ಜಗತ್ತಿನಾದ್ಯಂತ ಬಂಧಿತ ಭಿಕ್ಷುಕರಲ್ಲಿ ಶೇಕಡ ೯೦ ರಷ್ಟು ಪಾಕಿಸ್ತಾನಿ !

ಇರಾಕ್ ಮತ್ತು ಸೌದಿ ಅರೇಬಿಯಾದಲ್ಲಿಯ ಜೈಲಿನಲ್ಲಿ ಪಾಕಿಸ್ತಾನಿಗಳಿಂದ ತುಂಬಿವೆ !

ಇಸ್ಲಾಮಾಬಾದ (ಪಾಕಿಸ್ತಾನ) – ವಿದೇಶದಲ್ಲಿ ಬಂಧಿಸಲಾಗಿರುವ ಭಿಕ್ಷುಕರಲ್ಲಿ ಎಲ್ಲಕ್ಕಿಂತ ಹೆಚ್ಚು ಎಂದರೆ ಶೇಕಡ ೯೦ ರಷ್ಟು ಭಿಕ್ಷುಕರು ಪಾಕಿಸ್ತಾನಿ ನಾಗರಿಕರಾಗಿರುತ್ತಾರೆ, ಈ ಮಾಹಿತಿ ಸ್ವತಃ ಪಾಕಿಸ್ತಾನವೇ ನೀಡಿದೆ.

(ಸೌಜನ್ಯ – WION)

ಪಾಕಿಸ್ತಾನದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸಚಿವ ಜುಲ್ಫಿಕಾರ್ ಹೈದರ್ ಇವರು, ವಿದೇಶದಲ್ಲಿ ಬಂಧಿಸಿರುವ ಭಿಕ್ಷುಕರಲ್ಲಿ ಪಾಕಿಸ್ತಾನದ ಸಂಖ್ಯೆ ಎಲ್ಲಕ್ಕಿಂತ ಹೆಚ್ಚು ಎಂದರೆ ಶೇಕಡ ೯೦ ರಷ್ಟು ಇದೆ. ಇರಾಕ ಮತ್ತು ಸೌದಿ ಅರೇಬಿಯಾದ ರಾಯಭಾರಿಗಳು, ‘ಇಂತಹ ಪಾಕಿಸ್ತಾನಿ ನಾಗರಿಕರನ್ನು ಬಂಧಿಸುವದಕ್ಕಾಗಿ ನಮ್ಮ ಜೈಲಿನಲ್ಲಿ ಖಾಲಿ ಸ್ಥಳ ಉಳಿದಿಲ್ಲ.’ ಎಂದು ಹೇಳಿದ್ದಾರೆ. ಆದ್ದರಿಂದ ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಸಭೆಯಲ್ಲಿ ಪಾಕಿಸ್ತಾನದ ಹಜ ಯಾತ್ರಿಕರ ಕೋಟಾದಲ್ಲಿನ ನಾಗರಿಕರ ಬಗ್ಗೆ ಸತರ್ಕತೆಯಿಂದ ಇರಲು ಹೇಳಿದ್ದಾರೆ.

ಮಕ್ಕಾದಲ್ಲಿ ಬಂಧಿಸಿರುವ ಜೇಬು ಕಳ್ಳರಲ್ಲಿ ಎಲ್ಲಕ್ಕಿಂತ ಹೆಚ್ಚು ಪಾಕಿಸ್ತಾನಿಗಳು !

ಮಕ್ಕದಲ್ಲಿನ ‘ಮಸ್ಜಿದ್ ಅಲ್ ಹರಮ್’ ಇಂತಹ ಪವಿತ್ರ ಸ್ಥಳದಲ್ಲಿ ಬಂಧಿಸಲಾದ ಜೇಬು ಕಳ್ಳರಲ್ಲಿ ಎಲ್ಲಕ್ಕಿಂತ ಹೆಚ್ಚು ಪಾಕಿಸ್ತಾನದ ನಾಗರಿಕರಾಗಿದ್ದಾರೆ. ಮಧ್ಯಪೂರ್ವ ದೇಶದ ಎಲ್ಲಾಕ್ಕಿಂತ ಹೆಚ್ಚು ಜೇಬು ಕಳ್ಳರಿರುವ ಸ್ಥಳ ಇದಾಗಿದೆ ಎಂದು ಕೂಡ ಸಮಿತಿ ಹೇಳಿದೆ. (ಸ್ವಂತ ಧರ್ಮದ ಅತ್ಯಂತ ಪವಿತ್ರ ಸ್ಥಾಳದಲ್ಲಿ ಕೂಡ ಅಪರಾಧಿ ಕೃತ್ಯ ನಡೆಸುವ ಇಂತಹ ಪಾಕಿಸ್ತಾನಿ ಮುಸಲ್ಮಾನರಿಗೆ ‘ಅಲ್ಲಾನ ಅವಮಾನ ಮಾಡಿರುವುದರಿಂದ ಶಿಕ್ಷೆ ವಿಧಿಸಬೇಕು’, ಎಂದು ಇತರ ಮುಸಲ್ಮಾನರು ಏಕೆ ಆಗ್ರಹಿಸುವುದಿಲ್ಲ ? – ಸಂಪಾದಕರು)

ಸೌದಿ ಅರೇಬಿಯಾದ ಪಾಕಿಸ್ತಾನದ ಕಾರ್ಮಿಕರ ಮೇಲೆ ವಿಶ್ವಾಸವಿಲ್ಲ !

ಪಾಕಿಸ್ತಾನದಲ್ಲಿನ ಜೈಬುಕಳ್ಳರು ಮತ್ತು ಭಿಕ್ಷುಕ ನಾಗರಿಕರು ಹಜಯಾತ್ರೆಯ ಹೆಸರಿನಲ್ಲಿ ವೀಸಾ ಪಡೆದು ಸೌದಿ ಅರೇಬಿಯಾಗೆ ಬರುತ್ತಿರುವುದರಿಂದ ಸೌದಿ ಅರೇಬಿಯಾ ಪಾಕಿಸ್ತಾನದ ಬಗ್ಗೆ ಅಸಮಾಧಾನಿಯಾಗಿದೆ. ಪಾಕಿಸ್ತಾನದ ನಾಗರಿಕರಿಗೆ ಸೌದಿ ಅರೇಬಿಯಾದಲ್ಲಿ ಕೆಲಸಕ್ಕಾಗಿ ಕರೆಯಲಾಗುತ್ತಿಲ್ಲ; ಕಾರಣ ಕುಶಲ ಕಾರ್ಮಿಕರ ಸಂದರ್ಭದಲ್ಲಿ ಸೌದಿಯ ನಾಗರಿಕರಿಗೆ ಪಾಕಿಸ್ತಾನದ ಮೇಲೆ ವಿಶ್ವಾಸವಿಲ್ಲ. ಕುಶಲ ಕಾರ್ಮಿಕರಿಗಾಗಿ ಸೌದಿ ಅರೇಬಿಯಾ ಯಾವಾಗಲೂ ಭಾರತೀಯ ಮತ್ತು ಬಾಂಗ್ಲಾದೇಶದ ಕಾರ್ಮಿಕರ ಮೇಲೆ ಅವಲಂಬಿತವಾಗಿದ್ದಾರೆ.

ಸಂಪಾದಕೀಯ ನಿಲುವು

ಯಥಾ ರಾಜ ತಥಾ ಪ್ರಜಾ ! ಹೇಗೆ ಪಾಕಿಸ್ತಾನದ ರಾಜಕಾರಣಿಗಳು ಜಗತ್ತಿನಾದ್ಯಂತ ಹೋಗಿ ಭಿಕ್ಷೆ ಕೇಳುತ್ತಾರೆ, ಹಾಗೆಯೇ ಅವರ ನಾಗರಿಕರು ಕೂಡ ಇತರ ದೇಶದಲ್ಲಿ ಅದನ್ನೇ ಮಾಡುತ್ತಾರೆ !

ಭಾರತದಲ್ಲಿ ವಾಸಿಸುವ ಪಾಕಿಸ್ತಾನ ಪ್ರೇಮಿಗಳಿಗೆ ಈಗ ಶಿಕ್ಷೆ ಎಂದು ಭಾರತೀಯ ಜೈಲಿನಲ್ಲಿ ಹಾಕುವ ಬದಲು ಅವರನ್ನು ಪಾಕಿಸ್ತಾನಕ್ಕೆ ಓಡಿಸಬೇಕು, ಇದೇ ಯೋಗ್ಯ ಶಿಕ್ಷೆ ಆಗುವುದು.