ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಕೋಣೆಯಲ್ಲಿ ಯು.ಎ.ಎಸ್. ಔರಾ ಸ್ಕ್ಯಾನರ್‌ನಿಂದ ಮಾಡಿದ ಸೂರ್ಯನ ಪ್ರತಿಮೆಯ ಪರೀಕ್ಷಣೆ !

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ ‘ಯು.ಎ.ಎಸ್. (ಯುನಿವರ್ಸಲ್‌ ಔರಾ ಸ್ಕ್ಯಾನರ್‌)’ ಈ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ

‘ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿ ಸೂರ್ಯದೇವತೆಯ ಒಂದು ಪ್ರತಿಮೆಯನ್ನು ಇಡಲಾಗಿದೆ. ಈ ಸೂರ್ಯನ ಪ್ರತಿಮೆಗೆ ಬಣ್ಣವನ್ನು ಹಚ್ಚಲಾಗಿದೆ. ಸೂರ್ಯನ ಪ್ರತಿಮೆಗೆ ಬಣ್ಣ ಹಚ್ಚುವ ಮೊದಲು ಮತ್ತು ಬಣ್ಣ ಹಚ್ಚಿದ ನಂತರ ಅದರಲ್ಲಿ ಆಗಿರುವ ಬದಲಾವಣೆಯ ಅಧ್ಯಯನವನ್ನು ಮಾಡಲಾಯಿತು. ಈ ಬದಲಾವಣೆಯನ್ನು ‘ಯು.ಎ.ಎಸ್. (ಯುನಿವರ್ಸಲ್‌ ಔರಾ ಸ್ಕ್ಯಾನರ್‌)’ ನ ಮೂಲಕ ಅಧ್ಯಯನ ಮಾಡಿ ಅದರ ನೋಂದಣಿಯನ್ನು ಮಾಡಲಾಯಿತು. ಇದರೊಂದಿಗೆ ಸೂರ್ಯನ ಪ್ರತಿಮೆಯ ಸೂಕ್ಷ್ಮ ಪರೀಕ್ಷಣೆಯನ್ನೂ ಮಾಡಲಾಯಿತು. ಇವೆರಡರ ವಿಶ್ಲೇಷಣೆಯನ್ನು ಇಲ್ಲಿ ಕೊಡುತ್ತಿದ್ದೇವೆ.

ಪರೀಕ್ಷಣೆಯ ನಿಷ್ಕರ್ಷ

ಸೌ. ಮಧುರಾ ಧನಂಜಯ ಕರ್ವೆ

ಸೂರ್ಯನ ಪ್ರತಿಮೆಗೆ ಬಣ್ಣ ವನ್ನು ಹಚ್ಚಿದ ನಂತರ ಸೂರ್ಯನ ಪ್ರತಿಮೆಯ ನಕಾರಾತ್ಮಕ ಊರ್ಜೆಯ ಪ್ರಮಾಣವು ಕಡಿಮೆಯಾಗಿ ಅದರಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಮಾಣವು ಹೆಚ್ಚಾಯಿತು. – ಸೌ. ಮಧುರಾ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨.೭.೨೦೨೩)

ಸೂರ್ಯನ ಪ್ರತಿಮೆಯ ಸೂಕ್ಷ್ಮ ಪರೀಕ್ಷಣೆ

೧. ಸೃಷ್ಟಿಯಲ್ಲಿ ಕಾರ್ಯನಿರತವಿರುವ ಪಂಚತತ್ತ್ವಗಳ ಗುಣವೈಶಿಷ್ಟ್ಯಗಳು ಮತ್ತು ಅವುಗಳಿಗೆ ಸಂಬಂಧಿತ ದೇವತೆಗಳು

ಟಿಪ್ಪಣಿ – ‘ಸೂರ್ಯನು ತೇಜದ ವ್ಯಾಪಕ, ಸಮಷ್ಟಿ ಮತ್ತು ಸಗುಣ ಪ್ರತೀಕನಾಗಿದ್ದಾನೆ ಮತ್ತು ‘ಅಗ್ನಿ’ಯು ತೇಜದ ಲಘು, ವ್ಯಷ್ಟಿ ಮತ್ತು ಸೂಕ್ಷ್ಮ ರೂಪಗಳ ಪ್ರತೀಕವಾಗಿದೆ.

೨. ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿನ ಸೂರ್ಯನ ಪ್ರತಿಮೆಯ ಸಂದರ್ಭದಲ್ಲಿ ಮಾಡಿದ ಸಂಶೋಧನೆ ಮತ್ತು ಅದರ ಹಿಂದಿನ ಅಧ್ಯಾತ್ಮಶಾಸ್ತ್ರ !

ಕು. ಮಧುರಾ ಭೋಸಲೆ

೨ ಅ. ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿನ ಸೂರ್ಯನ ಪ್ರತಿಮೆಯಲ್ಲಿ ನಕಾರಾತ್ಮಕ ಸ್ಪಂದನಗಳು ಕಂಡುಬರುವುದರ ಹಿಂದಿನ ಆಧ್ಯಾತ್ಮಿಕ ಕಾರ್ಯಕಾರಣಭಾವ

ಸೂರ್ಯದೇವತೆಯಲ್ಲಿ ‘ಆಕರ್ಷಣೆ’ ಮತ್ತು ‘ಪ್ರಕ್ಷೇಪಣೆ’ ಈ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಯಾವಾಗ ಅವನ ಆಕರ್ಷಣಾ ಶಕ್ತಿ ಕಾರ್ಯನಿರತವಾಗಿರುತ್ತದೆಯೋ, ಆಗ ವಾತಾವರಣದಲ್ಲಿನ ನಕಾರಾತ್ಮಕ ಸ್ಪಂದನಗಳು ಸೂರ್ಯನ ಪ್ರತಿಮೆಯ ಕಡೆಗೆ ಆಕರ್ಷಿತವಾಗುತ್ತವೆ ಮತ್ತು ಯಾವಾಗ ಅವನಲ್ಲಿ ಪ್ರಕ್ಷೇಪಣೆಯ ಕ್ಷಮತೆ ಜಾಗೃತವಾಗುತ್ತದೆಯೋ, ಆಗ ಅವನಿಂದ ಸಂಪೂರ್ಣ ವಾತಾವರಣದಲ್ಲಿ ಸಕಾರಾತ್ಮಕ ಊರ್ಜೆ ಮತ್ತು ಚೈತನ್ಯ ಪ್ರಕ್ಷೇಪಣೆಯಾಗುತ್ತದೆ. ಸೂರ್ಯದೇವತೆಯ ‘ಆಕರ್ಷಣಾ’ ಶಕ್ತಿಯಿಂದ ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮಹಾಮೃತ್ಯುಯೋಗದ ಛಾಯೆ ಯಿಂದ ಉದ್ಭವಿಸಿದ ಮತ್ತು ವಾತಾವರಣದಲ್ಲಿ ಕಾರ್ಯನಿರತವಾಗಿರುವ ನಕಾರಾತ್ಮಕ ಸ್ಪಂದನಗಳು ಸೂರ್ಯನ ಪ್ರತಿಮೆಯ ಕಡೆಗೆ ಆಕರ್ಷಿತವಾದವು. ಆದ್ದರಿಂದ ಸೂರ್ಯನ ಪ್ರತಿಮೆಯಲ್ಲಿ ನಕಾರಾತ್ಮಕ ಊರ್ಜೆ ಕಂಡುಬಂದಿತು.

೨ ಆ. ಸೂರ್ಯನ ಪ್ರತಿಮೆಗೆ ಬಣ್ಣವನ್ನು ಹಚ್ಚಿದ ನಂತರ ಅದರಲ್ಲಿನ ನಕಾರಾತ್ಮಕ ಊರ್ಜೆ ಕಡಿಮೆಯಾಗಿ ಅದರಲ್ಲಿನ ಸಕಾರಾತ್ಮಕ ಊರ್ಜೆ ಹೆಚ್ಚಾಗುವುದರ ಹಿಂದಿನ ಆಧ್ಯಾತ್ಮಿಕ ಕಾರ್ಯಕಾರಣಭಾವ

ಯಾವುದೇ ವಸ್ತುವಿನ ಆಕಾರವು ಸಗುಣ ತೇಜತತ್ತ್ವಕ್ಕೆ ಮತ್ತು ಅದರ ಬಣ್ಣವು ಸಗುಣ-ನಿರ್ಗುಣ ತೇಜತತ್ತ್ವಕ್ಕೆ ಸಂಬಂಧಿಸಿರುತ್ತದೆ. ಅಷ್ಟೇ ಅಲ್ಲ, ತೇಜತತ್ತ್ವದಿಂದಾಗಿಯೇ ಯಾವುದಾದರೊಂದು ವಸ್ತುವಿಗೆ ಆಕಾರ ಪ್ರಾಪ್ತವಾಗುತ್ತದೆ ಮತ್ತು ಬಣ್ಣದಿಂದ ಯೋಗ್ಯರೂಪ ಪ್ರಾಪ್ತವಾಗುತ್ತದೆ. ಸೂರ್ಯನು ತೇಜತತ್ತ್ವಕ್ಕೆ ಸಂಬಂಧಿಸಿದ ದೇವತೆಯಾಗಿದ್ದಾನೆ. ಆದ್ದರಿಂದ ಯಾವಾಗ ಸೂರ್ಯನ ಪ್ರತಿಮೆಗೆ ಬಣ್ಣವನ್ನು ಹಚ್ಚಲಾಯಿತೋ, ಆಗ ಆ ಬಣ್ಣದತ್ತ ಸೂರ್ಯದೇವತೆಯ ತತ್ತ್ವವು ತೇಜತತ್ತ್ವದ ಸ್ತರದಲ್ಲಿ ಆಕರ್ಷಿತವಾಗಿ ಅದು ಆ ಪ್ರತಿಮೆಯಲ್ಲಿ ಕಾರ್ಯನಿರತವಾಯಿತು. ಈ ಪ್ರತಿಮೆಯಲ್ಲಿ ಸೂರ್ಯದೇವತೆಯ ‘ಪ್ರಕ್ಷೇಪಣೆ’ ಎಂಬ ದೈವೀ ಶಕ್ತಿ ಕಾರ್ಯನಿರತವಾಯಿತು. ಆದ್ದರಿಂದ ಈ ಪ್ರತಿಮೆಯಿಂದ ತೇಜತತ್ತ್ವದ ಸ್ತರದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ವಾತಾವರಣದಲ್ಲಿ ಪ್ರಕ್ಷೇಪಿತವಾಗಿ ಅದರಲ್ಲಿ ಆಕರ್ಷಿತವಾಗಿರುವ ತೊಂದರೆದಾಯಕ (ಕಪ್ಪು) ಶಕ್ತಿ ಹಾಗೂ ತೇಜತತ್ತ್ವದ ನಡುವೆ ಸೂಕ್ಷ ಸ್ತರದ ಯುದ್ಧವಾಯಿತು. ಆದ್ದರಿಂದ ಸೂರ್ಯನ ಪ್ರತಿಮೆಗೆ ಬಣ್ಣ ಹಚ್ಚಿದ ನಂತರ ಅದರಲ್ಲಿನ ನಕಾರಾತ್ಮಕ ಊರ್ಜೆ ಕಡಿಮೆಯಾಗಿ ಅದರಲ್ಲಿನ ಸಕಾರಾತ್ಮಕ ಊರ್ಜೆ ಹೆಚ್ಚಾಯಿತು.

ಸೂರ್ಯನ ಪ್ರತಿಮೆಯ ಉದಾಹರಣೆಯಿಂದ ದೈವೀ ಶಕ್ತಿಗಳ ಮತ್ತು ಕೆಟ್ಟ ಶಕ್ತಿಗಳ ನಡುವಿನ ಸಗುಣ-ನಿರ್ಗುಣ ಸ್ತರದ ಯುದ್ಧದಲ್ಲಿ ತೇಜತತ್ತ್ವದ ಸ್ತರದಲ್ಲಿ ಕೆಟ್ಟ ಶಕ್ತಿಗಳು ಸೋಲಿಸಲ್ಪಟ್ಟವು ಎಂಬುದು ಸಿದ್ಧವಾಯಿತು.’ (೪.೭.೨೦೨೩)

– ಕು. ಮಧುರಾ ಭೊಸಲೆ (ಸೂಕ್ಷ್ಮದಿಂದ ದೊರಕಿದ ಜ್ಞಾನ), (ಆಧ್ಯಾತ್ಮಿಕ ಮಟ್ಟ ಶೇ. ೬೫), ಸನಾತನ ಆಶ್ರಮ, ರಾಮನಾಥಿ, ಗೋವಾ.