ಗುಜರಾತ್ ನಲ್ಲಿ ೮೦೦ ಕೋಟಿ ರೂಪಾಯಿಯ ಕೋಕೆನ ವಶ

ಸೂರತ (ಗುಜರಾತ) – ಗಾಂಧಿಧಾಮ ಪೊಲೀಸರು ೮೦೦ ಕೋಟಿ ರೂಪಾಯ ೮೦ ಕೆಜಿ ಕೋಕೆನ ವಶಪಡಿಸಿಕೊಂಡಿದ್ದಾರೆ. ಪೊಲೀಸರು ಕಳೆದ ಅನೇಕ ದಿನಗಳಿಂದ ಇಲ್ಲಿಯ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆಯ ಮೇಲೆ ನಿಗಾ ಇರಿಸಿದ್ದರು. ಪೊಲೀಸರಿಗೆ ದೊರೆತಿರುವ ಮಾಹಿತಿಯ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರ ಭಯದಿಂದ ಕಳ್ಳ ಸಾಗಾಣಿಕೆದಾರರು ಮಾದಕ ವಸ್ತುಗಳನ್ನು ಅಲ್ಲೇ ಬಿಟ್ಟು ಪಲಾಯನ ಮಾಡಿದರೆಂದು ಹೇಳಲಾಗುತ್ತಿದೆ. ಗೃಹ ರಾಜ್ಯ ಸಚಿವ ಹರ್ಷ ಸಂಘವಿ ಇವರು, ಇತ್ತೀಚಿನ ವರ್ಷಗಳಲ್ಲಿ ಪೊಲೀಸರು ಎಷ್ಟು ಕೋಕೆನ ವಶಪಡಿಸಿಕೊಂಡಿದ್ದಾರೆ ಅಷ್ಟು ಬೇರೆ ಯಾವ ರಾಜ್ಯಗಳಲ್ಲಿ ಕೂಡ ವಶಪಡಿಸಿಕೊಂಡಿಲ್ಲ. ಕೊಕೆನ ಮಾರಾಟ ಎಲ್ಲಿಂದ ಆಗುತ್ತದೆ ? ಇಷ್ಟೊಂದು ಪೂರೈಕೆ ಎಲ್ಲಿಂದ ಆಗುತ್ತದೆ? ಇದರ ಸಂಪೂರ್ಣ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುತ್ತಿದೆ. ಅಂತರಾಷ್ಟ್ರೀಯ ನಂಟಿರುವ ಆರೋಪಿಗಳನ್ನು ಬಂಧಿಸುವಲ್ಲಿ ಗುಜರಾತ್ ಪೊಲೀಸರು ಯಶಸ್ವಿ ಆಗುತ್ತಿದ್ದಾರೆ.

ಸಂಪಾದಕೀಯ ನಿಲುವು

ವಶಪಡಿಸಿಕೊಂಡಿರುವ ಕೋಕೆನ ಇಷ್ಟು ಪ್ರಮಾಣದಲ್ಲಿದೆ ಹಾಗಾದರೇ ವಶಪಡಿಸಿಕೊಳ್ಳದೆ ಇರುವುದು ಮತ್ತು ಸಮಾಜದಲ್ಲಿ ಮಾರಾಟ ಮಾಡಲಾಗಿರುವ ಕೋಕೆನ ಎಷ್ಟು ಇರಬಹುದು ? ಇದರ ಕಲ್ಪನೆ ಕೂಡ ಮಾಡಲು ಸಾಧ್ಯವಿಲ್ಲ !