ಬ್ರಿಟನ್ ನ ಮಹಾರಾಣಿಯ ಹತ್ಯೆಗೆ ಪ್ರಯತ್ನಿಸಿದ ಪ್ರಕರಣ ಸಿಖ ಯುವಕನಿಗೆ ೯ ವರ್ಷ ಜೈಲು ಶಿಕ್ಷೆ !

ಲಂಡನ (ಬ್ರಿಟನ್) – ಬ್ರಿಟನ್ ನ ದಿವಂಗತ ಮಹಾರಾಣಿ ಎಲಿಝಾಬೆತ್ ದ್ವಿತೀಯ ಇವರನ್ನು ೨೦೨೧ ರಲ್ಲಿ ಹತ್ಯೆ ಮಾಡುವ ಪ್ರಯತ್ನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ೨೧ ವರ್ಷದ ಯುವಕನಿಗೆ ಬ್ರಿಟನ ನ್ಯಾಯಾಲಯವು ೯ ವರ್ಷದ ಜೈಲು ಶಿಕ್ಷೆ ವಿಧಿಸಿದೆ. ಜಸ್ವಂತ ಸಿಂಹ ಚೈಲ ಎಂದು ಅವನ ಹೆಸರಾಗಿದೆ. ಅವನು ೨೦೨೧ ರಲ್ಲಿ ಕ್ರಿಸ್ ಮಸ್ ಸಮಯದಲ್ಲಿ ಮಹಾರಾಣಿಯ ಅರಮನೆಯಲ್ಲಿ ಆಕೆಯನ್ನು ಕೊಲ್ಲುವ ಷಡ್ಯಂತ್ರ ರೂಪಿಸಿದ್ದನು. ಆ ಸಮಯದಲ್ಲಿ ಅವನು ಆಯುಧ ಹಿಡಿದು ಅರಮನೆಗೆ ಕೂಡ ಪ್ರವೇಶಿಸಿದ್ದನು. ಆ ಸಮಯದಲ್ಲಿ ಅವನನ್ನು ಬಂಧಿಸಲಾಯಿತು. ೧೯೧೯ ರಲ್ಲಿ ಭಾರತದ ಅಮೃತಸರದ ಜಾಲಿಯನವಾಲ ಬಾಗದಲ್ಲಿ ನರಮೇಧದ ಘಟನೆಯ ಸೇಡು ತೀರಿಸಿಕೊಳ್ಳುವುದಕ್ಕಾಗಿ ಮಹಾರಾಣಿಯ ಹತ್ಯೆ ಮಾಡುವ ಇಚ್ಛೆ ಇದೆ, ಎಂದು ಅವನು ಒಂದು ವಿಡಿಯೋ ಮೂಲಕ ಹೇಳಿದ್ದನು. ಅವನ ಮಾನಸಿಕ ಸ್ಥಿತಿ ಗಮನಕ್ಕೆ ತೆಗೆದುಕೊಂಡು ನ್ಯಾಯಾಲಯವು ಅವನಿಗೆ ಕೇವಲ ೯ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.