|
ಪುಣೆ – ಜಿಲ್ಲೆಯ ಮಂಚರನಲ್ಲಿ ಬಜರಂಗ ದಳದ ಕಾರ್ಯಕರ್ತ ಸೂರಜ ಚಕ್ರಧರ ಅವರ ಮನೆಯ ಮೇಲೆ ಸೆಪ್ಟೆಂಬರ್ 29 ರಂದು ಮುಸಲ್ಮಾನರ ಗುಂಪು ದಾಳಿ ನಡೆಸಿತ್ತು. ಅವರು ಮನೆಯಲ್ಲಿ ಸಿಗದ ಕಾರಣ ಮತಾಂಧರು ಮನೆಯಲ್ಲಿರುವ ಮಹಿಳೆಯರಿಗೆ ಅವಾಚ್ಯ ಪದಗಳಲ್ಲಿ ಕೊಲೆ ಬೆದರಿಕೆ ಹಾಕಿದರು. ಈ ಕುರಿತು ಅಕ್ಟೋಬರ್ 2 ರಂದು ಸೂರಜ ಚಕ್ರಧರ ಅವರ ತಾಯಿ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ‘ನಮ್ಮ ಸಂಪೂರ್ಣ ಕುಟುಂಬ ಅಪಾಯದಲ್ಲಿದ್ದು ಪೊಲೀಸರು ರಕ್ಷಣೆ ನೀಡಬೇಕು’, ಎಂದು ಸೂರಜ ಇವರ ತಾಯಿ ಆಗ್ರಹಿಸಿದ್ದಾರೆ. ಹಾಗೆಯೇ ಘಟನೆಯ ಸಿಸಿಟಿವಿ ಮತ್ತು ‘ವಿಡಿಯೋ’ ಪರಿಶೀಲಿಸಿ ಎಲ್ಲ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೂಡ ಅವರು ಒತ್ತಾಯಿಸಿದ್ದಾರೆ.
Maharashtra: Bajrang Dal worker’s home attacked by an Islamist mob in Pune during Ganesh Visarjan, women abused https://t.co/uzfpy4zY5a
— OpIndia.com (@OpIndia_com) October 3, 2023
ಸೂರಜ ಚಕ್ರಧರ ಅವರ ತಾಯಿ,
1. ನಮ್ಮ ಮನೆಯ ಹತ್ತಿರ ಶ್ರೀ ಗಣೇಶ ಮೂರ್ತಿಯ ವಿಸರ್ಜನೆಯ ಮೆರವಣಿಗೆ ನಡೆದಿತ್ತು. ಆ ವೇಳೆ ಕೆಲವು ಮತಾಂಧರು ಮೆರವಣಿಗೆಯಲ್ಲಿ ವಾಹನವನ್ನು ನುಗ್ಗಿಸಿ ಜನರ ಮೇಲೆ ಹಾಯಿಸಲು ಪ್ರಯತ್ನಿಸಿದರು. (ಇದು ಮತಾಂಧರು ಹಿಂದೂಗಳ ವಿರುದ್ಧ ಘೋಷಿಸಿರುವ ಜಿಹಾದ ಆಗಿದೆ ! – ಸಂಪಾದಕರು) ಆದರೆ, ಮೆರವಣಿಗೆಯಲ್ಲಿದ್ದ ಜನರು ಯಾವುದೇ ವಿವಾದವನ್ನು ಮಾಡದೇ ಮುಸಲ್ಮಾನರ ವಾಹನಕ್ಕೆ ದಾರಿ ಮಾಡಿಕೊಟ್ಟರು. ಸೂರಜನು ಈ ಘಟನೆಯ ಚಿತ್ರೀಕರಣವನ್ನು ಮಾಡಿದ್ದನು.
2. ಆದರೂ ಕೆಲವು ಸಮಯದ ನಂತರ ಮತಾಂಧರು ಕೆಲವು ಗಣೇಶೋತ್ಸವ ಮಂಡಳಿಗಳ ವಿರುದ್ಧ ಸುಳ್ಳು ದೂರುಗಳನ್ನು ದಾಖಲಿಸಿದರು. ಈ ದೂರಿನ ಆಧಾರದ ಮೇಲೆ, ಪೊಲೀಸರು ವಿಸರ್ಜನೆಯ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸೂರಜನನ್ನು ಮತ್ತು ಇನ್ನೂ ಕೆಲವು ಜನರನ್ನು ಬಂಧಿಸಿದರು; ಆದರೆ ಸ್ವಲ್ಪ ಸಮಯದ ನಂತರ ಸೂರಜನ್ನು ಬಿಡುಗಡೆ ಮಾಡಿದರು. (ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ ಗಾದೆಮಾತಿನಂತಾಯಿತು. ಹಿಂದೂಗಳ ವಿರುದ್ಧ ಏಕಪಕ್ಷೀಯವಾಗಿ ವರ್ತಿಸುವ ಹಿಂದೂ ದ್ವೇಷಿ ಪೋಲೀಸರು ಹಿಂದೂಗಳಿಗೆ ಅಪಾಯಕಾರಿ ! – ಸಂಪಾದಕರು)
ಲವ್ ಜಿಹಾದ್ ಮತ್ತು ಗೋಹತ್ಯೆಯಂತಹ ವಿಷಯಗಳಿಂದ ಕಟ್ಟರವಾದಿಗಳ ಕೆಂಗಣ್ಣಿಗೆ ಗುರಿ ! – ಸೂರಜ ಚಕ್ರಧರ1. ನಮ್ಮ ಮನೆ ಮುಸ್ಲಿಂ ಬಹುಸಂಖ್ಯಾತ ಪ್ರದೇಶದಲ್ಲಿದೆ. ಲವ್ ಜಿಹಾದ್ ಮತ್ತು ಗೋಹತ್ಯೆಯಂತಹ ವಿಷಯಗಳ ಬಗ್ಗೆ ಧ್ವನಿ ಎತ್ತಿದ್ದಕ್ಕಾಗಿ ನಾನು ಬಹಳ ಹಿಂದಿನಿಂದಲೂ ಕಟ್ಟರವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದೇನೆ. ಈ ಸಂಪೂರ್ಣ ಘಟನೆಯು ಯೋಜಿತ ಪಿತೂರಿಯಾಗಿತ್ತು. ಘಟನೆ ನಡೆದ ದಿನ ‘ಈದ್ ಮಿಲಾದ್’ ಮೆರವಣಿಗೆ ಮುಗಿದಿತ್ತು ಮತ್ತು ಅಲ್ಲಿಂದ ಗುಂಪು ನಮ್ಮ ಮನೆಯತ್ತ ತೆರಳಿತ್ತು. 2. ದಾಳಿಯ ಸಂದರ್ಭದಲ್ಲಿ ನಾನು ಹೊರಗೆ ಇದ್ದೆ. ಆ ಸಮಯದಲ್ಲಿ ನಾನು ಮನೆಯಲ್ಲಿದ್ದಿದ್ದರೆ, ಮುಸ್ಲಿಮರ ಗುಂಪು ಖಂಡಿತವಾಗಿಯೂ ಏನಾದರೂ ಅನುಚಿತ ಕೃತ್ಯವನ್ನು ಮಾಡುತ್ತಿತ್ತು. ಕಾರಣ, ದಾಳಿಕೋರರು ‘ಕೊಲ್ಲಿರಿ’ ಎಂದು ಘೋಷಣೆ ಕೂಗುತ್ತಿದ್ದರು. ಹಾಗೆಯೇ ಮನೆಗೆ ಬಂದ ಗುಂಪಿನಲ್ಲಿ ಹೊರಗಿನವರೂ ಸೇರಿದ್ದರು. |
ಪೊಲೀಸರಿಂದ ದೂರು ದಾಖಲಿಸಿಕೊಳ್ಳಲು ಹಿಂದೆ ಮುಂದೆ !
ಈ ಘಟನೆಯಿಂದ ಇಲ್ಲಿಯವರೆಗೆ ಪೊಲೀಸರು ನಮ್ಮ ದೂರಿನ ಬಗ್ಗೆ ಇದುವರೆಗೂ ಎಫ್.ಐ.ಆರ್. (ಪ್ರಾಥಮಿಕ ವರದಿ) ದಾಖಲಿಸಿಲ್ಲ. ಆದರೂ ನಾನು ಮತ್ತು ನನ್ನ ತಾಯಿ ಇದಕ್ಕಾಗಿ ಪೊಲೀಸ್ ಠಾಣೆಗೆ ಹಲವಾರು ಬಾರಿ ಹೋಗಿಬಂದು ಮಾಡಿದ್ದರೂ ಸಹ ಪೊಲೀಸರು ಪ್ರಾಥಮಿಕ ವರದಿಯನ್ನು ದಾಖಲಿಸಿಲ್ಲ. ಈ ಬಗ್ಗೆ ಪೊಲೀಸರಿಂದ ‘ನಾವು ನಿಮ್ಮ ಮನಸ್ಸಿನಂತೆ ಕೆಲಸ ಮಾಡುತ್ತೇವೆ’ ಎಂಬ ಉತ್ತರ ಬರುತ್ತಿದೆ. (ಅಂತಹ ಪೊಲೀಸರ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಮಾಡಿರಿ ! – ಸಂಪಾದಕರು)
ಆರೋಪಿಗಳ ಹೆಸರು !
ಸೂರಜ್‌ನ ತಾಯಿ ಕೂಡ ಈ ಗುಂಪಿನಲ್ಲಿದ್ದ ಕೆಲವು ಜನರನ್ನು ಗುರುತಿಸಿರುವುದಾಗಿ ಹೇಳಿಕೊಂಡಿದ್ದಾರೆ. ದೂರಿನ ಪ್ರತಿಯಲ್ಲಿ ಈ ಮುಂದಿನ ಹೆಸರುಗಳು ಇವೆ. ರಿಯಾಜ್ ಜಮಾದಾರ್, ಇಸರಾರ್ ಶಹಬಾಜ ಖಾನ್ ಪಠಾಣ, ಅಜಮ ಮೊಮಿನ, ಖಯ್ಯುಮ ಪಠಾಣ, ಮಿರಾನ ಇನಾಮದಾರ, ಅಕಿಬ ಅತ್ತಾರ, ಅಮನ ಅತ್ತಾರ, ಮೊಹಮ್ಮದ ಜಮಾದಾರ, ತರ್ಬೇಜ ಖುರೇಷಿ, ಡ್ಯಾನಿಶ ಸಿರಾಜ ಮೊಮಿನ, ತೌಕೀರ ಜಮಾದಾರ, ಅದನಾನ ಮೊಹಮ್ಮದ, ಜಾವೇದ ಶೇಖ, ಮಹಮ್ಮದ ಸಾಬೀರ ಸಯ್ಯದ, ಇರಫಾನ ತಾಹಜಾನ ಮಂಡಲ, ಅಝಹರ ಮೊಮಿನ, ಅತಿಕ ಇನಾಮದಾರ, ಉಝೆಫ್ ಇನಾಮದಾರ, ಆಸಿಫ ಖಾನ ಮುಂತಾದವರು ಸೇರಿದ್ದಾರೆ. ಇತರ ದಾಳಿಕೋರರು ಅಪರಿಚಿತರಾಗಿದ್ದಾರೆ.
ಸಂಪಾದಕೀಯ ನಿಲುವುಮತಾಂಧರಿಗೆ ಕಾನೂನಿನ ಭಯ ಉಳಿದಿಲ್ಲದಿದ್ದರಿಂದ ಹಿಂದುತ್ವನಿಷ್ಠರ ಮನೆ ಮೇಲೆ ದಾಳಿ ಮಾಡುವಷ್ಟು ಉದ್ಧಟರಾಗಿದ್ದಾರೆ. ಈ ಮತಾಂಧರ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳದ ಸರಕಾರಕ್ಕೆ ನಾಚಿಕೆಗೇಡು ! ಮತಾಂಧರ ವಿರುದ್ಧ ದೂರನ್ನು ದಾಖಲಿಸಿಕೊಳ್ಳದ ಪೊಲೀಸರು ಭಾರತದವರೋ ಅಥವಾ ಪಾಕಿಸ್ತಾನದವರೋ ? |