕಿತ್ಸೆ (ಸ್ಪಿರಿಚುಯಲ್ ಮೆಡಿಸಿನ್) ವಿಭಾಗ ಆರಂಭವಾಗಲಿದೆ. ಇದಕ್ಕಾಗಿ ಒಂದು ಸಮಿತಿಯ ಸ್ಥಾಪನೆ ಮಾಡಲಾಗಿದ್ದು ಅಕ್ಟೋಬರ್ ತಿಂಗಳ ಕೊನೆಯ ವಾರದ ವರೆಗೆ ಅದು ಅದರ ಶಿಫಾರಸ್ಸು ಪ್ರಸ್ತುತಪಡಿಸಲು ಹೇಳಲಾಗಿದೆ. ಆಧ್ಯಾತ್ಮಿಕ ಚಿಕಿತ್ಸೆಯ ಜೊತೆಗೆ ಟ್ರಾನ್ಸ್ ಪ್ಲಾಂಟ್ ಮೆಡಿಸಿನ್ ಮತ್ತು ವೈದ್ಯಕೀಯ ಶಿಕ್ಷಣ ಈ ವಿಭಾಗ ಆರಂಭಿಸುವುದು ಕೂಡ ಯೋಚನೆಯಲ್ಲಿ ಇದೇ ಎಂದು ಹೇಳಲಾಗಿದೆ. ಏಮ್ಸ್ ನಲ್ಲಿ ಕಳೆದ ಕೆಲವು ತಿಂಗಳಿಂದ ಆಧ್ಯಾತ್ಮಿಕ ಆರೋಗ್ಯದ ದೃಷ್ಟಿಕೋನದಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿವೆ. ಈಗ ಹೊಸ ಆಧ್ಯಾತ್ಮಿಕ ಚಿಕಿತ್ಸಾ ವಿಭಾಗದ ಮಾಧ್ಯಮದಿಂದ ಅಲೋಪಥಿ, ಯೋಗ ಮತ್ತು ಧ್ಯಾನ ಇದರ ಏಕತ್ರಿಕರಣದ ಪ್ರಯತ್ನ ಮಾಡಲಾಗುವುದು.

ಆಸ್ಪತ್ರೆಯಲ್ಲಿನ ಕೆಲವು ವೈದ್ಯರು ಇಂತಹ ವಿಭಾಗ ಸ್ಥಾಪಿಸುವ ನಿರ್ಣಯವು ವಿಜ್ಞಾನ ವಿರೋಧಿಯಾಗಿದೆ ಎಂದು ಹೇಳುತ್ತಾ ಅದನ್ನು ವಿರೋಧಿಸಿದ್ದಾರೆ. ಓರ್ವ ಹಿರಿಯ ಪ್ರಾಧ್ಯಾಪಕರು, ಏಮ್ಸ್ ನ ಈ ನಿರ್ಣಯ ವೈಜ್ಞಾನಿಕ ಅರಿವಿನ ವಿರುದ್ಧವಾಗಿದ್ದು ಇದರಿಂದ ಒಂದು ಹೆಸರಂತ ಆರೋಗ್ಯ ಸಂಸ್ಥೆಯ ಪ್ರತಿಮೆ ಮಲಿನವಾಗುವುದು. ಏಮ್ಸ್ ನಿಂದ ಕೆಲವು ಸಮಯದಿಂದ ‘ವಿಜ್ಞಾನ ವಿರೋಧಿ ಕೃತ್ಯಗಳಿಗೆ ಬೆಂಬಲ ನೀಡಲಾಗುತ್ತಿದ್ದು ಈಗ ಈ ರೀತಿಯ ವಿಭಾಗ ನಿರ್ಮಿಸಿ ‘ವಿಜ್ಞಾನ ವಿರೋಧಿ ಕೃತ್ಯ’ಗಳಿಗೆ ಅಧಿಕೃತ ಮಾನ್ಯತೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಅಮೇರಿಕಾದಲ್ಲಿನ ಹೆಸರಾಂತ ವಿದ್ಯಾಪೀಠದಲ್ಲಿ ಆಧ್ಯಾತ್ಮ ಆಧಾರಿತ ಪಠ್ಯಕ್ರಮಗಳ ಸೇರ್ಪಡೆ ! – ಏಮ್ಸ್ ನ ವಕ್ತಾರರು

ಇದರ ಬಗ್ಗೆ ಏಮ್ಸ್ ನ ವಕ್ತಾರ ಡಾ. ರೀಮಾ ದಾದಾ ಇವರು, ”ಆಧ್ಯಾತ್ಮಿಕ ಚಿಕಿತ್ಸಾ ವಿಭಾಗ ಆರಂಭ ಮಾಡುವ ಪ್ರಸ್ತಾವ ಪ್ರಸ್ತುತ ಪ್ರಾಥಮಿಕ ಹಂತದಲ್ಲಿದೆ. ಇಂತಹ ವಿಭಾಗ ಸ್ಥಾಪನೆಯಾದ ನಂತರ ಅದರ ಆಧುನಿಕ ವೈದ್ಯಕೀಯ ಕ್ಷೇತ್ರಕ್ಕೆ ಸಹಾಯವೆ ಆಗುವುದು. ಈ ವಿಭಾಗದಲ್ಲಿ ಯೋಗ ಮತ್ತು ರೇಖೆಯನ್ನೂ ಸಮಾವೇಶ ಮಾಡಲಾಗುವುದು. ಅಮೇರಿಕಾದ ಹೆಸರಾಂತ ಮಿಷನಗನ್ ವಿದ್ಯಾಪೀಠ ಮತ್ತು ‘ಎಲ್ ಸ್ಕೂಲ್ ಆಫ್ ಮೆಡಿಸಿನ’ ಇಲ್ಲಿ ಹಿಂದಿನಿಂದಲೇ ಆಧ್ಯಾತ್ಮದ ಬಗ್ಗೆ ಆಧಾರಿತ ಪಠ್ಯಕ್ರಮ ಕಲಿಸಲಾಗುತ್ತಿದೆ.” ಎಂದು ಹೇಳಿದರು.

ಸಂಪಾದಕೀಯ ನಿಲುವು

ಮನುಷ್ಯನ ಜೀವನದಲ್ಲಿ ಶೇಕಡ ೮೦ ರಷ್ಟು ಸಮಸ್ಯೆಗಳು ಆಧ್ಯಾತ್ಮಿಕ ಸ್ವರೂಪದಾಗಿರುತ್ತದೆ. ಆದ್ದರಿಂದ ಅದರ ಉತ್ತರ ಅಧ್ಯಾತ್ಮ ಶಾಸ್ತ್ರವೇ ನೀಡಲು ಸಾಧ್ಯ. ಅದಕ್ಕಾಗಿ ಸಾಧನೆ ಮಾಡಬೇಕಾಗುತ್ತದೆ. ಶಾಲೆಯ ಶಿಕ್ಷಣದಲ್ಲಿ ಸಾಧನೆ ಕಲಿಸುವುದಿಲ್ಲ ಆದ್ದರಿಂದ ಸಮಾಜದ ಅಧೋಗತಿ ಆಗಿದೆ. ಆಧ್ಯಾತ್ಮದ ಬಗ್ಗೆ ಎಳ್ಳಷ್ಟು ಜ್ಞಾನ ಇಲ್ಲದಿರುವ ಕೆಲವು ಡಾಕ್ಟರರು ಇದಕ್ಕೆ ವಿರೋಧಿಸುತ್ತಿದ್ದಾರೆ, ಇದರಲ್ಲೇನಿದ ಆಶ್ಚರ್ಯ ?