ಹಿಂದುತ್ವನಿಷ್ಠ ಸಂಘಟನೆಗಳ ವಿರೋಧದ ಪರಿಣಾಮ !
ಚೆನ್ನೈ (ತಮಿಳುನಾಡು), ಅಕ್ಟೋಬರ್ 3 (ವಾರ್ತೆ) – ಇಲ್ಲಿ ಆರ್.ಕೆ. ನಗರದ ಸರಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮಸೀದಿಯ ವಿರುದ್ಧ ಹಿಂದುತ್ವನಿಷ್ಠ ಸಂಘಟನೆಗಳು ದೂರು ನೀಡಿದ ಹಿನ್ನೆಲೆಯಲ್ಲಿ ಮಸೀದಿಯ ‘ಮಸ್ಜಿದ ಮಹಮ್ಮದ್ ಗೌಸ್ ಅಸುಸಾ’ ಎಂಬ ಹೆಸರಿನ ನಾಮಫಲಕವನ್ನು ತೆಗೆಯಲಾಯಿತು. ಕೊರುಕ್ಕುಪೆಟ್ಟಾಯಿ ಪ್ರದೇಶದ ಸುನಂಬು ಕಲವೈ ಕಿಲಿಂಜಲ್ ಸ್ಟ್ರೀಟ್‌ನಲ್ಲಿ ಈ ಮಸೀದಿ ಅನಧಿಕೃತವಾಗಿ ನಿರ್ಮಿಸಲಾಗಿದೆ. ಇದು ಹಿಂದೂ ಬಹುಸಂಖ್ಯಾತ ಪ್ರದೇಶವಾಗಿದೆ. ಈ ಮಸೀದಿಯಿಂದ 50 ಮೀಟರ್ ದೂರದಲ್ಲಿ ಮುನೀಶ್ವರನ ದೇವಸ್ಥಾನ ಹಾಗೂ 80 ಮೀಟರ ಅಂತರದಲ್ಲಿ ಅಝಾಗು ಮುತ್ತುಮಾರಿಯಮ್ಮ ದೇವಸ್ಥಾನ ಮತ್ತು ಎಲೈ ಮುತ್ತುಮಾರಿಯಮ್ಮ ದೇವಸ್ಥಾನವಿದೆ. ಈ ದೇವಸ್ಥಾನಗಳ ಉತ್ಸವಗಳ ಸಮಯದಲ್ಲಿ ಹೊರಡುವ ಮೆರವಣಿಗೆಗಳು ಈ ಮಾರ್ಗದಲ್ಲಿ ಹಾದು ಹೋಗುತ್ತವೆ. ಹೀಗಾಗಿ ‘ಈ ರಸ್ತೆಯ ಬದಿಯಲ್ಲಿ ಅನಧಿಕೃತವಾಗಿ ಮಸೀದಿಯನ್ನು ನಿರ್ಮಿಸಿ ಧಾರ್ಮಿಕ ಉದ್ವಿಗ್ನತೆಯನ್ನು ಸೃಷ್ಟಿಸುವ ಪ್ರಯತ್ನವಾಗಿದೆ’ ಎಂದು ಹಿಂದೂಗಳು ಆರೋಪಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ತಮಿಳುನಾಡು ಶಿವಸೇನೆ ಪಕ್ಷದ ಶ್ರೀ. ವಿ. ಪ್ರಭಾಕರ, ಭಾರತದ ಹಿಂದೂ ಮುನ್ನಾನಿಯ ಶ್ರೀ. ಆರ್.ಡಿ. ಪ್ರಭು, ಎಲ್ಲ ದೇವಸ್ಥಾನಗಳ ಸಂರಕ್ಷಣಾ ಸಮಿತಿಯ ಶ್ರೀ. ಸಿ. ಗೋಪಿ, ಅಕಿಲಾ ಹಿಂದೂ ಮಕ್ಕಲ ಅಮಯಿಪ್ಪೂಚೆ ಶ್ರೀ. ವಿ.ಎಂ. ಶಿವಕುಮಾರ್, ಭಾರತ ಮುನ್ನಾನಿಯ ಶ್ರೀ. ಶಿವಾಜಿ, ಅಕಿಲಾ ಭಾರತ ಹಿಂದೂ ಮಕ್ಕಲ ಸೇನೆಯ ಶ್ರೀ. ಎಂ. ಸೆಂಥಿಲ್, ಹಿಂದೂ ಮಂದಿರ ಸಂಘಟನೆಯ ಅಧ್ಯಕ್ಷ ಶ್ರೀ. ಆರ್.ಕೆ. ಸತೀಶ, ದಕ್ಷಿಣ ಭಾರತದ ಶಿವಸೇನೆಯ ಅರ್. ಕಂದಾಸಾಮಿ, ತಮಿಳುನಾಡು ಹಿಂದೂ ಮಕ್ಕಲ ಸೇನೆ ಶ್ರೀ. ಸರವಣನ್, ಸನಾತನ ಭಾರತ ಸೇನೆಯ ಶ್ರೀ. ಮಣಿ, ತಮಿಳುನಾಡು ದಲಿತ ಮಕ್ಕಲ ಥಯಾಗಮಂ ಶ್ರೀ. ಎಂ. ರಾಗಾವಬಾಬು ಹಾಗೂ ಇತರೆ ಹಿಂದೂಪರ ಸಂಘಟನೆಗಳು ಸೆಪ್ಟೆಂಬರ 29 ರಂದು ಈ ಮಸೀದಿ ಎದುರು ಪ್ರತಿಭಟನೆ ನಡೆಸಿದ್ದವು. ಅದಕ್ಕೂ ಮುನ್ನ ಪೊಲೀಸರಿಗೆ ದೂರು ನೀಡಲಾಗಿತ್ತು.
ಸಂಪಾದಕೀಯ ನಿಲುವುಹಿಂದೂ ಸಂಘಟನೆಗಳು ಕೇವಲ ನಾಮಫಲಕವನ್ನು ತೆಗೆಸಿ ಅಷ್ಟಕ್ಕೆ ನಿಲ್ಲದೆ, ಈ ಅಕ್ರಮ ಮಸೀದಿ ವಿರುದ್ಧ ಸೂಕ್ತಕ್ರಮ ಕೈಕೊಳ್ಳಲು ಪ್ರಯತ್ನಿಸಬೇಕು ! |