ತಮಿಳುನಾಡಿನಲ್ಲಿ ಪಾದ್ರಿಯಿಂದ ಲೈಂಗಿಕ ದೌರ್ಜನ್ಯ ಮಹಿಳೆಯಿಂದ ಆತ್ಮಹತ್ಯೆಗೆ ಪ್ರಯತ್ನ !

ಚೆನ್ನೈ (ತಮಿಳುನಾಡು) – ತಿರುನೇಲವೇಲಿ ಇಲ್ಲಿ ೪೦ ವರ್ಷದ ಮಹಿಳೆಯ ಮೇಲೆ ಜಗನ್ ಎಂಬ ಪಾದ್ರಿಯೂ ಲೈಂಗಿಕ ದೌರ್ಜನ್ಯ ಮಾಡಿದ್ದರಿಂದ ಆತ್ಮಹತ್ಯೆ ಮಾಡಲು ಪ್ರಯತ್ನ ಮಾಡಿರುವ ಘಟನೆ ನಡೆದಿದೆ. ಈ ಮಹಿಳೆ ನಿದ್ರೆಯ ೪೦ ಮಾತ್ರೆ ತೆಗೆದುಕೊಂಡಿದ್ದಳು. ಆದ್ದರಿಂದ ಆಕೆ ಮೂರ್ಛ ಹೋಗಿದ್ದಳು. ಆಕೆಗೆ ಇಲ್ಲಿಯ ಸರಕಾರಿ ಆಸ್ಪತ್ರೆಯಲ್ಲಿ ಸೇರಿಸಲಾಗಿದ್ದು ಆಕೆಯ ಆರೋಗ್ಯ ಚಿಂತಾಜನಕವಾಗಿದೆ. ಜಗನ ಇಲ್ಲಿಯ ಚರ್ಚನಲ್ಲಿ ಪಾದ್ರಿ ಆಗಿದ್ದಾನೆ. ಸಂತ್ರಸ್ತೇ ಮಹಿಳೆಯು ಪ್ರಾರ್ಥನೆ ಸಭೆಗಾಗಿ ಹೋಗಿರುವಾಗ ಅಲ್ಲಿ ಪಾದ್ರಿ ಜಗನ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಮಹಿಳೆಯ ಕುಟುಂಬದವರು ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರು ಜಗನ ವಿರುದ್ಧ ಆತ್ಮಹತ್ಯೆಗೆ ಪ್ರಚೋದಿಸಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಈಗ ಅವನು ಪರಾರಿಯಾಗಿದ್ದು ಪೊಲೀಸರು ಅವನನ್ನು ಹುಡುಕುತ್ತಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ವಾರ್ತೆ ಭಾರತದಲ್ಲಿನ ಪ್ರಸಾರ ಮಾಧ್ಯಮಗಳು ಮುಚ್ಚಿ ಹಾಕುತ್ತಾರೆ; ಕಾರಣ ಅವರು ತಮ್ಮನ್ನು ಜಾತ್ಯತೀತರೆಂದು ತಿಳಿಯುತ್ತಾರೆ !