ಉತ್ತರಪ್ರದೇಶದಲ್ಲಿನ ಮದರಸಾಗಳಲ್ಲಿ ವಿದ್ಯಾರ್ಥಿಗಳಿಗೆ AI ನ ಶಿಕ್ಷಣ !

(AI ಅಂದರೆ ಮನುಷ್ಯರಂತೆ ಯೋಚನೆ ಮಾಡುವ ಯಂತ್ರಗಳು ನಿರ್ಮಾಣ ಮಾಡುವ ವಿಜ್ಞಾನ. ಈ ತಂತ್ರಜ್ಞಾನದಿಂದ ಮಾನವನ ಕಾರ್ಯಕ್ಷಮತೆ ಹೆಚ್ಚುತ್ತದೆ.)

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶದಲ್ಲಿನ ೧೬ ಸಾವಿರದ ೫೧೩ ಮದರಸಾಗಳಲ್ಲಿ ಕಲಿಯುತ್ತಿರುವ ೧೩ ಲಕ್ಷ ೯೨ ಸಾವಿರ ವಿದ್ಯಾರ್ಥಿಗಳಿಗೆ AI ನ(ಆರ್ಟಿಫಿಶಿಯಲ್ ಇಂಟಿಲಿಜನ್ಸ್) ವಿಷಯದ ಶಿಕ್ಷಣ ನೀಡಲಾಗುವುದು. ಅಲ್ಪಸಂಖ್ಯಾತ ಕಲ್ಯಾಣ ಸಚಿವಾಲಯದಿಂದ ಮದರಸಾಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಮಹಾವಿದ್ಯಾಲಯಗಳಲ್ಲಿ ಪ್ರವೇಶ ದೊರೆಯುವ ದೃಷ್ಟಿಯಿಂದ ಹೊಸ ತಂತ್ರಜ್ಞಾನ ಕಲಿಸಲು ನೇತೃತ್ವ ತೆಗೆದುಕೊಳ್ಳಲಾಗಿದೆ. ಮದರಸಾಗಳಲ್ಲಿ ಕಲಿಸುವ ಶಿಕ್ಷಕರಿಗೆ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ ನ ಪ್ರಶಿಕ್ಷಣ ನೀಡಲಾಗುವುದು. ಎಂದು ಅಲ್ಪಸಂಖ್ಯಾತ ಕಲ್ಯಾಣ ವಕ್ಫ್ ಮತ್ತು ಹಜ ಸಚಿವ ಧರಮಪಾಲ ಸಿಂಹ ಇವರು ಹೇಳಿದರು.

ಸಂಪಾದಕೀಯ ನಿಲುವು

ಮದರಸಾಗಳಲ್ಲಿ ರಾಷ್ಟ್ರ ಘಾತಕ ಶಿಕ್ಷಣ ನೀಡಿ ಮಕ್ಕಳ ಬ್ರೈನ್ ವಾಷ್ ಮಾಡಲಾಗುತ್ತಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ . ಹೀಗಿರುವಾಗ ಅವರಿಗೆ AI ನ ಶಿಕ್ಷಣ ನೀಡಿದರೆ ಅದರ ಉಪಯೋಗ ರಾಷ್ಟ್ರಘಾತಕ ಮತ್ತು ದೇಶಘಾತಕ ಚಟುವಟಿಕೆಗಾಗಿ ಆಗುವುದು ಅದರಲ್ಲಿ ಆಶ್ಚರ್ಯ ಏನು ಇಲ್ಲ ?