|
ಢಾಕಾ (ಬಾಂಗ್ಲಾದೇಶ) – ಕೆನಡಾ ಈ ಕೊಲೆಗಾರರ ಕೇಂದ್ರವಾಗಿದೆ. ಕೆನಡಾ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದೆ. ಅವರಿಗಾಗಿ ಕೆನಡಾ ಒಂದು ರಕ್ಷಣಾ ಕವಚದ ಹಾಗೆ ಆಗಿದೆ. ಕೊಲೆಗಾರರು ಇಲ್ಲಿ ಬಂದು ಐಷಾರಾಮಿ ಜೀವನ ಕಳೆಯುತ್ತಾರೆ, ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ .ಅಬ್ದುಲ್ ಮೋಮನ ಇವರು ಗಂಭೀರ ಆರೋಪ ಮಾಡಿದ್ದಾರೆ.
ಒಂದು ಆಂಗ್ಲ ಭಾರತೀಯ ವಾರ್ತಾ ವಾಹಿನಿಯ ಜೊತೆಗೆ ಅಬ್ದುಲ್ ಮೋಮನ ಮಾತು ಮುಂದುವರೆಸುತ್ತಾ,
೧. ಬಾಂಗ್ಲಾದೇಶದ ಸಂಸ್ಥಾಪಕ ಶೇಖ ಮುಜೀಬುರ್ರೆಹಮಾನರ ಕೊಲೆಗಾರ ನೂರ ಚೌದರಿ ಕೆನಡಾಗೆ ಹೋದ ನಂತರ ಅವನ ಶರಣಾಗತಿಗೆ ಕೆನಡಾ ನಮಗೆ ನಿರಾಕರಿಸಿತ್ತು. ಕೆನಡಾ ಏನಾದರೂ ಕಾರಣ ಹೇಳಿ ಚೌದರಿ ಇವನ ಶರಣಾಗತಿ ಮುಂದುಡುತ್ತ ಬಂದಿದೆ.
೨. ಇಲ್ಲಿಯ ಸರಕಾರದ ಈ ನಿಲುವಿನ ಹಿಂದಿನ ಮೂಲ ಕಾರಣ ಶೋಧಿಸುವುದಕ್ಕಾಗಿ ನಾವು ಕೆನಡಾದ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದೆವು. ‘ಅವನಿಗೆ ಕೆನಡಾದ ನಾಗರಿಕತ್ವ ನೀಡಲಾಗಿದೆ ಯೇ’, ಇದನ್ನು ನಾವು ತಿಳಿದುಕೊಳ್ಳುವ ಪ್ರಯತ್ನ ಕೂಡ ಮಾಡಿದೆವು. ನ್ಯಾಯಾಲಯವು ಈ ಸಂದರ್ಭದಲ್ಲಿ ನಿರ್ಣಯ ಕೂಡ ನೀಡಿತ್ತು; ಆದರೆ ಅಲ್ಲಿಯ ಸರಕಾರ ಚೌದರಿಯ ಬಗ್ಗೆ ಏನು ಹೇಳುತ್ತಿಲ್ಲ ಮತ್ತು ಅವನನ್ನು ಬಾಂಗ್ಲಾದೇಶಕ್ಕೆ ಒಪ್ಪಿಸುತ್ತಿಲ್ಲ.
೩. ಕೆನಡಾ ‘ಮಾನವ ಹಕ್ಕು’ ಈ ಪರಿಕಲ್ಪನೆಯ ನೆಪದಲ್ಲಿ ಭಯೋತ್ಪಾದನೆ ಮತ್ತು ಕೊಲೆಗಾರರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದೆ. ಈ ಮೂಲಕ ಕೆನಡಾ ಮಾನವ ಹಕ್ಕುಗಳ ದುರುಪಯೋಗ ಮಾಡುತ್ತಿದೆ.
೪. ಕೆನಡಾ ಸರಕಾರದ, ಅದರ ದೇಶದಲ್ಲಿ ಯಾವುದೇ ವ್ಯಕ್ತಿಗೆ ಏನಾದರೂ ಅವರ ಮೂಲ ದೇಶಕ್ಕೆ ಹಿಂತಿರುಗಿಸಿದರೆ ಅವರಿಗೆ ಮರಣದಂಡನೆ ನೀಡುತ್ತಾದೆಯಾದರೇ ಕೆನಡಾ ಅವರ ಶರಣಾಗತಿ ಮಾಡಲು ಸಾಧ್ಯವಿಲ್ಲ ಎಂಬ ಕಾಯಿದೆ ಇದೆ. ಕೆನಡಾದ ಕಾನೂನು ಹೀಗಿದ್ದರೆ ಅವರ ಭೂಮಿ ಈ ಕೊಲೆಗಾರರಿಗೆ ರಕ್ಷಣಾ ಕವಚವಾಗಬಾರದು.
೫. ಶೇಖ ಮುಜೆಬುರ್ರೆಹಮಾನ್ ರಹಮಾನ್ ಇವರ ಇನ್ನೊಬ್ಬ ಕೊಲೆಗಾರ ರಾಶಿದ ಚೌದರಿ ಇವನು ಅಮೆರಿಕದಲ್ಲಿದ್ದಾನೆ. ನಮಗೆ, ಅಮೇರಿಕಾ ಅವರ ಶರಣಾಗತಿ ಮಾಡುವುದು ಎಂಬ ಭರವಸೆ ಇದೆ. ಅಮೇರಿಕಾ ಈ ಹಿಂದೆ ಕೂಡ ಒಬ್ಬ ಕೊಲೆಗಾರನ ಶರಣಾಗತಿ ಮಾಡಿದೆ.
ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಅವರ ನಾಗರಿಕರಾಗಿರುವ ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಕೊಲೆಯ ಆರೋಪ ಭಾರತದ ಮೇಲೆ ಮಾಡಿದೆ, ಶ್ರೀಲಂಕಾ ಕೂಡ ಕೆನಡಾದ ವಿರುದ್ಧ ಹೇಳಿಕೆ ನೀಡಿದೆ. ಕೆಲವು ದಿನಗಳ ಹಿಂದೆ ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಾಬರಿ ಇವರು ‘ಕೆನಡಾ ಭಯೋತ್ಪಾದಕರಿಗೆ ಸುರಕ್ಷಿತ ಸ್ಥಾನ ನೀಡುತ್ತದೆ’, ಎಂದು ಆರೋಪಿಸಿದ್ದರು. ಹಾಗೂ ಟ್ರುಡೋ ಯಾವುದೇ ಸಾಕ್ಷಿ ಇಲ್ಲದೆ ಭಾರತದ ಮೇಲೆ ಆರೋಪ ಮಾಡುತ್ತಿದೆ, ಎಂದು ಕೂಡ ಅವರು ಹೇಳಿದ್ದರು.
ಸಂಪಾದಕೀಯ ನಿಲುವುತಥಾಕಥಿತ ಮಾನವತಾವಾದದ ಹೆಸರಿನಲ್ಲಿ ಕೆನಡಾ ಏನಾದರೂ ಈ ರೀತಿ ಭಯೋತ್ಪಾದಕರಿಗೆ ಮತ್ತು ಹಂತಕರಿಗೆ ರಕ್ಷಣೆ ನೀಡುತ್ತಿದ್ದರೆ, ಅದರ ವಿರುದ್ಧ ವಿಶ್ವಸಂಸ್ಥೆಗಳು ಹಾಗೂ ಅಂತರಾಷ್ಟ್ರೀಯ ನ್ಯಾಯಾಲಯದ ಮೂಲಕ ಕ್ರಮ ಕೈಗೊಳ್ಳುವುದಕ್ಕಾಗಿ ಸಂಬಂಧಿತ ದೇಶಗಳು ಸಂಘಟಿತರಾಗಿ ಮುಂದೆ ಬರುವುದು ಆವಶ್ಯಕ ! |