ಪ್ರಸ್ತಾವನೆಯನ್ನು ಸಹ ಅಂಗಿಕಾರ
ಅಮೃತಸರ (ಪಂಜಾಬ್) – ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಇವರು ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ನ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಮೇಲೆ ಆರೋಪಿಸಿದ್ದಾರೆ. ಈ ಆರೋಪಗಳನ್ನು ಪಂಜಾಬ್‌ನ ಶಿರೋಮಣಿ ಗುರುದ್ವಾರ ನಿರ್ವಹಣಾ ಸಮಿತಿ (ಎಸ್.ಜಿ.ಪಿ.ಸಿ.ಯು) ಬೆಂಬಲಿಸಿದೆ. ಎಸ್.ಜಿ.ಪಿ.ಸಿ. ಈ ನಿಟ್ಟಿನಲ್ಲಿ ಪ್ರಸ್ತಾವನೆಯನ್ನು ಅಂಗೀಕರಿಸಿದೆ.
🚨 SGPC expresses concern over Canada’s allegations against India 🇮🇳🇨🇦
– PM Trudeau’s statements shouldn’t be dismissed
– Condemns hate propaganda against Sikhs
– Urges Indian govt to take action against those tarnishing Sikhs’ imagehttps://t.co/75R7KUCVBB
— Swarajya (@SwarajyaMag) September 26, 2023
1. ಎಸ್.ಜಿ.ಪಿ.ಸಿ. ಯು ಟ್ವೀಟ್ ಮಾಡುತ್ತಾ, ಇಂದು (ಸೆಪ್ಟೆಂಬರ್ 25, 2023) ತನ್ನ ಕಾರ್ಯಕಾರಿ ಸಭೆಯಲ್ಲಿ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ತಮ್ಮ ಸಂಸತ್ತಿನಲ್ಲಿ ಮಾಡಿದ ಆರೋಪಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಲಿನ ನಿವಾಸಿ ಸಿಖ್ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತೀಯ ಏಜೆನ್ಸಿಗಳ ಅಧಿಕಾರಿಗಳು ಭಾಗಿಯಾಗಿದ್ದಾರೆ. (ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯ ಬಳಿ ಈ ಬಗ್ಗೆ ಏನಾದರೂ ಸಾಕ್ಷ್ಯವಿದೆಯೇ ? ಇಲ್ಲದಿದ್ದರೆ, ಅವರು ಈ ಬಗ್ಗೆ ಕ್ಷಮೆಯಾಚಿಸಬೇಕು ಮತ್ತು ಇಲ್ಲದಿದ್ದರೆ ಸರಕಾರವು ಈ ಸಮಿತಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ! – ಸಂಪಾದಕರು)
2. ಎಸ್.ಜಿ.ಪಿ.ಸಿ. ಯ ಕಾರ್ಯಕಾರಣಿಯ ಅಧ್ಯಕ್ಷ ಹರ್ಜಿಂದರ್ ಸಿಂಹ ಧಾಮಿ ಇವರ ಅಧ್ಯಕ್ಷತೆಯ ಸಭೆಯಲ್ಲಿ ಅನುಮೋದಿಸಿದ ಪ್ರಸ್ತಾವನೆಯಲ್ಲಿ, ಕೆನಡಾದ ಪ್ರಧಾನಿ ಸಂಸತ್ತಿನಲ್ಲಿ ಹೇಳಿಕೆ ನೀಡುವುದು ಸಾಮಾನ್ಯವಲ್ಲ. ಭಾರತೀಯ ವ್ಯವಸ್ಥೆಗಳ ವಿರುದ್ಧ ಟ್ರೂಡೊ ಅವರ ಆರೋಪವನ್ನು ರಾಜಕೀಯವನ್ನು ಮೀರಿ ಪರಿಶೀಲಿಸಬೇಕು ಮತ್ತು ಸಾರ್ವಜನಿಕರ ಮುಂದೆ ತರಬೇಕು. ರಾಜಕೀಯ ಕಾರಣಗಳಿಗಾಗಿ ವಿಷಯವನ್ನು ಹತ್ತಿಕ್ಕಿದರೆ ಅದನ್ನು ಮಾನವ ಹಕ್ಕುಗಳ ಅನ್ಯಾಯವೆಂದು ಪರಿಗಣಿಸಲಾಗುವುದು. ಈ ಇಡೀ ಘಟನೆಯ ನಂತರ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳು ಸಿಖ್ ಮತ್ತು ಪಂಜಾಬ್ ವಿರುದ್ಧ ಉದ್ದೇಶಪೂರ್ವಕವಾಗಿ ದ್ವೇಷವನ್ನು ಹರಡುತ್ತಿವೆ. ಭಾರತ ಸರಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಸಿಖ್ಖರ ಪ್ರತಿಷ್ಠೆಗೆ ಕಳಂಕ ತರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಿಖ್ ಸಮಾಜವು ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ. ಪ್ರಸ್ತುತ ಸಮಾಜಗಳನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.
ಸಂಪಾದಕೀಯ ನಿಲುವುಭಾರತ ಸರಕಾರವು ಭಾರತದ ವಿರುದ್ಧ ಆಧಾರರಹಿತ ಆರೋಪ ಮಾಡುವವರನ್ನು ಬೆಂಬಲಿಸುವ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯಿಂದ ಸ್ಪಷ್ಟೀಕರಣ ಕೇಳಬೇಕು ! ಖಲಿಸ್ತಾನಿ ಭಯೋತ್ಪಾದನೆಯ ಪರವಾಗಿ ಮಾತನಾಡುವ ಈ ಸಮಿತಿಯ ತನಿಖೆ ಮಾಡಿ, ಅದರಲ್ಲಿ ಖಲಿಸ್ತಾನಿ ಸಿದ್ಧಾಂತವುಳ್ಳವರು ಕಂಡುಬಂದರೆ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ! |