ನಟ ಕಮಲ ಹಾಸನ ಇವರಿಂದ ಉದಯನಿಧಿಯ ರಕ್ಷಣೆ !
ಚೆನ್ನೈ (ತಮಿಳುನಾಡು) – ಓರ್ವ ಹುಡುಗನನ್ನು ಕಾರಣವಿಲ್ಲದೆ ಸನಾತನ ಧರ್ಮದ ಬಗ್ಗೆ ಕೇವಲ ಹೇಳಿಕೆ ನೀಡಿದ್ದಾನೆ ಎಂದು ಗುರಿ ಮಾಡಲಾಗುತ್ತಿದೆ; ಅವರ ಪೂರ್ವಜರು ಕೂಡ ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿದ್ದರು. ದ್ರಮುಕದ (ದ್ರವಿಡ ಮುನೇತ್ರ ಕಳಘಂ – ದ್ರವಿಡ ಪ್ರಗತಿ ಸಂಘದ ) ಸಂಸ್ಥಾಪಕ ಪೆರಿಯಾರ್ ಇವರು ಕೂಡ ಸನಾತನ ಧರ್ಮದ ಬಗ್ಗೆ ವಿಚಾರ ಮಂಡಿಸಿದ್ದರು, ಎಂದು ನಟ ಕಮಲ ಹಾಸನ ಇವರು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ ಇವರ ಪುತ್ರ ಮತ್ತು ಸಚಿವ ಉದಯನಿಧಿ ಇವರನ್ನು ರಕ್ಷಿಸಿದರು. ಉದಯನಿಧಿ ಸತತವಾಗಿ ಸನಾತನ ಧರ್ಮವನ್ನು ಮುಗಿಸುವುದರ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. (ಹಿಂದೆ ಕೂಡ ಸನಾತನ ಧರ್ಮದ ವಿರುದ್ಧ ಮಾತನಾಡುವವರನ್ನು ಹಿಂದುಗಳು ಹೆಚ್ಚು ಕಡಿಮೆ ಪ್ರಮಾಣದಲ್ಲಿ ವಿರೋಧಿಸಿದ್ದಾರೆ ಮತ್ತು ಈಗಲೂ ಕೂಡ ಯಾರಾದರೂ ಮಾತನಾಡುತ್ತಿದ್ದರೆ ಕಾನೂನು ರೀತಿಯಲ್ಲಿ ವಿರೋಧ ಮಾಡಲಾಗುವುದು ! – ಸಂಪಾದಕರು)
ಕಮಲ ಹಾಸನ ಮಾತು ಮುಂದುವರಿಸಿ,
೧. ಪೆರಿಯಾರ್ ಒಂದು ಕಾಲದಲ್ಲಿ ವಾರಣಾಸಿಯಲ್ಲಿನ ಒಂದು ದೇವಸ್ಥಾನದಲ್ಲಿ ವಾಸಿಸುತ್ತಿದ್ದರು ಮತ್ತು ಅಲ್ಲಿ ಪೂಜೆ ಅರ್ಚನೆ ಮಾಡುತ್ತಿದ್ದರು. ಅವರು ಹಣೆಗೆ ಬೋಟ್ಟನ್ನು ಇಡುತ್ತಿದ್ದರು. ಅವರು ನಂತರ ಎಲ್ಲವನ್ನು ತ್ಯಾಗ ಮಾಡಿದರು. ಇದರಿಂದ ಅವರಿಗೆ ಸನಾತನ ಧರ್ಮದ ಬಗ್ಗೆ ಎಷ್ಟು ಸಿಟ್ಟು ಇತ್ತು ಎನ್ನುವುದು ಗಮನಕ್ಕೆ ಬರುತ್ತದೆ. (ಪೆರಿಯಾರ್ ಇವರು ಕೆಲವು ಜನರ ಅಯೋಗ್ಯ ಕೃತಿಯಿಂದ ಸಂಪೂರ್ಣ ಸನಾತನ ಧರ್ಮವನ್ನು ಅಯೋಗ್ಯ ಎಂದು ನಿಶ್ಚಯಿಸಿ ಅದೆಲ್ಲವನ್ನು ತ್ಯಾಗ ಮಾಡಿದರು, ಹೇಗೆ ಅವರ ಜೀವನದಿಂದ ತಿಳಿದು ಬರುತ್ತದೆ ! ಇದರಿಂದ ಅವರು ಧರ್ಮದ ಅಧ್ಯಯನ ಮಾಡಲಿಲ್ಲ ಮತ್ತು ಅವರಿಗೆ ಸನಾತನ ಧರ್ಮದ ಮಹಾನತೆ ತಿಳಿಯಲೇ ಇಲ್ಲ, ಇದೇ ಇದರಿಂದ ಗಮನಕ್ಕೆ ಬರುತ್ತದೆ ! – ಸಂಪಾದಕರು)
೨. ಜನರ ಸೇವೆ ಮಾಡುವುದು ಇದೇ ಎಲ್ಲಕ್ಕಿಂತ ಮಹಾನ್ ಸೇವೆ ಆಗಿದೆ, ಇದರ ಅರಿವು ಪೆರಿಯಾರ್ ಇವರಿಗೆ ಆಗಿತ್ತು. ಜೀವನದ ಕೊನೆಯವರೆಗೆ ಅವರು ಸಮಾಜಕ್ಕಾಗಿ ಬದುಕಿದರು. (ಪೆರಿಯಾರ್ ಸಮಾಜಕ್ಕಾಗಿ ಬದುಕುವಾಗ ಸಮಾಜದಲ್ಲಿ ವೈಚಾರಿಕ ದ್ವೇಷ ಪಸರಿಸುತ್ತಾ ಇದ್ದರು, ಇದು ಕೂಡ ಅಷ್ಟೇ ಸತ್ಯವಾಗಿದೆ ! – ಸಂಪಾದಕರು)
೩. ಪೆರಿಯಾರ್ ಇವರ ಮೇಲೆ ದ್ರಮುಕ ಅಥವಾ ಇತರ ಯಾವುದೇ ರಾಜಕೀಯ ಪಕ್ಷ ದಾವೆ ಮಾಡಲು ಸಾಧ್ಯವಿಲ್ಲ; ಕಾರಣ ಪೆರಿಯಾರ್ ಇವರನ್ನು ಸಂಪೂರ್ಣ ತಮಿಳುನಾಡಿನಲ್ಲಿ ಗೌರವಿಸಲಾಗುತ್ತದೆ. (ಸಂಪೂರ್ಣ ತಮಿಳನಾಡಿನಲ್ಲಿ ಅಲ್ಲ, ಸನಾತನ ಧರ್ಮದ ದ್ವೇಷ ಮಾಡುವವರಲ್ಲಿ ಅವರನ್ನು ಗೌರವಿಸಲಾಗುತ್ತದೆ, ಇದನ್ನು ತಿಳಿದುಕೊಳ್ಳಿ ! – ಸಂಪಾದಕರು)
ಸಂಪಾದಕೀಯ ನಿಲುವುಉದಯನಿಧಿ ಇವರು ಉದ್ದೇಶಪೂರ್ವಕವಾಗಿ ಸನಾತನ ಧರ್ಮವನ್ನು ನಾಶ ಮಾಡುವ ಮಾತನಾಡಿರುವುದರಿಂದ ಅವರನ್ನು ಟೀಕಿಸಲಾಗುತ್ತಿದೆ, ಇದನ್ನು ಕಮಲ ಹಾಸನ ಇವರು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದ್ದಾರೆ ! ಯಾರಾದರೂ ದ್ರಮುಕ ಹಾಗೂ ಪೆರಿಯಾರ್ ಇವರ ವಿಚಾರಧಾರೆ ಮುಗಿಸುವ ಹೇಳಿಕೆ ನೀಡಿದರೆ, ಆಗ ಕಮಲ ಹಾಸನ, ಉದಯನಿಧಿ ಮುಂತಾದ ಜನರು ಅದನ್ನು ಶಾಂತಿಯಿಂದ ಸ್ವೀಕರಿಸುವರೆ ? |