ಪ್ರಪಂಚದಲ್ಲಿ ಕೇವಲ ಒಂದೇ ಧರ್ಮವಿದೆ ಅದೆಂದರೆ ಸನಾತನ ಧರ್ಮ ! – ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಗೋರಖನಾಥ (ಉತ್ತರಪ್ರದೇಶ) – ಈ ಪ್ರಪಂಚದಲ್ಲಿ ಒಂದೇ ಒಂದು ಧರ್ಮವಿದೆ ಅದೆಂದರೆ ‘ಸನಾತನ ಧರ್ಮ.‘ ಎಲ್ಲಾ ಇತರ ಪಂಥಗಳು ಮತ್ತು ಉಪಾಸನಾ ಪದ್ಧತಿಗಳು ಇದೆ. ಸನಾತನ ಧರ್ಮವು ಮಾನವೀಯತೆಯ ಧರ್ಮವಾಗಿದೆ. ಸನಾತನ ಧರ್ಮಕ್ಕೆ ಧಕ್ಕೆ ಬಂದರೆ, ಸಂಪೂರ್ಣ ಜಗತ್ತಿನಲ್ಲಿ ಮನುಕುಲಕ್ಕೆ ಸಂಕಷ್ಟ ಬರುವುದು, ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿ ಯೋಗಿತ್ಯನಾಥ ಹೇಳಿದ್ದಾರೆ. ಅವರು ಗೋರಖನಾಥ ದೇವಸ್ಥಾನದಲ್ಲಿ ಅವರ ಪಿತಾಮಹ ಗುರು ಬ್ರಹ್ಮಲೀನ ಮಹಂತ ದಿಗ್ವಿಜಯನಾಥ ಅವರ ೫೪ ನೇ ಪುಣ್ಯತಿಥಿ ಹಾಗೂ ಅವರದೇ ಗುರು ಬ್ರಹ್ಮಲೀನ ಮಹಂತ ಅವೈಧ್ಯನಾಥ ಅವರ ೯ನೇಯ ಪುಣ್ಯ ತಿಥಿಯ ನಿಮಿತ್ತ ಆಯೋಜಿಸಿದ ೭ ದಿನಗಳ ಶ್ರೀಮದ್ ಭಾಗವತ ಕಥಾ ಜ್ಞಾನಯಜ್ಞದ ಸಮಾರೋಪದಲ್ಲಿ ಅವರು ಮಾತನಾಡಿದರು.

(ಸೌಜನ್ಯ – IndiaTV)

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಮಾತು ಮುಂದುವರೆಸಿತ್ತಾ, ಶ್ರೀಮದ್ ಭಾಗವತೆಯ ಸಾರವನ್ನು ಅರ್ಥಮಾಡಿಕೊಳ್ಳಲು ಚಿಂತನೆ ಸಂಕುಚಿತವಾಗಿರಬಾರದು. ಸಂಕುಚಿತ ಮನಸ್ಸಿನ ಜನರು ವಿಶಾಲತೆಯನ್ನು ನೋಡಲು ಸಾಧ್ಯವಿಲ್ಲ. ಈ ೭ ದಿನಗಳಲ್ಲಿ ನೀವು ಜ್ಞಾನಯಜ್ಞವನ್ನು ಭಕ್ತಿಯಿಂದ ಕೇಳಿದರೆ, ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಕೆಲವು ಉತ್ತಮ ಬದಲಾವಣೆಗಳನ್ನು ನೋಡುವಿರಿ. ಶ್ರೀಮದ್ ಭಾಗವತ ಮಹಾಪುರಾಣವು ಮುಕ್ತಿಯ ಬಗ್ಗೆ ಏನು ಹೇಳಿದೆ ಅದು ಸನಾತನ ಧರ್ಮದಲ್ಲಿ ಮಾತ್ರ ಸಿಗುವುದು. ಬೇರೆಲ್ಲಿಯೂ ಹೀಗೆ ಸಿಗುವುದಿಲ್ಲ. ಸ್ವತಃ ವೇದವ್ಯಾಸರು ಇದನ್ನು ಖಚಿತಪಡಿಸಿದ್ದಾರೆ. ಇಲ್ಲಿರುವುದು ಎಲ್ಲೆಲ್ಲಿಯೂ ಇದೆ ಮತ್ತು ಇಲ್ಲಿ ಇಲ್ಲದ್ದು ಜಗತ್ತಿನಲ್ಲಿ ಎಲ್ಲಿಯೂ ಸಿಗುವುದಿಲ್ಲ ಎಂದು ಹೇಳಿದರು.