ಜಾರಿ ನಿರ್ದೇಶನಾಲಯಕ್ಕೆ ಛೀಮಾರಿ ಹಾಕಿದ ಸರ್ವೋಚ್ಚ ನ್ಯಾಯಾಲಯ !
ನವ ದೆಹಲಿ – ಜಾರಿ ನಿರ್ದೇಶನಾಲಯ (‘ಇಡಿ’ಯು) ಪಾರದರ್ಶಕತೆ, ನ್ಯಾಯೋಚಿತ ಮತ್ತು ಸತ್ಯತೆಯ ಮೂಲಭೂತ ಮಾನದಂಡಗಳನ್ನು ಪಾಲಿಸಬೇಕು. `ಇಡಿ’ ಯ ಕಾರ್ಯಾಚರಣೆ ಸೇಡಿನ ನಿಲುವಿನಿಂದ ಕೂಡಿರಬಾರದು. ಹಾಗೆಯೇ ಬಂಧನದ ಕಾರಣವನ್ನು ತೋರಿಸಲು ಕೇವಲ ಬಂಧನದ ಆದೇಶ ನೀಡುವುದು ಸಾಕಾಗುವುದಿಲ್ಲ. ಜಾರಿ ನಿರ್ದೇಶನಾಲಯವು ದೇಶದ ಆರ್ಥಿಕ ಅಪರಾಧಗಳನ್ನು ತಡೆಯುವ ಒಂದು ಪ್ರಮುಖ ತನಿಖಾ ಇಲಾಖೆಯಾಗಿರುವುದರಿಂದ, ಅದರ ಪ್ರತಿಯೊಂದು ಕೃತಿಯೂ ಪಾರದರ್ಶಕ, ಕಾನೂನುಬದ್ಧ ಮತ್ತು ನ್ಯಾಯಬದ್ಧ ಮಾನದಂಡಗಳಿಗೆ ಅನುಗುಣವಾಗಿರುವುದು ಅಪೇಕ್ಷಿತವಾಗಿರುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಜಾರಿ ನಿರ್ದೇಶನಾಲಯವನ್ನು ತರಾಟೆಗೆ ತೆಗೆದುಕೊಂಡಿದೆ. ಒಂದು ಪ್ರಕರಣದ ವಿಚಾರಣೆಯ ಸಮಯದಲ್ಲಿ, ನ್ಯಾಯಾಲಯವು ಛೀಮಾರಿ ಹಾಕಿತು.
ಇಡಿಗೆ ಛೀಮಾರಿ ಹಾಕಿದ ಸುಪ್ರೀಂಕೋರ್ಟ್https://t.co/dupsu4AFmP#SupremeCourt #EnforcementDirectorate
— EeSanjeNews l ಈ ಸಂಜೆ (@eesanjenews) October 4, 2023
ಆರೋಪಿಯು ಆರೋಪಗಳಿಗೆ ಪ್ರತಿಕ್ರಿಯಿಸಿಲ್ಲ ಎಂದರೆ ಆರೋಪಿಯನ್ನು ಬಂಧಿಸುವ ಹಕ್ಕು ಸಿಗುವುದಿಲ್ಲ !
ನ್ಯಾಯಾಲಯವು, `ಇಡಿ’ ನೀಡಿದ ಸಮನ್ಸ್‌ನಲ್ಲಿ ಆರೋಪಿಗಳ ಮೇಲೆ ಹೊರಿಸಲಾಗಿರುವ ಆರೋಪಗಳಿಗೆ ಪ್ರತಿಸ್ಪಂದಿಸಲು ಆರೋಪಿ ವಿಫಲವಾದರು, ಅಂದರೆ ಸೆಕ್ಷನ್ 19 ರ ಅಡಿಯಲ್ಲಿ ಅವರನ್ನು ಬಂಧಿಸುವ ಅಧಿಕಾರ `ಇಡಿ’ಗೆ ಸಿಗುವುದಿಲ್ಲ; ಏಕೆಂದರೆ ಸೆಕ್ಷನ್ 19 ರ ಅಡಿಯಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲು `ಇಡಿ’ ಅಧಿಕಾರಿಗಳಿಗೆ ವ್ಯಕ್ತಿಗೆ ಸಂಬಂಧಿಸಿದ ವಿಷಯಗಳಿಂದ ಆರ್ಥಿಕ ದುರುಪಯೋಗ ತಡೆ ಕಾಯ್ದೆಯ ಅಡಿಯಲ್ಲಿ ಸಂಬಂಧಪಟ್ಟ ವ್ಯಕ್ತಿ ತಪ್ಪಿತಸ್ಥನೆಂದು ಅವರಿಗೆ ಅನಿಸುತ್ತಿದ್ದರೆ ಬಂಧಿಸಬಹುದು ಎಂದು ಹೇಳಿದೆ.
ಸಮನ್ಸ್ ಸಲ್ಲಿಸಿದ ನಂತರ, ಆರೋಪಿ ನೇರವಾಗಿ ಅಪರಾಧವನ್ನು ಒಪ್ಪಿಕೊಳ್ಳಬೇಕು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ !
ಈ ಪ್ರಕರಣದಲ್ಲಿ ಆರೋಪಿಗಳಿಂದ ನೀಡಿರುವ ಉತ್ತರಗಳು ದಾರಿತಪ್ಪಿಸುವಂತಿವೆ ಎಂದು ಇಡಿ ನ್ಯಾಯಾಲಯದಲ್ಲಿ ಹೇಳಿತ್ತು. ಅದಕ್ಕೆ ನ್ಯಾಯಾಲಯವು, ಏನೇ ಆದರೂ ಇಡಿಯ ಅಧಿಕಾರಿಗಳು ಸಮನ್ಸ ಪಡೆದಿರುವ ಆರೋಪಿ ಅಪರಾಧದ ಸ್ವೀಕೃತಿಯನ್ನು ನೀಡುವರು ಇಂತಹ ಅಪೇಕ್ಷೆಯನ್ನು ನಿರೀಕ್ಷಿಸುವಂತಿಲ್ಲ ಮತ್ತು ಅದನ್ನು ಹೊರತುಪಡಿಸಿ ಅವರ ಯಾವುದೇ ಉತ್ತರವು ತಪ್ಪುದಾರಿಗೆಳೆಯುತ್ತದೆ ಎಂದು ತಿಳಿದುಕೊಳ್ಳಬಾರದು ಎಂದು ಹೇಳಿದೆ.
ಏನಿದು ಪ್ರಕರಣ ?
ಜಾರಿ ನಿರ್ದೇಶನಾಲಯ (‘ಇಡಿ’) ಕೆಲ ದಿನಗಳ ಹಿಂದೆ ಹಣಕಾಸು ದುರ್ಬಳಕೆ ಪ್ರಕರಣದಲ್ಲಿ ‘ಎಮ್.3.ಎಮ್’. ಗ್ರೂಪ್’ನ ನಿರ್ದೇಶಕರಾದ ಪಂಕಜ್ ಬನ್ಸಾಲ್ ಮತ್ತು ಬಸಂತ್ ಬನ್ಸಾಲ್ ಅವರನ್ನು ಬಂಧಿಸಿತ್ತು. ಆ ವೇಳೆ ಅಧಿಕಾರಿಗಳು ಅವರ ಬಂಧನದ ಕಾರಣವನ್ನು ಅವರಿಗೆ ಓದಿ ಹೇಳಿದ್ದರು. ಈ ಸಂದರ್ಭದಲ್ಲಿ ನ್ಯಾಯಾಲಯವು `ಇಡಿ’ಗೆ ಛೀಮಾರಿ ಹಾಕುತ್ತಾ, ‘ಬಂಧನದ ವೇಳೆ ಆರೋಪಿಗಳಿಗೆ ಬಂಧನದ ಕಾರಣಗಳನ್ನು ಲಿಖಿತ ಸ್ವರೂಪದಲ್ಲಿ ನೀಡುವುದು ಆವಶ್ಯಕವಾಗಿರುತ್ತದೆ’ ಎಂದು ಹೇಳಿದೆ. ಹಾಗೂ ನಿರ್ದೇಶಕರ ಬಂಧನ ಕಾನೂನು ಬಾಹಿರ ಎಂದು ಘೋಷಿಸಿ ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿದೆ.