ಕಾರಣ ಇಲ್ಲದೆ ವ್ಯಕ್ತಿಯೊಬ್ಬನನ್ನು 30 ನಿಮಿಷಗಳ ಕಾಲ ವಶಕ್ಕೆ ಪಡೆದ ಪೊಲೀಸರಿಗೆ 50 ಸಾವಿರ ರೂಪಾಯಿ ದಂಡ !

  • ದೆಹಲಿ ಉಚ್ಚನ್ಯಾಯಾಲಯದ ಆದೇಶ
  • ಸಂಬಳದಿಂದ ಹಣ ಕಡಿತಗೊಳಿಸಲು ಆದೇಶ !

ನವ ದೆಹಲಿ – ಪೊಲೀಸ್ ಠಾಣೆಯ ಲಾಕಪ್ ನಲ್ಲಿ ಕಾರಣ ಇಲ್ಲದೇ ವ್ಯಕ್ತಿಯೊಬ್ಬನನ್ನು 30 ನಿಮಿಷಗಳ ಕಾಲ ಕೂಡಿ ಹಾಕಿದ್ದಕ್ಕಾಗಿ ದೆಹಲಿಯ ಬದರಪುರ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗಳಿಗೆ ದೆಹಲಿ ಉಚ್ಚನ್ಯಾಯಾಲಯವು 50 ಸಾವಿರ ರೂಪಾಯಿಗಳ ದಂಡ ವಿಧಿಸಿದೆ. ಇವರಿಬ್ಬರ ಸಂಬಳದಿಂದ ಈ ಹಣವನ್ನು ವಸೂಲಿ ಮಾಡುವಂತೆಯೂ ನ್ಯಾಯಾಲಯ ಆದೇಶಿಸಿದೆ. ‘ಈ ಶಿಕ್ಷೆಯ ಹಿಂದಿನ ಉದ್ದೇಶ ‘ಪೊಲೀಸ್ ಅಧಿಕಾರಿಗಳಿಗೆ ಸಂದೇಶ ನೀಡುವುದಾಗಿದೆ. ‘ಪೊಲೀಸ್ ಅಧಿಕಾರಿಗಳು ಸ್ವತಃ ಕಾನೂನು ರೂಪಿಸಲು ಸಾಧ್ಯವಿಲ್ಲ’ ಎನ್ನುವ ಶಬ್ದಗಳಲ್ಲಿ ನ್ಯಾಯಾಲಯ ಅವರಿಗೆ ಛೀಮಾರಿ ಹಾಕಿತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ಘಟನೆ ನಡೆದಿತ್ತು.
ಇತರ ಅಧಿಕಾರಿಗಳು ಈ ರೀತಿ ವರ್ತಿಸಲು ಹಿಂಜರಿಯುವಂತೆ ಪೊಲೀಸರ ಬಗ್ಗೆ ಟೀಕೆಗಳು ಬೇಕು !
ನ್ಯಾಯಾಲಯವು ಮುಂದುವರಿದು, ಕಾನೂನಿಗೆ ಅನುಗುಣವಾಗಿ ಪ್ರಕ್ರಿಯೆಯನ್ನು ಪಾಲಿಸದೆ ವ್ಯಕ್ತಿಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಪೊಲೀಸ್ ಅಧಿಕಾರಿಗಳನ್ನು ಸುಮ್ಮನೆ ಬಿಡುವುದಿಲ್ಲ. ಕೇವಲ ಟೀಕೆಗಳಿಂದ ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಯ ಮೇಲೆ ಪರಿಣಾಮ ಬೀರುವುದಿಲ್ಲ. ಟೀಕೆಗಳು, ಇತರ ಅಧಿಕಾರಿಗಳು ಭವಿಷ್ಯದಲ್ಲಿ ಈ ರೀತಿ ಕೃತ್ಯಗಳನ್ನು ಮಾಡಲು ಹಿಂಜರಿಯುವಂತಿರಬೇಕು, ಎಂದು ಹೇಳಿತು.


ಮನಬಂದಂತೆ ವರ್ತಿಸುವ ಪೊಲೀಸ್ ಅಧಿಕಾರಿಗಳ ವರ್ತನೆ ಭಯಾನಕ !

ನ್ಯಾಯಾಲಯವು, ಅರ್ಜಿದಾರರ ಬಂಧನವೂ ಆಗದಿರುವುದರಿಂದ ನ್ಯಾಯಾಲಯ ಚಿಂತೆಗೀಡಾಗಿದೆ. ಎಂದು ಹೇಳಿದೆ. ಆತನನ್ನು ಕೇವಲ ಘಟನಾ ಸ್ಥಳದಿಂದ ಎತ್ತಿಕೊಂಡು ಠಾಣೆಗೆ ಕರೆತರಲಾಯಿತು ಮತ್ತು ಯಾವುದೇ ಕಾರಣ ನೀಡದೆ ಕಸ್ಟಡಿಯಲ್ಲಿ(ಲಾಕಪ್) ಇರಿಸಲಾಗಿದೆ. ನಾಗರಿಕರ ಸಾಂವಿಧಾನಿಕ ಮತ್ತು ಮೂಲಭೂತ ಹಕ್ಕುಗಳನ್ನು ಪೊಲೀಸ್ ಅಧಿಕಾರಿಗಳು ಮನಸೋಇಚ್ಛೆ ವರ್ತಿಸಿ ಉಲ್ಲಂಘಿಸಿರುವುದು ಭಯಾನಕವಾಗಿದೆ ಎಂದು ಹೇಳಿದೆ. ನಾಗರಿಕರ ಸಂದರ್ಭದಲ್ಲಿ ಪೊಲೀಸರ ವರ್ತನೆ ಕಾನೂನಿಗಿಂತ ಮೇಲಿರುವಂತೆ ತೋರುತ್ತಿರುವುದರಿಂದ, ನ್ಯಾಯಾಲಯ ಚಿಂತೆಗೀಡಾಗಿದೆ. ಇಂತಹ ಸಂದರ್ಭಗಳಲ್ಲಿ ಕೇವಲ ಪ್ರತಿಭಟನೆ ಸಾಕಾಗುವುದಿಲ್ಲ ಎಂದು ಹೇಳಿದೆ.
ಏನಿದು ಪ್ರಕರಣ ?
ಪೊಲೀಸ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತರಕಾರಿ ಮಾರಾಟಗಾರನು ಮಹಿಳೆಯನ್ನು ನೂಕಿದ್ದರಿಂದ ಆಗಿತ್ತು. ಈ ದೂರನ್ನು ಸಬ್ ಇನ್ಸಪೆಕ್ಟರ ಅವರಿಗೆ ರವಾನಿಸಲಾಗಿತ್ತು. ಅವರು ಘಟನಾ ಸ್ಥಳಕ್ಕೆ ಹೋಗಿ, ಒರ್ವ ಮಹಿಳೆ ಮತ್ತು ದೂರುದಾರರನ್ನು ಕಂಡುಹಿಡಿದರು. ಪೊಲೀಸರು ಆತನನ್ನು ಠಾಣೆಗೆ ಕರೆತಂದು ರಾತ್ರಿ 11.01ಕ್ಕೆ ಲಾಕಪ್ ನಲ್ಲಿ ಕೂಡಿಹಾಕಿದರು. ಮತ್ತು ರಾತ್ರಿ 11.24 ಕ್ಕೆ ಅವನನ್ನು ಬಿಡುಗಡೆ ಮಾಡಿದರು. ಯಾವುದೇ ಬಂಧನ ಅಥವಾ ಅಪರಾಧವನ್ನು ದಾಖಲಿಸದೆ ಅವನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅರ್ಜಿದಾರನು ಆರೋಪಿಸಿದ್ದನು.

ಸಂಪಾದಕೀಯ ನಿಲುವು

  • ದೆಹಲಿ ಉಚ್ಚನ್ಯಾಯಾಲಯಕ್ಕೆ ಅಭಿನಂದನೆಗಳು !
  • ನ್ಯಾಯಾಲಯವು ಇದೇ ರೀತಿಯ ಮತ್ತು ಇದಕ್ಕಿಂತ ಹೆಚ್ಚು ಕಠಿಣ ಶಿಕ್ಷೆಯನ್ನು ನೀಡಿದರೆ, ಉದ್ಧಟತನ ತೋರುವ ಪೊಲೀಸರಲ್ಲಿ ಸ್ವಲ್ಪವಾದರೂ ಬದಲಾವಣೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ !