ಮಣಿಪುರದಲ್ಲಿ ಹಿಂದೂ ಮೈತೆಯಿ ಜನಾಂಗದ ೨ ವಿದ್ಯಾರ್ಥಿಗಳ ಹತ್ಯೆಯ ನಂತರ ಹಿಂಸಾಚಾರ

ಭಾಜಪದ ಕಾರ್ಯಾಲಯದಲ್ಲಿ ಅಗ್ನಿ ಅವಘಡ ಹಾಗೂ ಪ್ರದೇಶಾಧ್ಯಕ್ಷರ ಮನೆ ದ್ವಂಸ !

ಇಂಪಾಲ (ಮಣಿಪುರ) – ಇಲ್ಲಿ ಹಿಂದೂ ಮೈತೆಯಿ ಜನಾಂಗದ ೨ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳ ಹತ್ಯೆಯನ್ನು ಖಂಡಿಸಿ ಹಿಂಸಾಚಾರ ಆರಂಭವಾಯಿತು. ಸಮೂಹದಿಂದ ರಾಜ್ಯದ ಥೌಬಲ ಜಿಲ್ಲೆಯಲ್ಲಿನ ಭಾಜಪದ ಕಚೇರಿಗೆ ಬೆಂಕಿ ಹಚ್ಚಲಾಯಿತು. ಹಾಗೂ ಇಂಫಾಲನಲ್ಲಿ ಭಾಜಪದ ಪ್ರದೇಶಾಧ್ಯಕ್ಷ ಶಾರದಾ ದೇವಿಯ ಮನೆ ಕೂಡ ಧ್ವಂಸ ಮಾಡಲಾಯಿತು. ಪೊಲೀಸರು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ೧ ಸಾವಿರದ ೬೯೭ ಜನರನ್ನು ವಶಕ್ಕೆ ಪಡೆದಿದ್ದಾರೆ. ಸಿಬಿಐ ನ ವಿಶೇಷ ಸಂಚಾಲಕರು ಅಜಯ ಭಟ್ನಾಗರ ಇವರ ಪಡೆ ಸಹಿತ ವಿದ್ಯಾರ್ಥಿಗಳ ಹತ್ಯೆಯ ಪ್ರಕರಣದ ಇಂಪಾಲಾಗೆ ತಲುಪಿದ್ದಾರೆ.


ರಾಜಧಾನಿ ಇಂಫಾಲ ಸಹಿತ ಅನೇಕ ಸ್ಥಳಗಳಲ್ಲಿ ಪ್ರತಿಭಟನಾಕಾರರು ಮತ್ತು ರಕ್ಷಣಾ ದಳದವರಲ್ಲಿ ಹಿಂಸಾತ್ಮಕ ಚಕಮಕಿ ನಡೆದಿದೆ. ಗುಂಪನ್ನು ಚದರಿಸಲು ಪೊಲೀಸರು ಆಶ್ರುವಾಯುವಿನ ನಳಿಕೆ ಓಡೆದರು. ಇದರಲ್ಲಿ ಅನೇಕ ವಿದ್ಯಾರ್ಥಿಗಳು ಗಾಯಗೊಂಡರು. ಕಳೆದ ಎರಡು ದಿನಗಳಿಂದ ಇಂಫಾಲದಲ್ಲಿ ನಡೆದಿರುವ ಪ್ರತಿಭಟನೆಯಲ್ಲಿ ೫೦ ಜನರು ಗಾಯಗೊಂಡರು. ಅದರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳೇ ಆಗಿದ್ದಾರೆ.