ಉತ್ತರ ಪ್ರದೇಶದ ರಾಮಪುರ ಮತ್ತು ಶ್ರಾವಸ್ತಿಯಲ್ಲಿ 8 ಗೋಸಾಗಾಟಗಾರರ ಬಂಧನ !

ಚಕಮಕಿಯ ನಂತರ ಪೊಲೀಸರ ಕಾರ್ಯಾಚರಣೆ

ರಾಮಪುರ (ಉತ್ತರ ಪ್ರದೇಶ) – ರಾಮಪುರ ಮತ್ತು ಶ್ರಾವಸ್ತಿಯಲ್ಲಿ ಗೋಸಾಗಾಟಗಾರರನ್ನು ಸೆರೆಹಿಡಿಯುವ ವೇಳೆ ನಡೆದ ಘರ್ಷಣೆಯಲ್ಲಿ ಗೋಸಾಗಾಟಗಾರರು ಗಾಯಗೊಂಡರು. ಪೊಲೀಸರು ಅವರನ್ನು ಬಂಧಿಸಿದ್ದಾರೆ.

1. ರಾಮಪುರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸರು 4 ಗೋಸಾಗಾಟಗಾರರನ್ನು ಸುತ್ತುವರಿದಿದ್ದರು. ಇಲ್ಲಿನ ಗೋವಂಶವನ್ನು ಅಮಾನವೀಯವಾಗಿ ಕಟ್ಟಿ ಹಾಕಿದ್ದರು. ಪೊಲೀಸರು ಗೋಸಾಗಾಟಗಾರರನ್ನು ಬಂಧಿಸಲು ಮುಂದಾದಾಗ ಪೊಲೀಸರ ಮೇಲೆ ಗುಂಡು ಹಾರಿಸಿದರು. (ಪೊಲೀಸರ ಮೇಲೆ ಗುಂಡು ಹಾರಿಸುವಷ್ಟು ಉದ್ಧಟತನ ಹೊಂದಿರುವ ಗೋಸಾಗಾಟಗಾರರು ! – ಸಂಪಾದಕರು) ಆ ಸಮಯದಲ್ಲಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಫಹೀಮ್ ಮತ್ತು ಸಲೀಂ ಅವರ ಕಾಲಿಗೆ ಗುಂಡು ತಗಲಿತು; ಆದರೆ ಉಳಿದ ಇಬ್ಬರು ಪರಾರಿಯಾದರು. ಈ ಎನ್‌ಕೌಂಟರ್‌ನಲ್ಲಿ ಒಬ್ಬ ಪೊಲೀಸ್ ಸಹ ಗಾಯಗೊಂಡಿದ್ದಾರೆ. ಪೊಲೀಸರು ಇಲ್ಲಿಂದ ಒಂದು ಹಸು, 1 ವಾಹನ, 1 ಪಿಸ್ತೂಲ್, 7 ಕಾಟ್ರಿಡ್ಜ್ ಗಳನ್ನು ವಶಪಡಿಸಿಕೊಂಡಿದ್ದಾರೆ.

2. ಶ್ರಾವಸ್ತಿಯಲ್ಲಿ ನಡೆದ ಎನ್‌ಕೌಂಟರ್ ನಂತರ 6 ಗೋಸಾಗಾಟಗಾರರನ್ನು ಬಂಧಿಸಲಾಯಿತು. ಈ ಪೈಕಿ 5 ಗೋಸಾಗಾಟಗಾರರಿಗೆ ಗುಂಡು ತಗಲಿ ಗಾಯಗೊಂಡಿದ್ದರು. ಅವರಿಂದ 4 ಹಸುಗಳು, 5 ಪಿಸ್ತೂಲ್, ಚಾಕು ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ.