‘ಎನ್.ಐ.ಎ.’ಯಿಂದ ಕಮ್ಯೂನಿಸ್ಟ ನಕ್ಸಲವಾದಿಗಳ ವಿರುದ್ಧ ‘ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿನ ೬೦ ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ !

ನವ ದೆಹಲಿ – ಕಮ್ಯೂನಿಸ್ಟ್ ನಕ್ಸಲವಾದಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ)ಯು ಮಿಂಚಿನ ಕಾರ್ಯಾಚರಣೆ ನಡೆಸಿದೆ. ಎನ್.ಐ.ಎ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ೬೦ ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಪತ್ತೆ ಮಾಡಿದೆ. ಗುಪ್ತಚರ ಸಂಸ್ಥೆಗಳಿಂದ ಸಿಕ್ಕಿದ ಮಾಹಿತಿಯ ಆಧಾರದ ಮೇಲೆ ‘ಎನ್.ಐ.ಎ.’ಯು ರಾಜ್ಯದ ಪೋಲೀಸರೊಂದಿಗೆ ಅಕ್ಟೋಬರ್ ೨ ರಂದು ಬೆಳಗ್ಗೆಯಿಂದ ದಾಳಿ ನಡೆಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ನಕ್ಸಲವಾದಿಗಳ ಜೊತೆ ಸಂಬಂಧ ಹೊಂದಿರುವ ನಾಯಕರ ಮನೆಗಳ ಮೇಲೆ ಈ ದಾಳಿ ನಡೆದಿದೆ. ಇವುಗಳಲ್ಲಿ ತೆಲಂಗಾಣ ರಾಜ್ಯದ ಭಾಗ್ಯನಗರ ಹಾಗೇ ಆಂಧ್ರಪ್ರದೇಶದ ಗುಂಟೂರು, ನೆಲ್ಲೂರು ಮತ್ತು ತಿರುಪತಿ ಜಿಲ್ಲೆಗಳು ಸೇರಿವೆ. ಇದಕ್ಕೂ ಮೊದಲು ಸೆಪ್ಟಂಬರ್ ೯ ರಂದು ‘ಎನ್.ಐ ಎ.’ಯು ಮತ್ತೊಂದು ಪ್ರಕರಣದಲ್ಲಿ ತೆಲಂಗಾಣ ಮತ್ತು ಛತ್ತೀಸ್ ಗಢ ರಾಜ್ಯಗಳ ಹಲವು ಸ್ಥಳಗಳಲ್ಲಿ ದಾಳಿ ನಡೆಸಿತ್ತು.