ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಇವರಿಂದ ರಾಮ ಮಂದಿರ ಆಂದೋಲನದಲ್ಲಿ ಸಾವನ್ನಪ್ಪಿದ ಕಾರಸೇವಕರಿಗಾಗಿ ಶ್ರಾದ್ಧ !

ವಾರಣಾಸಿ (ಉತ್ತರಪ್ರದೇಶ) – ಕಾಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ಶಂಕರ ವಿಜಯೇಂದ್ರ ಸರಸ್ವತಿ ಇವರು ಈಗ ಇಲ್ಲಿ ಚಾತುರ್ಮಾಸ ವ್ರತ ಮಹೋತ್ಸವಕ್ಕಾಗಿ ಬಂದಿದ್ದಾರೆ. ನಂತರ ಅವರು ಅಯೋಧ್ಯೆಗೆ ಪ್ರಯಾಣ ಬೆಳೆಸುವರು. ಅಲ್ಲಿ ಅವರು ರಾಮಮಂದಿರ ಆಂದೋಲನದ ಸಮಯದಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿರುವ ಕಾರ ಸೇವಕರಿಗಾಗಿ ಶಾಂತಿ ಅನುಷ್ಠಾನ ಮತ್ತು ಶ್ರಾದ್ಧ ಮಾಡುವರು. ಅವರು ಅಕ್ಟೋಬರ್ ೧೦ ರಂದು ಅಯೋಧ್ಯೆಗೆ ಹೋಗುವರು ಅಲ್ಲಿ ೨೦ ದಿನ ವಾಸ ಮಾಡುವವರು. ‘ಕಾರಸೇವಕರ ಆತ್ಮಕ್ಕೆ ಶಾಂತಿ ದೊರೆಯಬೇಕೆಂದು’ ಅವರು ಚತುರ್ದಶಿಯ ತಿಥಿಗೆ ವಿಧಿ ಮಾಡುವರು.

ಒಂದು ವಾರ್ತ ವಾಹಿನಿಯ ಜೊತೆ ಮಾತನಾಡುವಾಗ ಶಂಕರಾಚಾರ್ಯರು, ಅಯೋಧ್ಯೆ ಮತ್ತು ಕಾಂಚೀಯ ಸಂಬಂಧ ತ್ರೆತಾ ಯುಗದೊಂದಿಗಿದೆ. ಸೂರ್ಯವಂಶಿ ರಾಜರ ಕುಲಗುರು ಕಾಮಾಕ್ಷಿ ದೇವಿಯೇ ಆಗಿದ್ದು ಆಕೆಯ ಆಶೀರ್ವಾದದಿಂದ ರಾಜ ದಶರಥನಿಗೆ ಪ್ರಭು ಶ್ರೀರಾಮಚಂದ್ರ ಪುತ್ರ ರೂಪದಲ್ಲಿ ಪ್ರಾಪ್ತವಾಗಿದ್ದರು. ಲಲಿತೋಪಾಖ್ಯಾಯನದಲ್ಲಿ ಇದರ ವರ್ಣನೆ ಇದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಈಗ ಇದರಿಂದ ಜಾತ್ಯತೀತವಾದಿ ಎಂದರೆ ನತದೃಷ್ಟ ಹಿಂದುಗಳಿಂದ ವಿರೋಧವಾದರೆ ಆಶ್ಚರ್ಯ ಏನೂ ಇಲ್ಲ ! ತಮಾಷೆ ಎಂದರೆ, ಜಾತ್ಯತೀತರು ಮತ್ತು ಪ್ರಗತಿ (ಅಧೋಗತಿ) ಪರರು ಒಂದು ಕಡೆ ಶ್ರಾದ್ಧ ಆಡಂಬರ ಎನ್ನುತ್ತಾರೆ, ಆದರೆ ಏನಾದರೂ ಮಾಡಿ ಹಿಂದುತ್ವ ನಿಷ್ಠರಿಗೆ ವಿರೋಧ ಮಾಡುವುದಕ್ಕಾಗಿ ಅವರು ಶಂಕರಚಾರ್ಯರಿಗೂ ಕೂಡ ಪ್ರಶ್ನೆ ಕೇಳಲು ಹಿಂಜರಿಯುವುದಿಲ್ಲ, ಇದು ಕೂಡ ಅಷ್ಟೇ ಸತ್ಯವಾಗಿದೆ.