ಝಾನ್ಸಿಯಲ್ಲಿನ ಹಿಂದೂ ವಿದ್ಯಾರ್ಥಿಗಳ ಮೇಲೆ ಕಾಶ್ಮೀರದಲ್ಲಿನ ಮುಸಲ್ಮಾನ ವಿದ್ಯಾರ್ಥಿಗಳಿಂದ ದೌರ್ಜನ್ಯ !

ದೇವತೆಗಳ ಚಿತ್ರಗಳನ್ನು ಹರಿದು, ದೇಶವಿರೋಧಿ ಘೋಷಣೆ ನೀಡಲು ಅನಿವಾರ್ಯಗೊಳಿಸಿದ್ದರು !

ಝಾನ್ಸಿ (ಉತ್ತರ ಪ್ರದೇಶ) – ಇಲ್ಲಿಯ ಬರುವಾಸಾಗರ ನವೋದಯ ವಿದ್ಯಾಲಯದ ೨೦ ಹಿಂದೂ ವಿದ್ಯಾರ್ಥಿ ಕಾಶ್ಮೀರದಲ್ಲಿನ ರಾಜೌರಿಯ ನವೋದಯ ವಿದ್ಯಾಲಯದಲ್ಲಿ ಅಧ್ಯಯನಕ್ಕಾಗಿ ಹೋಗಿದ್ದರು. ಅಲ್ಲಿ ಅವರಿಗೆ ಥಳಿಸಿದ ನಂತರ ಬರುವಾಸಾಗರ ನವೋದಯ ವಿದ್ಯಾಲಯದಲ್ಲಿನ ಕಾಶ್ಮೀರಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ಸ್ಥಳೀಯ ವಿದ್ಯಾರ್ಥಿಗಳು ಥಳಿಸಿದರು. ಹಾಗೂ ರಾಜೌರಿಯಲ್ಲಿನ ವಿದ್ಯಾರ್ಥಿಗಳನ್ನು ವಾಪಸ ಕರೆಸಿಕೊಳ್ಳಲು ಪ್ರತಿಭಟನೆ ಮಾಡಿದರು. ಅದರ ನಂತರ ಎರಡು ಕಡೆಯ ವಿದ್ಯಾರ್ಥಿಗಳಿಗೆ ಅವರವರ ಮೂಲ ಸ್ಥಳಕ್ಕೆ ಹಿಂತಿರುಗಿ ಕಳಿಸಲಾಯಿತು. ರಾಜೌರಿಗೆ ಹೋಗಿರುವ ಝಾನ್ಸಿಯ ವಿದ್ಯಾರ್ಥಿಗಳು ಅಲ್ಲಿ ಹಿಂತಿರುಗಿದ ನಂತರ ಅವರ ಮೇಲೆ ರಾಜೌರಿಯಲ್ಲಿ ಹೇಗೆ ದೌರ್ಜನ್ಯ ನಡೆಸಲಾಯಿತು ?’, ಇದರ ಮಾಹಿತಿ ಅವರು ನೀಡಿದರು. ಅಲ್ಲಿಯ ಕಾಶ್ಮೀರಿ ವಿದ್ಯಾರ್ಥಿಗಳು ಹಿಂದೂ ವಿದ್ಯಾರ್ಥಿಗಳಿಂದ ಭಾರತ ವಿರೋಧಿ ಘೋಷಣೆ ನೀಡಲು ಅನಿವಾರ್ಯಗೊಳಿಸುವುದು ಮತ್ತು ದೇವತೆಗಳ ಚಿತ್ರಗಳನ್ನು ಹರಿಯಲು ಅನಿವಾರ್ಯ ಪಡಿಸಿದರು ಎಂದು ಮಾಹಿತಿ ನೀಡಿದರು.

ಎಂಜಲು ಪಾತ್ರೆಗಳು ಉಜ್ಜಲು ಅನಿವಾರ್ಯಗೊಳಿಸಿದರು !

ದೀಪಕ ಕುಮಾರ ಈ ವಿದ್ಯಾರ್ಥಿಯು, ಅಲ್ಲಿಯ ಕಾಶ್ಮೀರಿ ವಿದ್ಯಾರ್ಥಿಗಳು ಸಣ್ಣ ಸಣ್ಣ ವಿಷಯಗಳಿಂದ ಕಿರುಕುಳ ನೀಡುತ್ತಿದ್ದರು. ನಮಗೆ ಸುತ್ತುವರೆದು ದೇಶವಿರೋಧಿ ಘೋಷಣೆ ನೀಡಲು ಅನಿವಾರ್ಯಗೊಳಿಸುತ್ತಿದ್ದರು. ಘೋಷಣೆ ನೀಡದೆ ಇದ್ದರೆ ಹೊಡೆಯಲಾಗುತ್ತಿತ್ತು. ಅಷ್ಟೇ ಅಲ್ಲದೆ, ಅವರ ಎಂಜಲ ಪಾತ್ರೆಗಳು ತೊಳೆಸುತ್ತಿದ್ದರು. ಶಿಕ್ಷಕರ ಬಳಿ ಇದರ ಬಗ್ಗೆ ದೂರು ನೀಡಿದ ನಂತರ ಕೂಡ ಅವರು ಕೇಳುತ್ತಿರಲಿಲ್ಲ. ನಾವು ಇದರ ಮಾಹಿತಿ ಮನೆಗೆ ತಿಳಿಸಿರಲಿಲ್ಲ, ಕಾರಣ ಇದರಿಂದ ಕುಟುಂಬದವರಿಗೆ ನೋವುಂಟಾಗುತ್ತದೆ ಎಂದು ಹೇಳಿದರು.

ಮಣಿಕಟ್ಟಿನಲ್ಲಿ ದಾರ ಕಟ್ಟಿದ್ದರಿಂದ ಕೈ ಮುರಿದರು !

ವಿಪುಲ ಕುಮಾರ ಇವನು, ನಾವು ವಸತಿಗೃಹದಲ್ಲಿ ನಮ್ಮ ಕೋಣೆಯಲ್ಲಿ ದೇವತೆಗಳ ಚಿತ್ರ ಹಚ್ಚಿದರೆ ಅದನ್ನು ಹರಿಯುತ್ತಿದ್ದರು. ನನ್ನ ಸಹಪಾಠಿ ವಿದ್ಯಾರ್ಥಿ ಋತಿಕ ಇವನು ಮಣಿಕಟ್ಟಿನಲ್ಲಿ ಕೆಂಪುದಾರ ಕಟ್ಟಿಕೊಂಡಿದ್ದನ್ನು, ಅವನು ಮತ್ತೆ ಕೈ ಮೇಲೆ ದಾರ ಕಟ್ಟಬಾರದೆಂದು ಕೈ ಮೂಳೆ ಮುರಿದಿದ್ದರು ಎಂದು ಹೇಳಿದನು.

ಸಂಪಾದಕೀಯ ನಿಲುವು

ಕಾಶ್ಮೀರದಲ್ಲಿನ ಮುಸಲ್ಮಾನ ವಿದ್ಯಾರ್ಥಿಗಳ ಈ ಹಿಂದೂದ್ವೇಷ ಮತ್ತು ಭಾರತ ವಿರೋಧಿ ಮಾನಸಿಕತೆ ನೋಡಿದರೆ, ಕಾಶ್ಮೀರದಲ್ಲಿನ ಜಿಹಾದಿ ಭಯೋತ್ಪಾದನೆ ಇನ್ನೂ ಕೆಲವು ವರ್ಷ ನಾಶ ಆಗುವುದಿಲ್ಲ ಇದೆ ಇದರಿಂದ ತಿಳಿಯುತ್ತದೆ. ಇದರ ಬಗ್ಗೆ ಸರಕಾರದಿಂದ ಕಾಶ್ಮೀರದ ವಿಕಾಸದ ಜೊತೆಗೆ ಅಲ್ಲಿಯ ಜಿಹಾದಿ ಮಾನಸಿಕತೆ ನಾಶ ಮಾಡುವ ಪ್ರಯತ್ನ ಮಾಡಬೇಕಾಗುವುದು.