|
ಪಾಟಲಿಪುತ್ರ (ಬಿಹಾರ) – ಮಹಿಳಾ ಮೀಸಲಾತಿಯಲ್ಲಿ ಹಿಂದುಳಿದ ವರ್ಗ, ಅತಿ ಹಿಂದುಳಿದ ವರ್ಗ ಮತ್ತು ಇನ್ನೊಂದು ಕೋಟ ಕೂಡ ನೀಡಬೇಕು. ಹಾಗೆ ಆಗದಿದ್ದರೆ ಆಗ ಮಹಿಳಾ ಮೀಸಲಾತಿಯ ಹೆಸರಿನಲ್ಲಿ ‘ಪೌಡರ್’ ಮತ್ತು ‘ಲಿಪ್ಸ್ಟಿಕ್’ ಹಾಕಿಕೊಳ್ಳುವ ಮತ್ತು ‘ಬಾಪ್ ಕಟ್’ ಮಾಡಿ ಕೊಂಡಿರುವ ಮಹಿಳೆಯರೇ ಮುಂದೆ ಹೋಗುತ್ತಾರೆ, ಎಂದು ರಾಷ್ಟ್ರೀಯ ಜನತಾದಳದ ನಾಯಕ ಅಬ್ದುಲ್ ಬಾರಿ ಸಿದ್ದಿಕಿ ಇವರು ಮಹಿಳಾ ಮೀಸಲಾತಿ ಮಸೂದೆಯ ಸಂದರ್ಭದಲ್ಲಿ ಹೇಳಿಕೆ ನೀಡಿದರು.
‘पाउडर-लिपस्टिक और बॉब कट वाली महिलाएँ ले जाएँगी आरक्षण के फायदे’: RJD वाले अब्दुल का विवादित बयान, विरोध होने पर बोले – मैली साड़ी वाली महिलाओं को समझा रहा था#AbdullBariSiddiqui #RJD #WomenReservationBill https://t.co/KiaK4P7gCe
— ऑपइंडिया (@OpIndia_in) September 30, 2023
ಈ ಕುರಿತು ಭಾಜಪ ಅವರನ್ನು ಟೀಕಿಸಿದೆ. ಬಿಹಾರದ ಮುಜಫರಪುರ ಇಲ್ಲಿಯ ಭಾಜಪದ ಶಾಸಕ ಜನಕ ಸಿಂಹ ಇವರು ಸಿದ್ದಿಕಿ ಇವರನ್ನು ನ್ಯಾಯಾಲಯಕ್ಕೆ ಎಳೆಯುವುದಾಗಿ ಹೇಳಿದ್ದಾರೆ. ‘ಸಿದ್ದಿಕಿ ಇವರಂತಹ ಜನನಾಯಕರು ಹೇಗೆ ಆಗುತ್ತಾರೆ ? ಇಂತಹ ಮಾನಸಿಕತೆಯ ಜನರು ಮಹಿಳೆಯರ ಪ್ರಗತಿ ನೋಡಲು ಸಾಧ್ಯವಿಲ್ಲ, ಕೀಳಮಟ್ಟದ ರಾಜಕಾರಣ ಮಾಡುತ್ತಾರೆ. ಸಿಂದ್ದಿಕಿ ಇವರ ಈ ಹೇಳಿಕೆಯ ಬಗ್ಗೆ ಕ್ಷಮೆಯಾಚಿಸಬೇಕೆಂದು ಸಿಂಹ ಇವರು ಟೀಕಿಸಿದ್ದಾರೆ.
(ಸೌಜನ್ಯ – Republic Bharat)
ಸಂಪಾದಕೀಯ ನಿಲುವು
|